ಪತ್ನಿ ಅನುಷ್ಕಾ ಶರ್ಮಾ ಅವರನ್ನು ಬಾಸ್ ಎಂದು ಒಪ್ಪಿಕೊಂಡ ವಿರಾಟ್ ಕೊಹ್ಲಿ...!!

ಬೆಂಗಳೂರು, ಶುಕ್ರವಾರ, 8 ಜೂನ್ 2018 (13:59 IST)

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವುದು ನಿಮಗೆಲ್ಲಾ ತಿಳಿದೇ ಇದೆ. ಇವರಿಬ್ಬರೂ ಮದುವೆಯಾದಾಗಿನಿಂದ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಈ ಬಾರಿ ಸುದ್ದಿಯಲ್ಲಿರುವುದು ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಒಂದು ವೀಡಿಯೊ ಮೂಲಕ.
ಹೌದು, ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವದಾದ್ಯಂತ ಫಿಟ್ನೆಸ್-ಐಕಾನ್ ಆಗಿದ್ದು ಎಲ್ಲರಿಗೂ ತಿಳಿದಿರುವುದೇ ಆದರೆ ಅವರ ಅರ್ಧಾಂಗಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸಹ ಫಿಟ್ನೆಸ್‌ನಲ್ಲಿ ಹಿಂದೆ ಬಿದ್ದಿಲ್ಲ. ಈ ಕುರಿತು ಬುಧವಾರ ಕೊಹ್ಲಿ ತಮ್ಮ ವೀಡಿಯೊವೊಂದನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ಅದರ ಕೆಳಗೆ "ಒಟ್ಟಿಗೆ ತರಬೇತಿ ಪಡೆದುಕೊಳ್ಳುವುದು ಫಿಟ್‌ನೆಸ್ ಅನ್ನು ಇನ್ನೂ ಉತ್ತಮವಾಗಿಸುತ್ತದೆ!" ಎಂದು ಬರೆದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. 
 
ಅಷ್ಟೇ ಅಲ್ಲದೇ ವ್ಯಾಯಾಮಗಳನ್ನು ಮಾಡುತ್ತಿರುವ ಅನುಷ್ಕಾರನ್ನು 'ಬಾಸ್' ಎಂದು ಪರಿಚಯಿಸಿದ್ದಾರೆ ವೀಡಿಯೊದಲ್ಲಿ ಪರಿಚಯಿಸಿದ್ದಾರೆ. ಅದರೊಂದಿಗೆ ಅನುಷ್ಕಾ ನನಗಿಂತ ಹೆಚ್ಚು ಗಂಟೆಗಳ ಕಾಲ ವ್ಯಾಯಾಮ ಮಾಡಬಹುದು ಎಂದು ತಮ್ಮ ಮುದ್ದಿನ ಮಡದಿಯನ್ನು ಹೊಗಳಿಕೊಂಡಿದ್ದಾರೆ.
ವಿರಾಟ್ ಫಿಟ್ನೆಸ್ ಕುರಿತು ವೀಡಿಯೊಗಳನ್ನು ಹಾಕುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಇಂತಹ ಹಲವು ವೀಡಿಯೊಗಳನ್ನು ಹಾಕಿ ಎಲ್ಲರೂ ತಮ್ಮ ಫಿಟ್ನೆಸ್ ಬಗ್ಗೆ ಗಮನ ನೀಡಬೇಕು ಎಂದು ಜಾಗ್ರತೆ ಮೂಡಿಸುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಅಂತೂ ಭಾರತ ತಂಡ ಪ್ರವೇಶಿಸಿಯೇ ಬಿಟ್ಟ ಮರಿ ತೆಂಡುಲ್ಕರ್

ಮುಂಬೈ: ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ತಮ್ಮ ಪುತ್ರ ಅರ್ಜುನ್ ತೆಂಡುಲ್ಕರ್ ತಮ್ಮಂತೆ ಆಗಬೇಕೆಂದು ...

news

ಅಭಿಮಾನಿಗಳ ಸೆಲ್ಫೀ ಹುಚ್ಚಿಗೆ ವಿರಾಟ್ ಕೊಹ್ಲಿ ಕಿವಿಯೇ ಭಗ್ನ!

ನವದೆಹಲಿ: ದೆಹಲಿಯಲ್ಲಿ ನಿನ್ನೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆ ...

news

ಕೊನೆಗೂ ಅಜಿಂಕ್ಯಾ ರೆಹಾನೆ ಮೇಲೆ ಕರುಣೆ ತೋರಿದ ವಿರಾಟ್ ಕೊಹ್ಲಿ

ಮುಂಬೈ: ಕೆಎಲ್ ರಾಹುಲ್ ಬಿಟ್ಟರೆ ಟೀಂ ಇಂಡಿಯಾದಲ್ಲಿ ಪ್ರತಿಭೆಯಿದ್ದೂ ಬೆಂಚ್ ಕಾಯಿಸುವ ದುರಾದೃಷ್ಟವಂತ ...

news

ಅಷ್ಟಕ್ಕೂ ಹರ್ಭಜನ್ ಸಿಂಗ್ ಯುವರಾಜ್ ಸಿಂಗ್ ರನ್ನು ಪಾಕ್ ಕ್ರಿಕೆಟಿಗನಿಗೆ ಹೋಲಿಸಿದ್ದೇಕೆ?

ಮುಂಬೈ: ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ಮೈದಾನದ ಹೊರಗೂ ಉತ್ತಮ ಸ್ನೇಹಿತರು ಎಂಬುದರಲ್ಲಿ ...

Widgets Magazine