ಯಾರೂ ಮಾಡದ ದಾಖಲೆ ಮಾಡುತ್ತಾ ಟೀಂ ಇಂಡಿಯಾ

ಪಲ್ಲೆಕೆಲೆ, ಶನಿವಾರ, 12 ಆಗಸ್ಟ್ 2017 (09:04 IST)

ಪಲ್ಲೆಕೆಲೆ: ದ್ವೀಪ ರಾಷ್ಟ್ರ ಪ್ರವಾಸ ಮಾಡಿರುವ ಟೀಂ ಇಂಡಿಯಾ ಇದುವರೆಗೆ ನಡೆದ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದು ಮೂರನೇ ಟೆಸ್ಟ್ ಗೆ ಸಜ್ಜಾಗಿದೆ. ಇದೀಗ ಯಾರೂ ಮಾಡದ ದಾಖಲೆ ನಿರ್ಮಿಸುವ ಉತ್ಸಾಹದಲ್ಲಿದೆ.


 
ಭಾರತ ತಂಡ ಇದುವರೆಗೆ ವಿದೇಶಗಳಲ್ಲಿ ಸರಣಿ ಗೆದ್ದಿದ್ದರೂ, ಕ್ಲೀನ್ ಸ್ವೀಪ್ ಮಾಡಿಕೊಂಡಿರಲಿಲ್ಲ. ಇದೀಗ ದುರ್ಬಲ ಲಂಕಾವನ್ನು ವೈಟ್ ವಾಶ್ ಮಾಡುವ ಮೂಲಕ ಮೊದಲ ಬಾರಿಗೆ ಈ ದಾಖಲೆ ಮಾಡುವ ಉತ್ಸಾಹದೊಂದಿಗೆ ಕೊಹ್ಲಿ ಪಡೆ ಇಂದು ಕಣಕ್ಕಿಳಿಯುತ್ತಿದೆ.
 
ಭಾರತ ತಂಡಕ್ಕೆ ವಿಶ್ವ ನಂ.1 ಆಲ್ ರೌಂಡರ್ ಜಡೇಜಾ ಅನುಪಸ್ಥಿತಿಯಿದ್ದರೂ, ಕೊರತೆಯಾಗಿ ಕಾಣದು. ಅವರ ಜಾಗ ತುಂಬಲು ಕುಲದೀಪ್ ಯಾದವ್ ಸಜ್ಜಾಗಿದ್ದಾರೆ. ಆದರೆ ಲಂಕಾ ಮಾತ್ರ ಎಲ್ಲಾ ವಿಭಾಗಗಳಲ್ಲೂ ಬರಗಾಲ ಎದುರಿಸುತ್ತಿದೆ.
 
ಇದುವರೆಗೆ ನಡೆದ ಎರಡೂ ಪಂದ್ಯಗಳಲ್ಲಿ ದ್ವಿತೀಯ ಟೆಸ್ಟ್ ನ ದ್ವಿತೀಯ ಇನಿಂಗ್ಸ್ ನಲ್ಲಿ ಕೊಂಚ ಹೊತ್ತು ಬಿಟ್ಟರೆ ಉಳಿದೆಲ್ಲಾ ಅವಧಿಗಳಲ್ಲೂ ಟೀಂ ಇಂಡಿಯಾಕ್ಕೆ ಲಂಕಾ ಯಾವುದೇ ಹಂತದಲ್ಲೂ ಸಾಟಿಯಾಗಿರಲಿಲ್ಲ. ಹೀಗಾಗಿ ಯಾರೂ ಮಾಡದ ದಾಖಲೆಯನ್ನು ಈ ಪಂದ್ಯವನ್ನು ಗೆಲ್ಲುವ ಮೂಲಕ ಕೊಹ್ಲಿ ಪಡೆ ಮಾಡಲಿದೆ ಎಂಬ ಲೆಕ್ಕಾಚಾರದಲ್ಲಿ ಅಭಿಮಾನಿಗಳಿದ್ದಾರೆ.
 
