ಕ್ರಿಕೆಟ್ ದೇವರನ್ನೇ ಗೊತ್ತಿಲ್ಲದ ವಿದೇಶಿ ಪತ್ರಕರ್ತರು

ನೋಯ್ಡಾ, ಸೋಮವಾರ, 31 ಅಕ್ಟೋಬರ್ 2011 (11:04 IST)

ಭಾನುವಾರ ಭಾರತದ ಪ್ರಪ್ರಥಮ ಫಾರ್ಮುಲಾ ಒನ್ ರೇಸ್‌ಗೆ ಅದ್ದೂರಿ ಆರಂಭ ದೊರಕಿತ್ತು. ಆದರೆ ರೇಸ್‌ಗೆ ಬಾವುಟ ತೋರಿಸಿ ಚಾಲನೆ ನೀಡಿದ್ದ ಕ್ರಿಕೆಟ್ ದೇವರಾದ ಸಚಿನ್ ತೆಂಡೂಲ್ಕರ್ ಅವರನ್ನು ಕೆಲವೊಂದು ವಿದೇಶಿ ಪತ್ರಕರ್ತರಿಗೆ ಪರಿಚಯವಿಲ್ಲದಿರುವುದು ಅಚ್ಚರಿಗೆ ಕಾರಣವಾಗಿತ್ತು.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಬುದ್ಧ ಇಂಟರ್‌ನ್ಯಾಷನಲ್ ಸರ್ಕ್ಯೂಟ್ ಭಾರಿ ಅಭಿಮಾನಿಗಳಿಂದ ತುಂಬಿ ತುಳುಕುತ್ತಿತ್ತು. ಈ ಸಂದರ್ಭದಲ್ಲಿ ದೇಶದ ಅತ್ಯಂತ ಪ್ರಭಾವಿ ವ್ಯಕ್ತಿಯಾದ ಸಚಿನ್ ತೆಂಡೂಲ್ಕರ್ ತಮ್ಮ ಫ್ಯಾಮಿಲಿ ಜತೆ ಆಗಮಿಸಿದ್ದರು.

ಸಚಿನ್ ಆಗಮನವಾಗುತ್ತಿದ್ದಂತೆಯೇ ಭಾರತೀಯ ಪತ್ರಕರ್ತರೆಲ್ಲರೂ ನಾ ಮುಂದು ತಾ ಮುಂದು ಎಂಬಂತೆ ಸಚಿನ್ ಫೋಟೊ ಕ್ಲಿಕ್ಕಿಸಲು ದೌಡಾಯಿಸಿದ್ದರು. ಇದನ್ನು ಕಂಡ ಸ್ಪೇನ್ ದೇಶದ ವರದಿಗಾರನೊಬ್ಬ ಭಾರತೀಯ ಪತ್ರಕರ್ತನಲ್ಲಿ, ಆತ ಯಾರು...? ಯಾಕೆ ಮಾಧ್ಯಮದವರೆಲ್ಲ ಆತನ ಅತ್ತ ಓಡುತ್ತಿದ್ದಾರೆ..? ಅವರೇನಾದರೂ ಶ್ರೀಮಂತ ವ್ಯಕ್ತಿಯೇ..? ಎಂದು ಕೇಳಿರುವುದು ವಿಪರ್ಯಾಸಕ್ಕೆ ಕಾರಣವಾಗಿದೆ.

ಆದರೆ ಸ್ಪೇನ್ ಪತ್ರಕರ್ತನ ಪ್ರಶ್ನೆಗೆ ಉತ್ತರಿಸಿದ್ದ ಭಾರತೀಯ ವರದಿಗಾರ, ಆತ 'ಭಾರತೀಯ ಕ್ರಿಕೆಟ್‌ನ ದೇವರು' ಎಂದು ಉತ್ತರಿಸಿದ ಪ್ರಸಂಗ ನಡೆದಿದೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

ಭಾರತೀಯ ಹಾಕಿ ತಂಡ ಯೂರೋಪ್‌‌ಗೆ ತೆರಳಲು ಸಜ್ಜಾಗಿದೆ

ನವದೆಹಲಿ :ಮುಂದಿ ದಿನಗಳಲ್ಲಿ ನಡೆಯಲಿರುವ ಹಾಕಿ ವಿಶ್ವ ಕಪ್‌‌ಗಾಗಿ ಸಿದ್ದತೆ ನಡೆಸುತ್ತಿರುವ ಇಂಡಿಯನ್‌ ...

ಧೋನಿ ಹೇಳಿಕೆ ಪರಿಶೀಲಿಸಲು ಅವಕಾಶ ಕೋರಿ ಸುಪ್ರೀಂಕೋರ್ಟ್‌ಗೆ ಬಿಸಿಸಿಐ ಅರ್ಜಿ

ನವದೆಹಲಿ: ಐಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಹಗರಣದ ತನಿಖೆ ನಡೆಸುತ್ತಿರುವ ಮುದ್ಗಲ್ ಸಮಿತಿಯ ಮುಂದೆ ...

ಟೆನಿಸ್‌‌‌ ಶ್ರೇಯಾಂಕ: ಭಾರತೀಯರ ಶ್ರೇಯಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ

ನವದೆಹಲಿ : ಭಾರತದ ಡೆವಿಸ್‌‌‌‌ಕಪ್‌ನಲ್ಲಿ ಸೋಮದೇವ್ ದೇವವರ್ಮನ್ ಕೊರಿಯಾ ವಿರುದ್ದ ಗೆಲುವನ್ನು ಸಾಧಿಸುವುದರ ...

ಯುವಿಯನ್ನು ಸಮರ್ಥಿಸಿಕೊಂಡು ಸಚಿನ್ ಬ್ಯಾಟಿಂಗ್

ನವದೆಹಲಿ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರನ್ನು ಸಮರ್ಥಿಸಿಕೊಂಡು ಸಚಿನ್ ತೆಂಡೂಲ್ಕರ್ ...

Widgets Magazine
Widgets Magazine