ಪುತ್ರ ಭಾರತ ತಂಡಕ್ಕೆ ಆಯ್ಕೆಯಾಗಿದ್ದು ನೋಡಿ ಸಚಿನ್ ತೆಂಡುಲ್ಕರ್ ಹೇಳಿದ್ದೇನು?

ಮುಂಬೈ, ಶನಿವಾರ, 9 ಜೂನ್ 2018 (09:10 IST)

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ತಮ್ಮ ಪುತ್ರ ಅರ್ಜುನ್ ತೆಂಡುಲ್ಕರ್ ಭಾರತ ಅಂಡರ್ 19 ತಂಡಕ್ಕೆ ಆಯ್ಕೆಯಾಗಿರುವುದಕ್ಕೆ ಖುಷಿಯಾಗಿದ್ದಾರೆ. ಅದರ ಜತೆಗೆ ಮಗನಿಗೆ ಸಂದೇಶವನ್ನೂ ಕೊಟ್ಟಿದ್ದಾರೆ.
 
18 ವರ್ಷದ ಆಲ್ ರೌಂಡರ್ ಅರ್ಜುನ್ ತೆಂಡುಲ್ಕರ್ ಶ್ರೀಲಂಕಾ ವಿರುದ್ಧದ ನಾಲ್ಕು ದಿನಗಳ ಪಂದ್ಯ ಮತ್ತು ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ. ಪುತ್ರ ಆಯ್ಕೆಯಾಗಿರುವುದಕ್ಕೆ ಸಚಿನ್ ಸಂತಸ ವ್ಯಕ್ತಪಡಿಸಿದ್ದಾರೆ.
 
‘ಅರ್ಜುನ್ ಅಂಡರ್ 19 ತಂಡಕ್ಕೆ ಆಯ್ಕೆಯಾಗಿರುವುದು ನೋಡಿ ಖುಷಿಯಾಗಿದೆ. ಅವನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಇದೊಂದು ಮೈಲಿಗಲ್ಲು. ಅಂಜಲಿ (ಸಚಿನ್ ಪತ್ನಿ) ಮತ್ತು ನಾನು ಅರ್ಜುನ್ ನ ಆಯ್ಕೆಯನ್ನು ಸದಾ ಗೌರವಿಸುತ್ತೇವೆ ಮತ್ತು ಬೆಂಬಲಿಸುತ್ತೇವೆ’ ಎಂದು ಸಚಿನ್ ಖುಷಿಯಾಗಿ ಹೇಳಿಕೊಂಡಿದ್ದಾರೆ. ಇದೀಗ ಸಚಿನ್ ಪುತ್ರನಿಗೆ ಕ್ರಿಕೆಟ್ ವಾಲ್ ರಾಹುಲ್ ದ್ರಾವಿಡ್ ಕೋಚ್ ಆಗಲಿರುವುದು ಮತ್ತೊಂದು ವಿಶೇಷ!
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಫುಟ್ಬಾಲಿಗ ಸುನಿಲ್ ಚೆಟ್ರಿ ಬಳಿ ಬಿಂದಾಸ್ ಆಗಿ ಸಾನಿಯಾ ಮಿರ್ಜಾ ಕೇಳಿದ್ದೇನು?!

ಹೈದರಾಬಾದ್: ಇತ್ತೀಚೆಗೆ ಭಾರತೀಯ ಫುಟ್ಬಾಲಿಗ ಸುನಿಲ್ ಚೆಟ್ರಿ ಭಾರತ ಫುಟ್ ಬಾಲ್ ತಂಡವನ್ನು ಬೆಂಬಲಿಸುವಂತೆ ...

news

ಹಿರಿಯ ಕಾಮೆಂಟೇಟರ್ ನನ್ನು ಬ್ರದರ್ ಎಂದು ಟ್ರೋಲ್ ಗೊಳಗಾದ ಕ್ರಿಕೆಟಿಗ

ನವದೆಹಲಿ: ಅಫ್ಘಾನಿಸ್ತಾನದ ಲೇಟೆಸ್ಟ್ ಸೆನ್ಸೇಷನ್ ರಶೀದ್ ಖಾನ್ ಬಾಂಗ್ಲಾದೇಶ ವಿರುದ್ಧ ತಮ್ಮ ತಂಡಕ್ಕೆ ...

news

ಪತ್ನಿ ಅನುಷ್ಕಾ ಶರ್ಮಾ ಅವರನ್ನು ಬಾಸ್ ಎಂದು ಒಪ್ಪಿಕೊಂಡ ವಿರಾಟ್ ಕೊಹ್ಲಿ...!!

ಮುಂಬೈ: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವುದು ...

news

ಅಂತೂ ಭಾರತ ತಂಡ ಪ್ರವೇಶಿಸಿಯೇ ಬಿಟ್ಟ ಮರಿ ತೆಂಡುಲ್ಕರ್

ಮುಂಬೈ: ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ತಮ್ಮ ಪುತ್ರ ಅರ್ಜುನ್ ತೆಂಡುಲ್ಕರ್ ತಮ್ಮಂತೆ ಆಗಬೇಕೆಂದು ...

Widgets Magazine