ಸಚಿನ್ ಹೇಳಿದ್ದನ್ನು ನಿಜ ಮಾಡಿದ ವಿರಾಟ್ ಕೊಹ್ಲಿ ಹುಡುಗರು

ಬ್ರಿಸ್ಟೋಲ್, ಮಂಗಳವಾರ, 10 ಜುಲೈ 2018 (09:30 IST)


ಬ್ರಿಸ್ಟೋಲ್: ಸಚಿನ್ ತೆಂಡುಲ್ಕರ್ ರನ್ನು ಕ್ರಿಕೆಟ್ ದೇವರು ಎಂದೇ ಎಲ್ಲರೂ ಕರೆಯುತ್ತಾರೆ. ಆದರೆ ಇಂಗ್ಲೆಂಡ್ ವಿರುದ್ಧ ಮೂರನೇ ಟಿ20 ಪಂದ್ಯದ ನಂತರ ಅವರನ್ನು ಉತ್ತಮ ಜ್ಯೋತಿಷಿ ಎಂದರೂ ತಪ್ಪಾಗಲಾರದು.
 
ಮೂರನೇ ಟಿ20 ಪಂದ್ಯದಲ್ಲಿ ಭಾರತ ಗೆಲುವು ಕಾಣಬಹುದು ಎಂದು ಎಲ್ಲರೂ ಲೆಕ್ಕಾಚಾರ ಹಾಕಿರಬಹುದು. ಆದರೆ ಸಚಿನ್ ಭಾರತ ಎಷ್ಟನೇ ಓವರ್ ನಲ್ಲಿ ಗೆಲ್ಲಬಹುದು ಎಂದು ಮೊದಲೇ ಭವಿಷ್ಯ ನುಡಿದಿದ್ದರು. ಅದು ನಿಜವಾಯಿತು!
 
ಭಾರತ ಬ್ಯಾಟಿಂಗ್ ಆರಂಭಿಸಿದಾಗ ಟ್ವೀಟ್ ಮಾಡಿದ್ದ ಸಚಿನ್ ಟೀಂ ಇಂಡಿಯಾ 19 ನೇ ಓವರ್ ನಲ್ಲಿ ಗೆಲ್ಲಬಹುದು. ನೀವೇನಂತೀರಿ ಎಂದು ಟ್ವಿಟರಿಗರಿಗೆ ಸವಾಲು ಹಾಕಿದ್ದರು. ಇದಕ್ಕೆ ಶೇ. 80 ಮಂದಿ ಸಚಿನ್ ಹೇಳಿಕೆಯನ್ನು ಸಮರ್ಥಿಸಿ ವೊಟ್ ಮಾಡಿದ್ದರು.
 
ಅದರಂತೆ ಭಾರತ 18.4 ಓವರ್ ನಲ್ಲಿ ಅಂದರೆ 19 ನೇ ಓವರ್ ನಲ್ಲಿ ಗೆಲುವು ಸಾಧಿಸಿತು. ಹೀಗಾಗಿ ಪಂದ್ಯದ ನಂತರ ಟ್ವೀಟ್ ಮಾಡಿದ ಸಚಿನ್ ಅಂತೂ ನನ್ನ ಭವಿಷ್ಯ ನಿಜವಾಯಿತು ಎಂದು ಟೀಂ ಇಂಡಿಯಾ ಹುಡುಗರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಪಾಕಿಸ್ತಾನ ಕ್ರಿಕೆಟಿಗರನ್ನು ಹೊಗಳಿ ಸಂಕಷ್ಟಕ್ಕೀಡಾದ ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಕೈಫ್

ನವದೆಹಲಿ: ಸೂರ್ಯ ನಮಸ್ಕಾರ ಮಾಡಿ ಮುಸ್ಲಿಂ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಟೀಂ ಇಂಡಿಯಾದ ...

news

ನಕಲಿ ಡಿಗ್ರಿ ಸರ್ಟಿಫಿಕೇಟ್ ಕೊಟ್ಟು ವಂಚನೆ ಮಾಡಿದರೇ ಟೀಂ ಇಂಡಿಯಾ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್?

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಹೊಸ ಸಂಚಲನ ಮೂಡಿಸಿದ್ದ ಹೊಡೆ ಬಡಿಯ ಆಟಗಾರ್ತಿ ಹರ್ಮನ್ ...

news

ಹಿಂದೆಂದೂ ಮಾಡದ ಸಾಧನೆ ಮಾಡಿದ ಕೆಎಲ್ ರಾಹುಲ್

ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಮೊನ್ನೆ ಇಂಗ್ಲೆಂಡ್ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ...

news

ಮೈದಾನದಲ್ಲಿ ಹಾಜರಿರುವ ಭಾರತೀಯ ಅಭಿಮಾನಿಗಳ ಬಗ್ಗೆ ಇಂಗ್ಲೆಂಡ್ ನಾಯಕ ಹೇಳಿದ್ದೇನು?

ಬ್ರಿಸ್ಟೋಲ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಟಿ20 ಸರಣಿ ನಡೆದಿದ್ದು ಇಂಗ್ಲೆಂಡ್ ನಲ್ಲಿಯೇ ಆದರೂ ಟೀಂ ...

Widgets Magazine