ಆದರೆ ಎಲ್ಲದಕ್ಕೂ ಹವಾಮಾನ ಅನುವು ಮಾಡಿಕೊಡಬೇಕು. ಇಲ್ಲಿ ತುಂತುರು ಮಳೆಯಾಗುವ ನಿರೀಕ್ಷೆಯಿದ್ದು, ಭಾರತದ ಕನಸಿಗೆ ನೀರೆರಚದಿದ್ದರೆ ಸಾಕು ಎಂಬ ಪರಿಸ್ಥಿತಿಯಿದೆ.  ತೇವಾಂಶ ಹೆಚ್ಚಿರುವ ಕಾರಣ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡುವುದೇ ಒಳ್ಳೆಯದು. ಹಾಗಿದ್ದರೂ ಭಾರತದ ದಾಖಲೆ ಈ ಮೈದಾನದಲ್ಲಿ ಉತ್ತಮವಾಗಿಯೇ ಇದೆ ಎನ್ನುವುದು ಪ್ಲಸ್ ಪಾಯಿಂಟ್.
 
ಇದನ್ನೂ ಓದಿ.. ಭಾರತ-ಚೀನಾ ಗಡಿಯಲ್ಲಿ ಹೆಚ್ಚಾಯ್ತು ಸೈನಿಕರ ಹೆಜ್ಜೆ ಸದ್ದು!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಟೀಂ ಇಂಡಿಯಾ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು ಭಾರತ-ಶ್ರೀಲಂಕಾ ಟೆಸ್ಟ್ ಸರಣಿ Team India Cricket News Sports News India-srilanka Test Seriea

ಕ್ರಿಕೆಟ್‌

news

ಸೀತೆ ಇದ್ದ ಅಶೋಕವನಕ್ಕೆ ಟೀಮ್ ಇಂಡಿಯಾ ಆಟಗಾರರ ಭೇಟಿ

ಶ್ರೀಲಂಕಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಸದಸ್ಯರು ರಾಮಾಯಣದಲ್ಲಿ ಉಲ್ಲೇಖವಾಗಿರುವ ಸೀತಾ ಮಾತೆಯನ್ನ ರಾವಣ ...

news

ಶ್ರೀಲಂಕಾ ಏಕದಿನಕ್ಕೆ ಟೀಂ ಇಂಡಿಯಾ ಜೋಡಿಗೆ ರೆಸ್ಟ್?

ಮುಂಬೈ: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಮುಗಿದ ಮೇಲೆ ನಡೆಯಲಿರುವ ಏಕದಿನ ಸರಣಿಗೆ ಟೀಂ ಇಂಡಿಯಾದ ಸ್ಪಿನ್ ...

news

‘ಬಿಸಿಸಿಐ ಯಾಕೆ ಕೊಹ್ಲಿ ಹೇಳಿದ್ದಕ್ಕೆಲ್ಲಾ ತಲೆಯಾಡಿಸಿತು?’

ಮುಂಬೈ: ಮಳೆ ಬಿಟ್ಟರೂ ಹನಿ ತಪ್ಪದು ಎನ್ನುವ ಹಾಗೆ ಅನಿಲ್ ಕುಂಬ್ಳೆ ಕೋಚ್ ಹುದ್ದೆ ತ್ಯಜಿಸಿ ಎಷ್ಟೋ ...

news

ವಿದೇಶೀ ಫುಟ್ಬಾಲಿಗನ ಬೆನ್ನಲ್ಲಿ ಓಂ ನಮಃ ಶಿವಾಯ ಟ್ಯಾಟೂ!

ನವದೆಹಲಿ: ವಿದೇಶದಲ್ಲಿ ಆಗಾಗ ಹಿಂದೂ ದೇವರುಗಳಿಗೆ ಅವಮಾನ ಮಾಡುವ ಘಟನೆಗಳನ್ನು ಓದಿದ್ದೇವೆ. ಆದರೆ ಅರ್ಸೇನಲ್ ...

Widgets Magazine