ಕೊನೆಗೂ ಅಜಿಂಕ್ಯಾ ರೆಹಾನೆ ಮೇಲೆ ಕರುಣೆ ತೋರಿದ ವಿರಾಟ್ ಕೊಹ್ಲಿ

ಮುಂಬೈ, ಶುಕ್ರವಾರ, 8 ಜೂನ್ 2018 (09:07 IST)

ಮುಂಬೈ: ಕೆಎಲ್ ರಾಹುಲ್ ಬಿಟ್ಟರೆ ಟೀಂ ಇಂಡಿಯಾದಲ್ಲಿ ಪ್ರತಿಭೆಯಿದ್ದೂ ಬೆಂಚ್ ಕಾಯಿಸುವ ದುರಾದೃಷ್ಟವಂತ ಕ್ರಿಕೆಟಿಗನೆಂದರೆ ಅಜಿಂಕ್ಯಾ ರೆಹಾನೆ ಇರಬೇಕು. ಆದರೆ ಇದೀಗ ರೆಹಾನೆ ಮೇಲೆ ಕೊಹ್ಲಿ ಕರುಣೆ ತೋರಿದ್ದಾರೆ.
 
ಮುಂಬರುವ ಪ್ರತಿಷ್ಠಿತಿ ಇಂಗ್ಲೆಂಡ್ ಸರಣಿಗೆ ಅಜಿಂಕ್ಯಾ ರೆಹಾನೆಯನ್ನು ಆಯ್ಕೆ ಮಾಡುವುದರ ಬಗ್ಗೆ ಕೊಹ್ಲಿ ಸುಳಿವು ನೀಡಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಕೊಹ್ಲಿ ಅನುಪಸ್ಥಿತಿಯಲ್ಲಿ ರೆಹಾನೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಏಕೈಕ ಟೆಸ್ಟ್ ಪಂದ್ಯದ ಬಳಿಕ ಭಾರತದ ಇಂಗ್ಲೆಂಡ್ ಪ್ರವಾಸ ಆರಂಭವಾಗಲಿದೆ.
 
ಈ ಹಿನ್ನಲೆಯಲ್ಲಿ ರೆಹಾನೆಗೆ ಜನ್ಮ ದಿನದ ಶುಭಾಷಯ ಕೋರುವ ನೆಪದಲ್ಲಿ ಟ್ವೀಟ್ ಮಾಡಿದ ಕೊಹ್ಲಿ ‘ಇಂಗ್ಲೆಂಡ್ ಸರಣಿಯೊಂದಿಗೆ ಟೀಂ ಇಂಡಿಯಾದ ವಿದೇಶ ಪ್ರವಾಸ ಆರಂಭವಾಗಲಿದೆ. ಹ್ಯಾಪೀ ಬರ್ತ್ ಡೇ ಜಿಂಕ್ಸ್.. ಆ ಉಪಯುಕ್ತ ಕೊಡುಗೆಯನ್ನು ತಂಡಕ್ಕೆ ನೀಡುತ್ತಲೇ ಇರು’ ಎಂದಿದ್ದಾರೆ. ಈ ಮೂಲಕ ಇಂಗ್ಲೆಂಡ್ ಸರಣಿಯಲ್ಲೂ ರೆಹಾನೆ ರನ್ ಗಳಿಸಲಿ ಎಂದು ಹಾರೈಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಅಷ್ಟಕ್ಕೂ ಹರ್ಭಜನ್ ಸಿಂಗ್ ಯುವರಾಜ್ ಸಿಂಗ್ ರನ್ನು ಪಾಕ್ ಕ್ರಿಕೆಟಿಗನಿಗೆ ಹೋಲಿಸಿದ್ದೇಕೆ?

ಮುಂಬೈ: ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ಮೈದಾನದ ಹೊರಗೂ ಉತ್ತಮ ಸ್ನೇಹಿತರು ಎಂಬುದರಲ್ಲಿ ...

news

ವಿರಾಟ್ ಕೊಹ್ಲಿಗೆ ವರ್ಷದ ಕ್ರಿಕೆಟಿಗ ಪ್ರಶಸ್ತಿ

ಮುಂಬೈ: ಬಿಸಿಸಿಐ ತನ್ನ ವಾರ್ಷಿಕ ಪ್ರಶಸ್ತಿ ಘೋಷಣೆ ಮಾಡಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ...

news

ವಿದ್ಯುತ್ ಬಿಲ್ ವಿಚಾರದಲ್ಲಿ ಯುವರಾಜ್ ಸಿಂಗ್ ಟ್ರೋಲ್ ಮಾಡಿದ ಹರ್ಭಜನ್ ಸಿಂಗ್

ಮುಂಬೈ: ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ಇಬ್ಬರೂ ಒಂದೇ ರಾಜ್ಯದಿಂದ ಬಂದ ಕ್ರಿಕೆಟಿಗರು. ಇವರಿಬ್ಬರೂ ...

news

ಕ್ರಿಕೆಟಿಗ ರವೀಂದ್ರ ಜಡೇಜಾಗೆ ಕಾಡಿನಲ್ಲೇ ಗುದ್ದುವಷ್ಟು ಕೋಪ ಬಂದಿತ್ತಂತೆ ರೋಹಿತ್ ಶರ್ಮಾಗೆ!

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ಮೈದಾನದಲ್ಲಿ ತಾಳ್ಮೆ ಕಳೆದುಕೊಳ್ಳುವುದು ಅಪರೂಪ. ಆದರೆ ...

Widgets Magazine