Widgets Magazine

ನಂ.1 ಆಗಲು ನೀವು ನಾಲಾಯಕ್ಕು ಎಂದು ಟೀಂ ಇಂಡಿಯಾಗೆ ಜರಿದ ಅಭಿಮಾನಿಗಳು

ವೆಲ್ಲಿಂಗ್ಟನ್| Krishnaveni K| Last Modified ಸೋಮವಾರ, 24 ಫೆಬ್ರವರಿ 2020 (10:41 IST)
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಹೀನಾಯವಾಗಿ ಸೋತ ಟೀಂ ಇಂಡಿಯಾಗೆ ಅಭಿಮಾನಿಗಳು ಛೀಮಾರಿ ಹಾಕಿದ್ದಾರೆ.

 
ನಂ.1 ಟೆಸ್ಟ್ ತಂಡ ಎನಿಸಿಕೊಳ್ಳಲು ನೀವು ನಾಲಾಯಕ್ಕು. ಎಲ್ಲಿ ಹೋಯಿತು ನಿಮ್ಮ ಆಕ್ರಮಣಕಾರಿ ಆಟ? ಅಭಿಮಾನ? ಎಂದು ಟ್ವಿಟರಿಗರು ಕೊಹ್ಲಿ ಪಡೆಗೆ ಹಿಗ್ಗಾ ಮುಗ್ಗಾ ಪ್ರಶ್ನೆ ಮಾಡಿದ್ದಾರೆ.
 
ಇನ್ನು, ಕೆಲವರು ರೋಹಿತ್ ಶರ್ಮಾ ಗಾಯಗೊಂಡು ತಂಡದಿಂದ ಹೊರಬಿದ್ದ ಮೇಲೆ ಟೀಂ ಇಂಡಿಯಾ ಅಸಹಾಯಕವಾಗಿದೆ ಎಂದರೆ ಮತ್ತೆ ಕೆಲವರು ವಿದೇಶದಲ್ಲಿ ಗೆಲ್ಲಲು ಹೊಸ ರಣತಂತ್ರ ರೂಪಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :