ಆ ಮೂರು ವಾರ ನನ್ನ ಕ್ರಿಕೆಟ್ ಕಿಟ್ ಕಡೆ ತಿರುಗಿಯೂ ನೋಡಿರಲಿಲ್ಲ ಎಂದ ವಿರಾಟ್ ಕೊಹ್ಲಿ!

ಬೆಂಗಳೂರು, ಶುಕ್ರವಾರ, 6 ಏಪ್ರಿಲ್ 2018 (09:03 IST)


ಬೆಂಗಳೂರು:  ಟೀಂ ಇಂಡಿಯಾದ ಬಿಡುವಿಲ್ಲದ ಕ್ರಿಕೆಟ್ ನಿಂದ ವಿರಾಮ ಪಡೆದು ಇದೀಗ ಐಪಿಎಲ್ ಗೆ ಸಜ್ಜಾಗುತ್ತಿರುವ ನಾಯಕ ವಿರಾಟ್ ಕೊಹ್ಲಿ ಬಿಡುವಿನ ದಿನಗಳಲ್ಲಿ ಕ್ರಿಕೆಟ್ ಕಿಟ್ ಕಡೆಗೆ ತಿರುಗಿಯೂ ನೋಡಿರಲಿಲ್ಲ ಎಂದಿದ್ದಾರೆ.
 
‘ದ.ಆಫ್ರಿಕಾ ಪ್ರವಾಸದ ಕೊನೆ ಕೊನೆಯಲ್ಲಿ ನಾನು ತುಂಬಾ ಬಳಲಿದ್ದೆ. ನನಗೆ ವಿಶ್ರಾಂತಿ ಬೇಕು ಎಂದು ಅನಿಸಿತ್ತು. ಅದಕ್ಕೇ ಕ್ರಿಕೆಟ್ ನಿಂದ ದೂರವಿದ್ದೆ. ಈ ಸಂದರ್ಭಗಳಲ್ಲಿ ಸಂಪೂರ್ಣವಾಗಿ ಕ್ರಿಕೆಟ್ ನಿಂದ ದೂರವಿದ್ದೆ. ಆದರೆ ಟಿವಿಯಲ್ಲಿ ಆಗಾಗ ಬರುವ ಕ್ರಿಕೆಟ್ ಸ್ಕೋರ್ ಗಳನ್ನು ನೋಡುತ್ತಿದ್ದೆ ಅಷ್ಟೆ. ಅದು ಬಿಟ್ಟರೆ ಕ್ರಿಕೆಟ್ ಕಡೆಗೆ ಗಮನವೇ ಕೊಡಲಿಲ್ಲ. ಈಗ 100 ಪ್ರತಿಶತ ರೆಡಿಯಾಗಿದ್ದೇನೆಂದು ಅನಿಸುತ್ತಿದೆ’ ಎಂದು ಕೊಹ್ಲಿ ಮಾಧ್ಯಮಗಳ ಎದುರು ಹೇಳಿದ್ದಾರೆ.
 
ಈ ಮೂರು ವಾರ ಕ್ರಿಕೆಟ್ ಕಿಟ್ ಕಡೆಗೂ ನಾನು ನೋಡಿರಲಿಲ್ಲ. ಸುಮಾರು ಒಂದೂವರೆ ತಿಂಗಳು ಕ್ರಿಕೆಟ್ ಆಡಿಯೇ ಇಲ್ಲ. ಈಗ ಸಂಪೂರ್ಣವಾಗಿ ಫಿಟ್ ಆಗಿದ್ದೆನೆಂದು ಅನಿಸುತ್ತಿದೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ನಿನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆಂದು ಶಿಖರ್ ಧವನ್ ಭಾವುಕರಾಗಿದ್ದು ಯಾರ ಬಗ್ಗೆ?!

ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಭಾವುಕರಾಗಿ ನಿನ್ನನ್ನು ಮಿಸ್ ...

news

ನಾವು ಏನು ಮಾಡಬೇಕೆಂದು ಹೊರಗಿನವರು ಹೇಳಬೇಕಾಗಿಲ್ಲ! ಸಚಿನ್ ತೆಂಡುಲ್ಕರ್ ಗೆ ಇಷ್ಟೊಂದು ಕೋಪ ಬಂದಿದ್ದು ಏಕೆ?!

ಮುಂಬೈ: ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಮಾಡಿರುವ ಟ್ವೀಟ್ ...

news

ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಈಗ ಅಭಿಮಾನಿಗಳಿಗಿಂತಲೂ ದೊಡ್ಡ ಆಸೆ ಹುಟ್ಟಿಕೊಂಡಿದೆಯಂತೆ!

ಬೆಂಗಳೂರು: ಐಪಿಎಲ್ ಶುರುವಾಗಲು ಕ್ಷಣಗಣನೆ ಶುರುವಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ...

news

ಗೆಳೆಯನಾದರೇನಾಯ್ತು? ಶಾಹಿದಿ ಅಫ್ರಿದಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ವಿರಾಟ್ ಕೊಹ್ಲಿ

ನವದೆಹಲಿ: ಭಾರತದ ಸ್ವಾಧೀನದಲ್ಲಿರುವ ಕಾಶ್ಮೀರದಲ್ಲಿ ರಕ್ತಪಾತ ಹೆಚ್ಚುತ್ತಿದೆ ಎಂದು ಕಳವಳಕಾರಿ ಟ್ವೀಟ್ ...

Widgets Magazine
Widgets Magazine