ದ.ಆಫ್ರಿಕಾ ಸರಣಿಗೆ ತಯಾರಾಗಲು ಬಿಸಿಸಿಐ ಮಾಡಿದ್ದ ಯೋಜನೆಯನ್ನು ತಿರಸ್ಕರಿಸಿದ್ದ ವಿರಾಟ್ ಪಡೆ!

ಮುಂಬೈ, ಗುರುವಾರ, 11 ಜನವರಿ 2018 (09:01 IST)

Widgets Magazine

ಮುಂಬೈ: ದ.ಆಫ್ರಿಕಾದಲ್ಲಿರುವ ಟೀಂ ಇಂಡಿಯಾ ಈಗ ಅಭ್ಯಾಸಕ್ಕೆ ಸಮಯ  ಸಿಕ್ಕಿರಲಿಲ್ಲ, ವ್ಯವಸ್ಥೆಯಿಲ್ಲ ಎಂದೆಲ್ಲಾ ಸೋಲಿಗೆ ನೆಪ ಹುಡುಕುತ್ತಿದ್ದರೆ, ಸರಣಿ ಆರಂಭಕ್ಕೆ ಮೊದಲು ತಯಾರಾಗಲು ನೀಡಿದ್ದ ಪ್ರಸ್ತಾಪವೊಂದನ್ನು ತಿರಸ್ಕರಿಸುವುದು ಬೆಳಕಿಗೆ ಬಂದಿದೆ.
 

ದ.ಆಫ್ರಿಕಾ ಸರಣಿಗೆ ಮೊದಲು ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಸೀಮಿತ ಓವರ್ ಗಳ ಪಂದ್ಯವಾಡುತ್ತಿತ್ತು. ಆಫ್ರಿಕಾ ಸರಣಿಗೆ ಆಯ್ಕೆಯಾದ ಹೆಚ್ಚಿನ ಕ್ರಿಕೆಟಿಗರು ಲಂಕಾ ಸರಣಿಯಲ್ಲಿ ಇರಲಿಲ್ಲ. ಈ ಟೆಸ್ಟ್ ಸ್ಪೆಷಲಿಸ್ಟ್ ಆಟಗಾರರನ್ನು ಮೊದಲೇ ದ. ಆಫ್ರಿಕಾಗೆ ಕಳುಹಿಸಿ ಸರಣಿಗೆ ತಯಾರಾಗಲು ಬಿಸಿಸಿಐ ಪ್ರಸ್ತಾಪ ಮುಂದಿಟ್ಟಿತ್ತು.
 
ಈ ಆಟಗಾರರು ಮೊದಲೇ ಆಫ್ರಿಕಾಗೆ ತೆರಳಿ ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲಿ ಎನ್ನುವುದು ಬಿಸಿಸಿಐ  ಉದ್ದೇಶವಾಗಿತ್ತು. ಇದಕ್ಕಾಗಿ ಆಟಗಾರರ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸಲು ಬಿಸಿಸಿಐ ತಯಾರಿತ್ತು. ಆದರೆ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಇದನ್ನು ತಿರಸ್ಕರಿಸಿತು ಎಂಬ ವಿಷಯವನ್ನು ಬಿಸಿಸಿಐ ಮೂಲಗಳು ಆಂಗ್ಲ ಮಾಧ್ಯಮಕ್ಕೆ ಬಹಿರಂಗಪಡಿಸಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಟೀಂ ಇಂಡಿಯಾ ಗಾಯದ ಮೇಲೆ ಬರೆ ಎಳೆದ ದ.ಆಫ್ರಿಕಾ ಕ್ರಿಕೆಟಿಗ!

ಸೆಂಚೂರಿಯನ್: ಭಾರತ-ದ.ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಈಗಲೂ ಟೀಂ ಇಂಡಿಯಾ ಗೆಲ್ಲಬಹುದು ಎಂಬ ...

news

ರಾಹುಲ್ ದ್ರಾವಿಡ್ ರಿಂದ ಟೀಂ ಇಂಡಿಯಾ ಕಲಿಯಬೇಕಾದ ಪಾಠವಿದು!

ಬೆಂಗಳೂರು: ವಿಶ್ವದಲ್ಲಿ ಗ್ರೇಟ್ ವಾಲ್ ಆಫ್ ಚೀನಾ ಬಿಟ್ಟರೆ, ಅಷ್ಟೊಂದು ಗಟ್ಟಿ ಗೋಡೆ ಎಂದರೆ ಇರುವುದು ...

news

ಮ್ಯಾಥ್ಯೂಸ್‌ಗೆ ಮತ್ತೊಮ್ಮೆ ಮರಳಿದ ನಾಯಕನ ಪಟ್ಟ...!!

ತಂಡದ ಹೀನಾಯ ಸೋಲುಗಳ ಬಳಿಕ ಶ್ರೀಲಂಕಾ ಕ್ರಿಕೆಟ್ ತಂಡದ ಅನುಭವಿ ಆಟಗಾರ ಆ್ಯಂಗಲೋ ಮ್ಯಾಥ್ಯೂಸ್ ಅವರು ತಮ್ಮ ...

news

ಈ ಬಾಲಿವುಡ್ ಬೆಡಗಿಯೊಂದಿಗೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಲವ್ವಿ ಡವ್ವಿ?!

ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಪ್ರೀತಿಯಲ್ಲಿ ಬಿದ್ದಿದ್ದಾರಾ? ಹಾಗೊಂದು ಗಾಸಿಪ್ ...

Widgets Magazine