Widgets Magazine

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯಿಲ್ಲ: ಶ್ರೀನಿವಾಸನ್

ಮುಂಬೈ| ರಾಜೇಶ್ ಪಾಟೀಲ್| Last Modified ಗುರುವಾರ, 30 ಮೇ 2013 (15:04 IST)
PTI
ದಿನದಿಂದ ದಿನಕ್ಕೆ ಒತ್ತಡ ಹೆಚ್ಚುತ್ತಿದ್ದರೂ ಅಧ್ಯಕ್ಷ ಎನ್‌. ಶ್ರೀನಿವಾಸನ್‌ ತಮ್ಮ ಸ್ಥಾನದಿಂದ ಕೆಳಗಿಳಿಯಲು ನಿರಾಕರಿಸಿದ್ದಾರೆ.

ಐಪಿಎಲ್‌ ಅಧ್ಯಕ್ಷ ರಾಜೀವ್‌ ಶುಕ್ಲ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀನಿವಾಸನ್‌, ಶುಕ್ಲ ಅವರ ಹೇಳಿಕೆಯಲ್ಲಿ ಯಾವುದೇ ಹೊಸ ವಿಷಯ ಇಲ್ಲ. ಕೇವಲ ನನ್ನ ರಾಜೀನಾಮೆ ಕೇಳಿದ್ದಾರೆ ಅಷ್ಟೇ ಎಂದಿದ್ದಾರೆ.

ಶುಕ್ಲ ಅವರ ಸಂದರ್ಶನ ವೀಕ್ಷಿಸಿದ್ದೇನೆ. ತನಿಖೆ ನಡೆಸುತ್ತಿರುವ ಸಮಿತಿಯಲ್ಲಿ ಶ್ರೀನಿವಾಸನ್‌ ಹಸ್ತಕ್ಷೇಪ ಮಾಡಲು ಬಿಡುವುದಿಲ್ಲ ಎಂದಿದ್ದಾರೆ. ಆದರೆ ಈ ವಿಷಯವನ್ನು ಕೋಲ್ಕತಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲೇ ಸ್ಪಷ್ಟಪಡಿಸಿದ್ದೇನೆ ಎಂದು ಶ್ರೀನಿವಾಸನ್‌ ಹೇಳಿದರು.

ಕೋಲ್ಕತಾದ ಪತ್ರಿಕಾಗೋಷ್ಠಿಯಲ್ಲಿ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಅಳಿಯ ಗುರುನಾಥ್‌ ಪಾತ್ರದ ಬಗ್ಗೆ ಸಮಿತಿ ತನಿಖೆ ನಡೆಸಲಿದ್ದು, ಇದರಲ್ಲಿ ನನ್ನ ಪಾತ್ರ ಏನೂ ಇರುವುದಿಲ್ಲ. ಆದ್ದರಿಂದ ಶುಕ್ಲ ಅವರ ಹೇಳಿಕೆಯಲ್ಲೀ ಇದೇ ಪ್ರಸ್ತಾಪಿಸಲಾಗಿದೆ. ಆದ್ದರಿಂದ ನಾವು ಯಾವುದೇ ವೈಯಕ್ತಿಕ ಅಭಿಪ್ರಾಯಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.


ಇದರಲ್ಲಿ ಇನ್ನಷ್ಟು ಓದಿ :