ಇಂಗ್ಲೆಂಡ್ ವಿರುದ್ಧ ಟಿ20 ಸರಣಿಗೆ ಗೆದ್ದ ಟೀಂ ಇಂಡಿಯಾ ಮಾಡಿದ ದಾಖಲೆಗಳೇನು?

ಬ್ರಿಸ್ಟೋಲ್, ಸೋಮವಾರ, 9 ಜುಲೈ 2018 (08:51 IST)

ಬ್ರಿಸ್ಟೋಲ್: ಇಂಗ್ಲೆಂಡ್ ಪ್ರವಾಸದ ಮೊದಲ ಪುಟವನ್ನು ಟೀಂ ಇಂಡಿಯಾ ಯಶಸ್ವಿಯಾಗಿ ಮುಗಿಸಿದೆ. ಟಿ20 ಸರಣಿ ಗೆದ್ದು ಶುಭಾರಂಭ ಮಾಡಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಯಾವುದೆಲ್ಲಾ ದಾಖಲೆಗಳನ್ನು ಮಾಡಿತು ನೋಡೋಣ.
 
ರೋಹಿತ್ ಶರ್ಮಾ ನಿನ್ನೆ ಶತಕ ಗಳಿಸುವ ಮೂಲಕ ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಶತಕ ಗಳಿಸಿದ ಕ್ರಿಕೆಟಿಗರ ಪೈಕಿ ಎರಡನೆಯವರೆನಿಸಿದರು. ಕ್ಯಾಲಿನ್ ಮುನ್ರೋ ಮೂರು ಶತಕ ಗಳಿಸಿ ಗರಿಷ್ಠ ಶತಕ ಗಳಿಸಿದವರ ಪಟ್ಟಿಯಲ್ಲಿರುವ ಇನ್ನೊಬ್ಬ ಆಟಗಾರ. ಕೆಎಲ್ ರಾಹುಲ್ ಭಾರತದ ಪರ ಈ ಪಟ್ಟಿಯಲ್ಲಿ ಎರಡು ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಅಷ್ಟೇ ಅಲ್ಲದೆ, ಎಲ್ಲಾ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಮೂರು ಶತಕ ಗಳಿಸಿದ ಏಕೈಕ ಕ್ರಿಕೆಟಿಗ ಎಂಬ ದಾಖಲೆಯನ್ನೂ ರೋಹಿತ್ ಮಾಡಿದರು.
 
ಈ ಟಿ20 ಸರಣಿ ಗೆಲ್ಲುವ ಮೂಲಕ ಭಾರತ ಸತತ 6 ಟಿ20 ಸರಣಿಗಳನ್ನು ಗೆದ್ದ ದಾಖಲೆ ಮಾಡಿತು. ಪಾಕಿಸ್ತಾನ 9 ಸತತ ಸರಣಿ ಗೆಲುವುಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಭಾರತ ಇದೀಗ ದ್ವಿತೀಯ ಸ್ಥಾನದಲ್ಲಿದೆ. ಭಾರತ 198 ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡುವ ಮೂಲಕ ಮೂರನೇ ಬೆಸ್ಟ್ ಗರಿಷ್ಠ ರನ್ ಚೇಸಿಂಗ್ ಮಾಡಿತು. ಇನ್ನು ನಾಲ್ಕು ವಿಕೆಟ್ ಮತ್ತು 33 ರನ್ ಗಳೊಂದಿಗೆ ಜೀವನ ಶ್ರೇಷ್ಠ ಪ್ರದರ್ಶನ ತೋರಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಬ್ಯಾಟಿಂಗ್ ಬೌಲಿಂಗ್ ಮಾಡದೆಯೂ ಧೋನಿ ಅಂತಿಮ ಟಿ20 ಪಂದ್ಯದ ಹೀರೋ ಆಗಿದ್ದು ಹೇಗೆ ಗೊತ್ತಾ?!

ಬ್ರಿಸ್ಟೋಲ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಮತ್ತು ಅಂತಿಮ ಟಿ20 ಪಂದ್ಯವನ್ನು 7 ವಿಕೆಟ್ ಗಳಿಂದ ...

news

ಹಾರ್ದಿಕ್ ಪಾಂಡ್ಯ ಈಗ ಧೋನಿಯ ಹೇರ್ ಡ್ರೆಸ್ಸರ್!

ಬ್ರಿಸ್ಟೋಲ್: ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಧೋನಿ ಪುತ್ರಿ ಜೀವಾ ಜತೆಗೆ ಆಟವಾಡುವ ...

news

ಅನುಷ್ಕಾ ಶರ್ಮಾ ಟೀಂ ಇಂಡಿಯಾ ಕ್ರಿಕೆಟಿಗರ ಜತೆ ಹೇಗಿರ್ತಾರೆ ಗೊತ್ತಾ?!

ನವದೆಹಲಿ: ಸದ್ಯಕ್ಕೆ ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗರ ಜತೆ ಅವರ ಕುಟುಂಬದವರೂ ...

news

ಭಾರತ-ಇಂಗ್ಲೆಂಡ್ ಟಿ20 ಫೈನಲ್ ಇಂದು

ನವದೆಹಲಿ: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದು ಮೂರನೇ ಮತ್ತು ಅಂತಿಮ ಟಿ20 ಪಂದ್ಯ ನಡೆಯುತ್ತಿದ್ದು, ಸರಣಿ ...

Widgets Magazine
Widgets Magazine