ಐತಿಹಾಸಿಕ ಪಂದ್ಯದಲ್ಲಿ ಮನೀಶ್ ಪಾಂಡೆಗೆ ಸಿಗುತ್ತಾ ಛಾನ್ಸ್!

ಪೋರ್ಟ್ ಎಲಿಜೆಬತ್, ಮಂಗಳವಾರ, 13 ಫೆಬ್ರವರಿ 2018 (04:49 IST)

ಪೋರ್ಟ್ ಎಲಿಜೆಬತ್: ಕಾಮನಬಿಲ್ಲಿನ ನಾಡಿನಲ್ಲಿ ಹೊಸದೊಂದು ಇತಿಹಾಸ ರಚಿಸಲು ಸಿದ್ಧವಾಗಿರುವ ಟೀಂ ಇಂಡಿಯಾ ಇಂದು ಐದನೇ ಏಕದಿನ ಆಡಲು ಸಜ್ಜಾಗಿದೆ.
 

ಆದರೆ ಭಾರತ ತಂಡಕ್ಕೆ ಕಳೆದ ಪಂದ್ಯದಲ್ಲಿ ಮಾಡಿದ್ದ ಸ್ವಯಂಕೃತ ಅಪರಾಧಗಳನ್ನು ತಿದ್ದಿಕೊಳ್ಳುವ ಅನಿವಾರ್ಯತೆಯಿದೆ. ಫೀಲ್ಡಿಂಗ್ ಮಾಡಿದ ತಪ್ಪುಗಳು, ಬೌಲಿಂಗ್ ನಲ್ಲಿ ತೋರಿದ ಬೇಜವಾಬ್ದಾರಿತನ ತಿದ್ದಿಕೊಳ್ಳಲೇಬೇಕಿದೆ.
 
ಕೊಹ್ಲಿ, ಧವನ್ ಆಟದಿಂದಾಗಿ ಭಾರತ ತಂಡದ ಬ್ಯಾಟಿಂಗ್ ಹುಳುಕು ಹೆಚ್ಚಾಗಿ ಹೊರ ಬಂದಿಲ್ಲ. ಹಾಗಿದ್ದರೂ ಮಧ್ಯಮ ಕ್ರಮಾಂಕ ಇನ್ನೂ ಸಿಡಿದಿಲ್ಲ. ಅಜಿಂಕ್ಯಾ ರೆಹಾನೆ, ಹಾರ್ದಿಕ್ ಪಾಂಡ್ಯ ತಮ್ಮ ಖ್ಯಾತಿಗೆ ತಕ್ಕ ಆಟವಾಡಿಲ್ಲ. ರೋಹಿತ್ ಶರ್ಮಾ ಕೂಡಾ ಪರದಾಡುತ್ತಿದ್ದಾರೆ. ಇದರಿಂದಾಗಿ ನಿರೀಕ್ಷೆಗೆ ತಕ್ಕ ರನ್ ಸ್ಕೋರ್ ಆಗುತ್ತಿಲ್ಲ. ಹೀಗಾಗಿ ರೆಹಾನೆಗೆ ಆರಂಭಿಕ ಸ್ಥಾನಕ್ಕೆ ಬಡ್ತಿ ನೀಡಿ ಕನ್ನಡಿಗ ಮನೀಶ್ ಪಾಂಡೆಗೆ ಮಧ್ಯಮ ಕ್ರಮಾಂಕದಲ್ಲಿ ಆಡುವ ಅವಕಾಶ ಸಿಗಬಹುದೇ ಎಂಬ ನಿರೀಕ್ಷೆ ಅಭಿಮಾನಿಗಳದ್ದು.
 
ಎಲ್ಲಾ ಹುಳುಕಳನ್ನು ಮೀರಿ ಇಂದು ಗೆಲ್ಲಲು ಸಾಧ್ಯವಾದರೆ ಭಾರತದ ಎದುರು ಹೊಸದೊಂದು ಇತಿಹಾಸ ತೆರೆಯಲಿದೆ. ಇದುವರೆಗೆ ಆಫ್ರಿಕಾ ನಾಡಿನಲ್ಲಿ ಮರೀಚಿಕೆಯಾಗಿದ್ದ ಸರಣಿ ಗೆಲುವು ಟೀಂ ಇಂಡಿಯಾ ಕೈ ವಶ ಮಾಡಿಕೊಳ್ಳಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐದನೇ ಏಕದಿನ ಗೆಲ್ಲಲು ಟೀಂ ಇಂಡಿಯಾಗೆ ಇದೊಂದೇ ಅಡ್ಡಿ!

ಪೋರ್ಟ್ ಆಫ್ ಎಲಿಜೆಬತ್: ಐದನೇ ಏಕದಿನ ಪಂದ್ಯ ಗೆದ್ದು ಸರಣಿ ಕೈ ವಶ ಮಾಡಿಕೊಂಡು ಇತಿಹಾಸ ನಿರ್ಮಿಸುವ ...

news

ಕೊಹ್ಲಿ ಕಣ್ಣೆದರಲ್ಲೇ ಅವರ ದಾಖಲೆ ನುಚ್ಚುನೂರು ಮಾಡಿದ ಶಿಖರ್ ಧವನ್!

ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ನಾಯಕ ಕೊಹ್ಲಿ ಎದುರೇ ...

news

ಆಫ್ರಿಕಾ ವಿಮಾನವೇರುವ ಮುನ್ನ ತಾನೇನೆಂದು ಸಾಬೀತುಪಡಿಸಿದ ಕೆಎಲ್ ರಾಹುಲ್

ಬೆಂಗಳೂರು: ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನದಿಂದ ಬೇಸತ್ತಿದ್ದ ಕೆಎಲ್ ರಾಹುಲ್ ಕೊನೆಗೂ ಲಯಕ್ಕೆ ...

news

ಕೆಎಲ್ ರಾಹುಲ್ ಗೆ ಕಾಡುತ್ತಿದೆ ಇದೊಂದೇ ಬೇಸರ!

ಬೆಂಗಳೂರು: ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿಯಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ವಿಫಲರಾದ ಕೆಎಲ್ ...

Widgets Magazine