ಜೇಮ್ಸ್ ಆಂಡರ್ಸನ್ ಮುಂದೆ ಟೀಂ ಇಂಡಿಯಾ ಬೆತ್ತಲೆ!

ಲಾರ್ಡ್ಸ್, ಶುಕ್ರವಾರ, 10 ಆಗಸ್ಟ್ 2018 (16:06 IST)

ಲಾರ್ಡ್ಸ್: ಒಬ್ಬ ಒಳ್ಳೆಯ ಬೌಲರ್ ಮುಂದೆ ಎಂತಹಾ ಬ್ಯಾಟ್ಸ್ ಮನ್ ಆದರೂ ಕೆಲ ಕಾಲ ಪರೀಕ್ಷೆಗೊಳಗಾಲೇಬೇಕು. ಟೀಂ ಇಂಡಿಯಾದ ಬ್ಯಾಟಿಂಗ್ ಯಾವ ಲೆಕ್ಕ? ವಿಶ್ವದ ನಂ.1 ಬೌಲರ್ ಜೇಮ್ಸ್ ಆಂಡರ್ಸನ್ ಮುಂದೆ ಟೀಂ ಇಂಡಿಯಾ ಮಂಡಿಯೂರಿ ಕುಳಿತಿದೆ.
 

ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಪರಿಸ್ಥಿತಿ ಮೊದಲ ಟೆಸ್ಟ್ ಪಂದ್ಯಕ್ಕಿಂತಲೂ ಹೀನಾಯವಾಗಿತ್ತು.
 
ಮೊದಲ ಓವರ್ ಎಸೆಯಲು ಬಂದ ಜೇಮ್ಸ್ ಆಂಡರ್ಸನ್ ಐದನೇ ಎಸೆತದಲ್ಲಿ ಮುರಳಿ ವಿಜಯ್ ರನ್ನು ಶೂನ್ಯಕ್ಕೆ ಔಟ್ ಮಾಡಿದರು. ಇದಾದ ಬಳಿಕ ಮೂರು ಓವರ್ ಭಾರತೀಯ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ಧೈರ್ಯವೇ ಮಾಡಲಿಲ್ಲ. ಮೊದಲೇ ವೇಗಿಗಳ ಪಿಚ್. ಅದರಲ್ಲೂ ಮಳೆ ಸುರಿದು ಇನ್ನಷ್ಟು ವೇಗಿಗಳಿಗೆ ಸಹಕಾರಿಯಾಗಿದೆ.
 
ಹೀಗಾಗಿ  ಕಳಪೆ ಫಾರ್ಮ್ ನಲ್ಲಿರುವ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ರನ್ ಗಳಿಸುವುದಕ್ಕಿಂತ ಹೆಚ್ಚು ವಿಕೆಟ್ ಪಟ ಪಟನೇ ಉರುಳಿಸುವುದರಲ್ಲಿದ್ದಾರೆ. ಆರು ಓವರ್ ಆಗುವಷ್ಟರಲ್ಲಿ ಆರಂಭಿಕ ಕೆಎಲ್ ರಾಹುಲ್ ಕೂಡಾ ಕೇವಲ 8 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಇನ್ನೇನು ಇನ್ನೂ 10 ಓವರ್ ಎಸೆದರೆ ಇಡೀ ಟೀಂ ಇಂಡಿಯಾವೇ ಗಂಟು ಮೂಟೆ ಕಟ್ಟಿ ಪೆವಿಲಿಯನ್ ಸೇರುತ್ತದೋ ಎನ್ನುವಷ್ಟರಲ್ಲಿ ಮಳೆ ಬಂದು ಮಾನ ಕಾಪಾಡಿದೆ.  ಸದ್ಯಕ್ಕೆ ಆಟ ಸ್ಥಗಿತಗೊಂಡಿದ್ದು, ಮಳೆ ನಿಲ್ಲುವವರೆಗೂ ಕಾಯಬೇಕಿದೆ. ಸದ್ಯಕ್ಕೆ ಭಾರತದ ಸ್ಕೋರ್ 2 ವಿಕೆಟ್ ನಷ್ಟಕ್ಕೆ 11 ರನ್.
 
ಇಂದಿನ ಪಂದ್ಯದಲ್ಲಿ ಕುಲದೀಪ್ ಯಾದವ್ ಮತ್ತು ಚೇತೇಶ್ವರ ಪೂಜಾರ, ಉಮೇಶ್ ಯಾದವ್ ಮತ್ತು ಶಿಖರ್ ಧವನ್ ಸ್ಥಾನದಲ್ಲಿ ಆಡುತ್ತಿದ್ದಾರೆ. ಯಾರು ಬಂದರೂ ಯಾರೇ ಹೋದರೂ ಟೀಂ ಇಂಡಿಯಾ ಪರಿಸ್ಥಿತಿ ಬದಲಾಗಿಲ್ಲ ಎನ್ನುವುದು ವಿಪರ್ಯಾಸ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      ಇದರಲ್ಲಿ ಇನ್ನಷ್ಟು ಓದಿ :  
ಟೀಂ ಇಂಡಿಯಾ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ Team India Cricket News Sports News India-england Test Series

ಕ್ರಿಕೆಟ್‌

news

ಪಂದ್ಯಕ್ಕೂ ಮೊದಲೇ ಬಯಲಾಯ್ತಾ ಟೀಂ ಇಂಡಿಯಾ ರಹಸ್ಯ?!

ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ದ್ವಿತೀಯ ಟೆಸ್ಟ್ ಪಂದ್ಯವಾಡುವ ಮೊದಲೇ ತಂಡದ ಆಟಗಾರರ ಬಗ್ಗೆ ...

news

ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಸೋಷಿಯಲ್ ಮೀಡಿಯಾದಲ್ಲಿ ಈ ಪರಿ ಟ್ರೋಲ್ ಆಗಿದ್ದು ಏಕೆ?

ಲಾರ್ಡ್ಸ್: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಒಂದು ಫೋಟೋದಿಂದಾಗಿ ಭಾರೀ ...

news

ಇವರಿಲ್ಲದೇ ಕ್ರಿಕೆಟಿಗ ಕೆಎಲ್ ರಾಹುಲ್ ಗೆ ಜೀವನವೇ ಇಲ್ವಂತೆ!

ಲಾರ್ಡ್ಸ್: ಸದ್ಯಕ್ಕೆ ಟೀಂ ಇಂಡಿಯಾದ ಮೋಸ್ಟ್ ವಾಂಟೆಡ್ ಕ್ರಿಕೆಟಿಗರಲ್ಲಿ ಕೆಎಲ್ ರಾಹುಲ್ ಕೂಡಾ ಒಬ್ಬರು. ...

news

ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್ ಮೊದಲ ದಿನದಾಟ ರದ್ದುಗೊಂಡಿದ್ದರಿಂದ ನಷ್ಟವಾಗಿದ್ದು ಸಚಿನ್ ತೆಂಡುಲ್ಕರ್ ಗೆ!

ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಲಾರ್ಡ್ಸ್ ಮೈದಾನದಲ್ಲಿ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದ ...

Widgets Magazine
Widgets Magazine