Widgets Magazine

ಶ್ರೀಶಾಂತ್‌ನಿಂದ ಸ್ಪಾಟ್‌ಫಿಕ್ಸಿಂಗ್‌ನ 5.5 ಲಕ್ಷ ರೂ. ವಶ

ನವದೆಹಲಿ| ರಾಜೇಶ್ ಪಾಟೀಲ್| Last Modified ಗುರುವಾರ, 30 ಮೇ 2013 (15:07 IST)
PTI
ಐಪಿಎಲ್‌ ಪಂದ್ಯವೊಂದರ ಸ್ಪಾಟ್‌ ಫಿಕ್ಸಿಂಗ್‌ಗೆ ಸಂಬಂಧಪಟ್ಟು ರಾಜಸ್ಥಾನ ರಾಯಲ್ಸ್‌ ತಂಡದ ಆಟಗಾರ ಶ್ರೀಶಾಂತ್‌ಗೆ ಸಂದಿದ್ದ 10 ಲಕ್ಷ ರೂ.ಗಳಲ್ಲಿ 5.5 ಲಕ್ಷ ರೂ.ಗಳನ್ನು ತಾವು ಇಂದು ವಶಪಡಿಸಿಕೊಂಡಿರುವುದಾಗಿ ದಿಲ್ಲಿ ಪೊಲೀಸರು ಹೇಳಿದ್ದಾರೆ.

ಮೇ 16ರಂದು ಶ್ರೀಶಾಂತ್‌ ಬಂಧನವಾದಾಗ ಈ ಮೊತ್ತವನ್ನು ತೆಗೆದಿರಿಸಿದ್ದ ಹಾಗೂ ಅನಂತರ ಸ್ವತಃ ತಾನೂ ಬಂಧನಕ್ಕೆ ಗುರಿಯಾಗಿದ್ದ ಅಭಿಷೇಕ್‌ ಶುಕ್ಲಾ ನೀಡಿದ ಮಾಹಿತಿಯ ಪ್ರಕಾರ ಈ ಮೊತ್ತವನ್ನು ತಾವು ವಶಕ್ಕೆ ತೆಗೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ ಶ್ರೀಶಾಂತ್‌ಗೆ ಸಂಬಂಧಿಸಿದ ಐಪಿಎಲ್‌ ಫಿಕ್ಸಿಂಗ್‌ ಹಣದ ಬಾಬ್ತು ಇಲ್ಲಿಗೆ ಪೂರ್ತಿಯಾದಂತಾಗಿದೆ ಎಂದವರು ಹೇಳಿದ್ದಾರೆ.

ಈವೆಂಟ್‌ ಮ್ಯಾನೇಜರ್‌ ಆಗಿರುವ ಹಾಗೂ ಪ್ರಕೃತ ಸೆರೆಯಲ್ಲಿರುವ ಶುಕ್ಲಾನನ್ನು ಪೊಲೀಸರು ಬುಧವಾರ ಐಪಿಎಲ್‌ ಫಿಕ್ಸಿಂಗ್‌ನ ಬಾಕಿ ಮೊತ್ತವಾಗಿರು 5.55 ಲಕ್ಷ ರೂ.ಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಮುಂಬಯಿಗೆ ಒಯ್ದಿದ್ದರು.


ಇದರಲ್ಲಿ ಇನ್ನಷ್ಟು ಓದಿ :