ಆನ್ ಫೀಲ್ಡ್ ವರ್ತನೆಗೆ ಕ್ಷಮೆ ಯಾಚಿಸಿದ ಆಸೀಸ್ ನಾಯಕ ಟಿಮ್ ಪೇಯ್ನ್

ಸಿಡ್ನಿ| Krishnaveni K| Last Modified ಮಂಗಳವಾರ, 12 ಜನವರಿ 2021 (09:27 IST)
ಸಿಡ್ನಿ: ಭಾರತದ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಗೆ ಅಶ್ಲೀಲ ಪದ ಬಳಸಿ ಸ್ಲೆಡ್ಜಿಂಗ್ ಮಾಡಿದ ಆಸ್ಟ್ರೇಲಿಯಾ ನಾಯಕ ಟಿಮ್ ಪೇಯ್ನ್ ತಮ್ಮ ವರ್ತನೆಗೆ ಕ್ಷಮೆ ಯಾಚಿಸಿದ್ದಾರೆ.

 
ಐದನೇ ದಿನದಾಟದಲ್ಲಿ ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್ ಮಾಡುತ್ತಿದ್ದಾಗ ಟಿಮ್ ಪೇಯ್ನ್ ಸ್ಲೆಡ್ಜಿಂಗ್ ಮಾಡಿ ಕೆಣಕಿದ್ದರು. ಈ ವೇಳೆ ಅವರು ಬಳಸಿದ ಪದಗಳು ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ತಾವು ಹಾಗೆ ಮಾಡಬಾರದಿತ್ತು. ಅದೊಂದು ಮೂರ್ಖತನವಾಗಿತ್ತು ಎಂದು ಪೇಯ್ನ್ ತಮ್ಮ ವರ್ತನೆಗೆ ಕ್ಷಮೆ ಯಾಚಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :