ಧೋನಿ ಹೇಳಿಕೆ ಪರಿಶೀಲಿಸಲು ಅವಕಾಶ ಕೋರಿ ಸುಪ್ರೀಂಕೋರ್ಟ್‌ಗೆ ಬಿಸಿಸಿಐ ಅರ್ಜಿ

ಬುಧವಾರ, 9 ಏಪ್ರಿಲ್ 2014 (16:01 IST)

PR
PR
ನವದೆಹಲಿ: ಐಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಹಗರಣದ ತನಿಖೆ ನಡೆಸುತ್ತಿರುವ ಮುದ್ಗಲ್ ಸಮಿತಿಯ ಮುಂದೆ ಎಂ.ಎಸ್.ಧೋನಿ ನೀಡಿದ ಹೇಳಿಕೆಯನ್ನು ಪರಿಶೀಲಿಸಲು ಅವಕಾಶ ನೀಡಬೇಕೆಂದು ಬಿಸಿಸಿಐ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಭಾರತ ತಂಡದ ನಾಯಕ ಧೋನಿ, ಎನ್. ಶ್ರೀನಿವಾಸನ್ ಮತ್ತು ಐಪಿಎಲ್ ಸಿಒಒ ಸುಂದರ್ ರಾಮನ್ ಅವರ ಧ್ವನಿಮುದ್ರಿಕೆ ದಾಖಲೆಗಳನ್ನು ಪರಿಶೀಲಿಸಲು ಬಿಸಿಸಿಐ ಬಯಸಿದೆ. ಸುಪ್ರೀಂಕೋರ್ಟ್ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.

ಬಿಹಾರ ಕ್ರಿಕೆಟ್ ಸಂಸ್ಥೆಯ ಆದಿತ್ಯ ವರ್ಮ ಅವರನ್ನು ಪ್ರತಿನಿಧಿಸುವ ಹಿರಿಯ ವಕೀಲ ಹರೀಶ್ ಸಾಳ್ವೆ ಧೋನಿ ಸುಳ್ಳು ಹೇಳಿದ್ದಾರೆಂದು ಆರೋಪಿಸಿದ್ದರು. ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಶ್ರೀನಿವಾಸನ್ ಅಳಿಯ ಗುರುನಾಥ್ ಮೆಯಪ್ಪನ್ ಪಾತ್ರದ ಬಗ್ಗೆ ಧೋನಿ ಸುಳ್ಳು ಹೇಳಿದ್ದಾರೆಂದು ಸಾಳ್ವೆ ವಾದಿಸಿದ್ದರು. ಧೋನಿ ಸುಳ್ಳು ಹೇಳುವ ಅಗತ್ಯವಿರಲಿಲ್ಲ ಮತ್ತು ಐಪಿಎಲ್ ಅಕ್ರಮಗಳ ಬಗ್ಗೆ ಸ್ವತಂತ್ರ ತನಿಖೆಯನ್ನು ಹಮ್ಮಿಕೊಳ್ಳುವುದು ಅಗತ್ಯ ಎಂದು ಸಾಳ್ವೆ ಹೇಳಿದರು.ಆದರೆ ಬಿಸಿಸಿಐ ಧೋನಿಯನ್ನು ಸಮರ್ಥಿಸಿಕೊಂಡು ಅವರು ಯಾವುದೇ ತಪ್ಪು ಮಾಡಿಲ್ಲ ಮತ್ತು ಅಮಾಯಕರು ಎಂದು ಹೇಳಿತ್ತು.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

ನೆದರ್‌ಲೆಂಡ್ಸ್ ಅಚ್ಚರಿಯ ಫಲಿತಾಂಶ: ಇಂಗ್ಲೆಂಡ್ ವಿರುದ್ಧ ಗೆಲುವು

ಟಿ20ಯಲ್ಲಿ ಎರಡನೇ ಬಾರಿ ನೆದರ್ಲ್ಯಾಂಡ್ಸ್ ತಂಡ ಇಂಗ್ಲೆಂಡ್ ತಂಡವನ್ನು 45 ರನ್‌ಗಳಿಂದ ಸೋಲಿಸುವ ಮೂಲಕ ...

300ನೇ ಪಂದ್ಯದಲ್ಲಿ 2 ಗೋಲುಗಳನ್ನು ಗಳಿಸಿದ ಕಾಕಾ

ಮಿಲಾನ್ : ಇಟಲಿಯ ಫುಟ್ಬಾಲ್ ಕ್ಲಬ್ ಎಸಿ ಮಿಲಾನ್‌ಗಾಗಿ ಆಡುತ್ತಿರುವ ಬ್ರೆಜಿಲ್‌ ಸ್ಟಾರ್‌ ಕಾಕಾ ರವರು ತಮ್ಮ ...

ಮಲೇಷಿಯಾ ಓಪನ್‌ : ಫೈನಲ್‌‌‌‌ನಲ್ಲಿ ಸೋತ ಸೌರಭ್

ಜೋಹ್ರಾ ಬಾರ್ರ್ : ಮಲೇಷಿಯಾ ಗ್ರ್ಯಾಂಡ್ ಫ್ರಿ ಗೋಲ್ಡ್‌‌ ಪುರುಷ ಸಿಂಗಲ್ಸ್‌‌‌ ಫೈನಲ್‌‌‌‌‌ನಲ್ಲಿ ...

ಯುವರಾಜ್ ಸ್ಫೋಟಕ ಬ್ಯಾಟಿಂಗ್, ಅಶ್ವಿನ್ ಮಾರಕ ಸ್ಪಿನ್: ಸೋಲಪ್ಪಿದ ಆಸ್ಟ್ರೇಲಿಯಾ

ಮಿರ್‌ಪುರ: ಭಾನುವಾರ ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಯುವರಾಜ್ ಸಿಂಗ್ ಅವರ ಸ್ಫೋಟಕ ...

Widgets Magazine
Widgets Magazine