Widgets Magazine

ಲಂಕಾ ತಂಡ ಪ್ರಕಟ; ಜಯಸೂರ್ಯಗೆ ಅರ್ಧಚಂದ್ರ

ಕೊಲಂಬೊ| ನಾಗರಾಜ ಬಿ.|
ವರ್ಷಾಂರಂಭದಲ್ಲಿ ಬಾಂಗ್ಲಾದೇಶದಲ್ಲಿ ಭಾರತವನ್ನೊಳಗೊಂಡಂತೆ ನಡೆಯಲಿರುವ ತ್ರಿಕೋನ ಏಕದಿನ ಸರಣಿಗಾಗಿನ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದ್ದು, ಹಿರಿಯ ಅನುಭವಿ ಆಟಗಾರ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳಲು ವಿಫಲರಾಗಿದ್ದಾರೆ.

ಭಾರತ ಪ್ರವಾಸದಲ್ಲಿ ಕಳಪೆ ಪ್ರದರ್ಶನ ನೀಡಿರುವುದೇ 40 ಹರೆಯದ ಎಡಗೈ ಬ್ಯಾಟ್ಸ್‌ಮನ್ ಸನತ್‌ರನ್ನು ಆಯ್ಕೆ ಸಮಿತಿ ಕಡೆಗಣಿಸಲು ಕಾರಣವೆನ್ನಲಾಗಿದ್ದು, ಚಮರ ಕಪುಗೇಡರಾ, ಲಸಿತ್ ಮಾಲಿಂಗ ಹಾಗೂ ಅಜಂತಾ ಮೆಂಡೀಸ್‌ರನ್ನು ಕೂಡಾ ತಂಡದಿಂದ ಹೊರಗಟ್ಟಲಾಗಿದೆ.

ಅದೇ ವೇಳೆ ಗಾಯದಿಂದ ಬಳಲುತ್ತಿರುವ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್, ವೇಗಿ ದಿಲ್ಹರಾ ಫೆರ್ನಾಂಡೊ, ಆಲ್‌ರೌಂಡರ್ ಅಂಜೆಲೋ ಮ್ಯಾಥ್ಯೂಸ್ ಹಾಗೂ ಮಾಜಿ ನಾಯಕ ಮಹೇಲಾ ಜಯವರ್ಧನೆರನ್ನು ಕೂಡಾ ತಂಡಕ್ಕೆ ಪರಿಗಣಿಸಲಾಗಿಲ್ಲ.

ಈ ನಾಲ್ವರ ಸ್ಥಾನದಲ್ಲಿ ಹೊಸ ಬ್ಯಾಟ್ಸ್‌ಮನ್ ಲಾಹಿರು ತಿರಿಮಣ್ಣೆ, ಚಮರ ಸಿಲ್ವಾ, ಮಾಲಿಂಗ ಬಂಡಾರಾ ಹಾಗೂ ತಿಲನ್ ತುಷಾರ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 20 ಸಂವತ್ಸರಗಳನ್ನು ಇತ್ತೀಚೆಗಷ್ಟೇ ದಾಟಿದ್ದ ಸನತ್‌ರನ್ನು ಕಡೆಗಣಿಸಿರುವುದು ಲಂಕಾಗೆ ದೊಡ್ಡ ಹಿನ್ನಡೆಯಾಗಲಿದೆ ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 444 ಏಕದಿನ ಪಂದ್ಯಗಳ ಅನುಭವ ಹೊಂದಿರುವ ಜಯಸೂರ್ಯ ಒಟ್ಟು 11,825 ರನ್ ಗಳಿಸಿದ್ದಾರೆ.

ತ್ರಿಕೋನ ಏಕದಿನ ಸರಣಿ ಜನವರಿಂದ 4-13ರ ವರೆಗೆ ನಡೆಯಲಿದೆ.


ಶ್ರೀಲಂಕಾ ತಂಡ ಇಂತಿದೆ:

ಕುಮಾರ ಸಂಗಕ್ಕರ (ನಾಯಕ ಹಾಗೂ ವಿಕೆಟ್ ಕೀಪರ್), ತಿಲಕರತ್ನೆ ದಿಲ್‌ಶಾನ್ (ಉಪನಾಯಕ), ಉಪುಲ್ ತರಂಗ, ತಿಲನ್ ಸಮರವೀರ, ತಿಲನ ಕಂದಾಂಬಿ, ಚಮರ ಸಿಲ್ವಾ, ಲಾಹಿರು ತಿರಿಮಣ್ಣೆ, ತಿಸಾರಾ ಪರೇರಾ, ಮುತ್ತುಮುದಲಿಗೆ ಪುಷ್ಪಕುಮಾರ, ಮಾಲಿಂಗ ಬಂಡಾರಾ, ಸುರಂಗ ರಣಧೀವ್, ತಿಲನ್ ತುಷಾರಾ, ಸುರಂಗ ಲಕ್ಮಲ್, ನುವಾನ್ ಕುಲಶೇಖರ ಮತ್ತು ಚನಕ ವಲಗೇದರಾ.

ತ್ರಿಕೋನ ಸರಣಿ ವೇಳಾಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ...


ಇದರಲ್ಲಿ ಇನ್ನಷ್ಟು ಓದಿ :