Widgets Magazine

ಧೋನಿಯೂ ತಪ್ಪು ಮಾಡಿಲ್ಲವೇ? ರಿಷಬ್ ಪಂತ್ ಟ್ರೋಲ್ ಮಾಡಿದವರಿಗೆ ಕೋಚ್ ತಿರುಗೇಟು

ನವದೆಹಲಿ| Krishnaveni K| Last Modified ಬುಧವಾರ, 13 ಮಾರ್ಚ್ 2019 (08:40 IST)
ನವದೆಹಲಿ: ಧೋನಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಆಗಿರುವ ರಿಷಬ್ ಪಂತ್ ವಿಫಲರಾಗಿರುವುದಕ್ಕೆ ಧೋನಿಗೆ ಹೋಲಿಸಿ ಟೀಕೆ ಮಾಡುತ್ತಿರುವವರಿಗೆ ಪಂತ್ ಕೋಚ್ ತಿರುಗೇಟು ನೀಡಿದ್ದಾರೆ.

 
ಧೋನಿ ಕೂಡಾ ತಮ್ಮ ಆರಂಭದ ದಿನಗಳಲ್ಲಿ ತಪ್ಪು ಮಾಡಿಲ್ಲವೇ? ರಿಷಬ್ ಪಂತ್ ಗೆ ಇದು ಆರಂಭದ ದಿನಗಳಷ್ಟೇ ಎಂದು ಕೋಚ್ ತಾರಕ್ ಸಿನ್ಹಾ ಪ್ರಶ್ನಿಸಿದ್ದಾರೆ.
 
ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಏಕದಿನ ಪಂದ್ಯದಲ್ಲಿ ಪಂತ್ ಮಿಸ್ ಫೀಲ್ಡ್ ಮಾಡಿದ್ದರ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲಿ ತಾರಕ್ ಸಿನ್ಹಾ ಶಿಷ್ಯನ ಪರವಾಗಿ ಬ್ಯಾಟ್ ಮಾಡಿದ್ದಾರೆ. ‘ಧೋನಿಯಂತಹ ದಿಗ್ಗಜ ಕ್ರಿಕೆಟಿಗನಿಗೆ ಪಂತ್ ರನ್ನು ಈಗಲೇ ಹೋಲಿಸುವುದು ತೀರಾ ಅನ್ಯಾಯ. ರಿಷಬ್ ಇನ್ನೂ ಎಳೆಯ. ಆತನಿಗೆ ಕೊಂಚ ಸಮಯ ನೀಡಿ’ ಎಂದು ತಾರಕ್ ಆಗ್ರಹಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :