ಶಿಖರ್ ಧವನ್ ವಿಶ್ವಕಪ್ ನಿಂದ ಹೊರಬಿದ್ದಿದ್ದನ್ನೇ ಜೋಕ್ ಮಾಡಿಕೊಂಡ ಟ್ವಿಟರಿಗರು

ಲಂಡನ್, ಬುಧವಾರ, 12 ಜೂನ್ 2019 (09:01 IST)

ಲಂಡನ್: ಶಿಖರ್ ಧವನ್ ಗಾಯದ ಕಾರಣದಿಂದ ವಿಶ್ವಕಪ್ ನಿಂದ ಹೊರಬಿದ್ದ ಸುದ್ದಿ ತಿಳಿಯುತ್ತಿದ್ದಂತೇ ಅಭಿಮಾನಿಗಳು ಶಾಕ್ ಆಗಬಹುದು ಎಂದುಕೊಂಡರೆ ಟ್ವಿಟರ್ ನಲ್ಲಿ ಇದನ್ನೇ ತಮಾಷೆ ಮಾಡಲು ವೇದಿಕೆಯಾಗಿ ಬಳಸಿಕೊಂಡಿದ್ದಾರೆ.


 
ಧವನ್ ಸ್ಥಾನಕ್ಕೆ ಯಾರು ಟೀಂ ಇಂಡಿಯಾಗೆ ಆಯ್ಕೆಯಾಗಬಹುದು ಎಂಬ ವಿಚಾರವನ್ನೇ ಇಟ್ಟುಕೊಂಡು ಟ್ವಿಟರಿಗರು ಮೆಮೆ ಮೂಲಕ ತಮಾಷೆ ಮಾಡುತ್ತಿದ್ದಾರೆ.
 
ಲಗಾನ್ ಸಿನಿಮಾದಲ್ಲಿ ಅಮೀರ್ ಖಾನ್ ತನ್ನ ಸಂಗಡಿಗರೊಂದಿಗೆ ಕುತೂಹಲದಿಂದ ನೋಡುತ್ತಿರುವ ಫೋಟೋ ಹಾಕಿ ಈಗ ಬಿಸಿಸಿಐ ಕಚೇರಿ ಹೊರಗಡೆ ಮನೀಶ್ ಪಾಂಡೆ, ರಿಷಬ್ ಪಂತ್ ಹೀಗೆ ಕಾಯ್ತಿರಬಹುದು ಎಂದು ತಮಾಷೆ ಮಾಡಿದ್ದಾರೆ.
 
ಮತ್ತೆ ಕೆಲವರು ಸರತಿ ಸಾಲಿನಲ್ಲಿ ಕ್ರಿಕೆಟಿಗರು ನಿಂತಿರುವ ಫೋಟೋ ಹಾಕಿ ಧವನ್ ಸ್ಥಾನಕ್ಕೆ ತಾವು ಆಯ್ಕೆಯಾಗಬಹುದು ಎಂದು ಕಾಯ್ತಿರುವ ಆಟಗಾರರನ್ನು ನೋಡಿ ಎಂದು ಲೇವಡಿ ಮಾಡಿದ್ದಾರೆ. ಮತ್ತೆ ಕೆಲವರು ಹೇಗಿದ್ದರೂ ಯುವರಾಜ್ ಸಿಂಗ್ ಗೆ ವಿದಾಯ ಪಂದ್ಯ ಆಡಬೇಕು ಎಂದು ಆಸೆಯಿತ್ತಲ್ವಾ? ಈಗಲೇ ಅವರನ್ನು ತಂಡಕ್ಕೆ ಕರೆಸಿ ಕೆಎಲ್ ರಾಹುಲ್ ರನ್ನು ಆರಂಭಿಕರಾಗಿ ಮಾಡಿ ಯುವಿಗೆ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಅವಕಾಶ ಕೊಡಬಹುದು ಎಂದು ತಮಾಷೆ ಮಾಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಶಿಖರ್ ಧವನ್ ವಿಶ್ವಕಪ್ ನಿಂದ ಔಟ್: ಕೆಎಲ್ ರಾಹುಲ್ ಗೆ ಛಾನ್ಸ್!

ಲಂಡನ್: ಶಿಖರ್ ಧವನ್ ಗಾಯದಿಂದಾಗಿ ವಿಶ್ವಕಪ್ ತಂಡದಿಂದ ಹೊರಬೀಳುತ್ತಿದ್ದಂತೆ ಅವರ ಸ್ಥಾನಕ್ಕೆ ಟೀಂ ...

news

ಇದಕ್ಕಿಂತ ಉತ್ತಮ ಬೀಳ್ಕೊಡುಗೆ ಸಿಗಬೇಕಿತ್ತು ಎಂದ ರೋಹಿತ್ ಶರ್ಮಾಗೆ ಯುವರಾಜ್ ಸಿಂಗ್ ಹೇಳಿದ್ದೇನು ಗೊತ್ತಾ?

ಮುಂಬೈ: ಭಾರತೀಯ ಕ್ರಿಕೆಟ್ ರಂಗದಲ್ಲಿ ಅನೇಕ ಸಾಧನೆಗಳನ್ನು ಮಾಡಿ ಸದ್ದಿಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್ ...

news

ವಿಶ್ವಕಪ್ 2019: ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಗೆ ಗಾಯ

ಲಂಡನ್: ವಿಶ್ವಕಪ್ ನಲ್ಲಿ ಎರಡು ಪಂದ್ಯಗಳನ್ನು ಆಡಿ ಎರಡರಲ್ಲೂ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಶಿಖರ್ ...

news

ನಿವೃತ್ತಿ ಘೋಷಿಸಿದ ಯುವರಾಜ್ ಸಿಂಗ್ ಗೆ ಪತ್ನಿ ಹೇಳಿದ್ದೇನು ಗೊತ್ತಾ?

ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ ಕ್ರಿಕೆಟಿಗ ಯುವರಾಜ್ ಸಿಂಗ್ ಗೆ ಪತ್ನಿ ...