ಸೋಲಿನ ಸುಳಿಯಲ್ಲಿ ಭಾರತ : ಕಮರಿದ ಫೈನಲ್ ಕನಸು

ಪರ್ತ್, ಶುಕ್ರವಾರ, 30 ಜನವರಿ 2015 (13:25 IST)

 ಏಕದಿನ ಪಂದ್ಯದಲ್ಲಿ ಭಾರತದ ನೀರಸ ಬ್ಯಾಟಿಂಗ್ ಮನಸ್ಥಿತಿ ಮತ್ತೆ ಮುಂದುವರಿದು, ಯಾವುದೇ ವಿಕೆಟ್ ಬೀಳದೇ 83 ರನ್ ಗಳಿಸಿದ್ದ ನಂತರ 3ಕ್ಕೆ 107 ಮತ್ತು 3ಕ್ಕೆ 134ರಿಂದ 9ಕ್ಕೆ 165 ರನ್ ಗಳಿಸಿತು. ಭಾರತ ಮತ್ತೊಮ್ಮೆ ಹೆಚ್ಚುವರಿ ಬೌನ್ಸ್ ಮೈದಾನದಲ್ಲಿ ಬ್ಯಾಟಿಂಗ್ ಆಡಲು ತಿಣುಕಾಡಿತು.

ಭಾರತ 200 ರನ್‌ಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿ ಸಿಕ್ಕಿಬಿದ್ದಿದ್ದು, ಫೈನಲ್ ತಲುಪುವ ಅವಕಾಶದಿಂದಲೂ ವಂಚಿತವಾಗಲಿದೆ. ಮಧ್ಯಮ ಕ್ರಮಾಂಕದಲ್ಲಿ ಶಿಖರ್ ದವನ್ ಮತ್ತು ಅಜಿಂಕ್ಯ ರಹಾನೆ ಉತ್ತಮ ಪ್ರದರ್ಶನ ನೀಡಲು ವಿಫಲರಾದರು. ಸ್ಪಿನ್ನರ್ ಮೊಯಿನ್ ಅಲಿ ವಿರಾಟ್ ಕೊಹ್ಲಿ ಮತ್ತು ಸುರೇಶ್ ರೈನಾ ವಿಕೆಟ್‌ಗಳನ್ನು 8 ಎಸೆತಗಳಲ್ಲಿ ಪಡೆದು ಮಧ್ಯಮಕ್ರಮಾಂಕದ ಬೆನ್ನೆಲುಬು ಮುರಿದರು.

 ಬ್ಯಾಟಿಂಗ್‌ಗೆ ಇದು ಹೇಳಿಮಾಡಿಸಿದ ಮೈದಾನವಾಗಿರಲಿಲ್ಲ. ರೆಹಾನೆ ಮಾತ್ರ ಉತ್ತಮ ಸ್ಕೋರ್ ಕಲೆಹಾಕಿ 73 ರನ್ ಗಳಿಸಿದ್ದರು. ವಿರಾಟ್ ಕೊಹ್ಲಿ ಮೊಯಿನ್ ಅಲಿ ಬೌಲಿಂಗ್‌‍ನಲ್ಲಿ ಸಿ.ಜೆ.ರೂಟ್‌‍ಗೆ ಕ್ಯಾಚಿತ್ತು ಔಟಾದರು.ಸುರೇಶ್ ರೈನಾ ಮೊಯಿನ್ ಅಲಿ ಬೌಲಿಂಗ್‌ನಲ್ಲಿ ಸಿ.ಸಿ. ವೋಕ್ಸ್‌ಗೆ ಕ್ಯಾಚಿತ್ತು ಔಟಾದರು.

ನಂತರ ಕೊನೆಯ ಕ್ರಮಾಂಕದ ಆಟಗಾರರು ದ್ವಿಸಂಖ್ಯೆಯನ್ನು ಕೂಡ ಮುಟ್ಟದೇ ಪೆವಿಲಿಯನ್ ಹಾದಿ ಹಿಡಿದರು. ಭಾರತ ನಿಗದಿತ 50 ಓವರುಗಳನ್ನು ಕೂಡ ಮುಗಿಸಲೇ 48.1 ಓವರುಗಳಿಗೆ 200 ರನ್ ಮಾಡಿ ಆಲ್‌ಔಟಾಯಿತು.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಆಸ್ಟ್ರೇಲಿಯಾ ಓಪನ್: ಸಾನಿಯಾ-ಸೊರೆಸ್ ಜೋಡಿ ಉಪಾಂತ್ಯಕ್ಕೆ

ಮೆಲ್ಬರ್ನ್: ಅಗ್ರ ಶ್ರೇಯಾಂಕದ ಸಾನಿಯಾ ಮಿರ್ಜಾ ಮತ್ತು ಬ್ರುನೊ ಸೊರೆಸ್‌ ಅವರು ಸ್ಥಳೀಯ ಜೋಡಿಯೆದುರು 6-2, ...

news

ಭಾರತ ವಿಶ್ವಕಪ್ ಗೆದ್ದಲ್ಲಿ ಕ್ರಿಕೆಟ್‌ಗೆ ಧೋನಿ ವಿದಾಯ ಸಾಧ್ಯತೆ

ಸಿಡ್ನಿ: ಭಾರತದ ಕ್ರಿಕೆಟ್‌ ನಾಯಕ ಎಂ.ಎಸ್‌. ಧೋನಿ ಅವರು ವಿಶ್ವಕಪ್‌ನಲ್ಲಿ ಮೂರನೆ ಬಾರಿ ಮತ್ತು ಬಹುಶಃ ...

news

ಗಾಯದ ಸಮಸ್ಯೆಯಿಂದ ರೋಹಿತ್ ಶರ್ಮಾಗೆ ವಿಶ್ರಾಂತಿ

ಪರ್ಥ್: ತ್ರಿಕೋನ ಏಕದಿನ ಸರಣಿಯಲ್ಲಿ ರೋಹಿತ್‌ ಶರ್ಮಾ ಅವರನ್ನು ಆಡಿಸದಿರಲು ಟೀಂ ಇಂಡಿಯಾ ಆಡಳಿತ ಮಂಡಳಿ ...

news

ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡ ಪ್ರಬಲ ಎದುರಾಳಿ ತಂಡ: ರಾಹುಲ್ ದ್ರಾವಿಡ್

ನವದೆಹಲಿ: ಫೆಬ್ರವರಿ 14 ರಿಂದ ಆರಂಭವಾಗಲಿರುವ ಕ್ರಿಕೆಟ್ ವಿಶ್ವಕಪ್ ಸಮರದಲ್ಲಿ ನ್ಯೂಜಿಲೆಂಡ್ ತಂಡ ಕಠಿಣ ...

Widgets Magazine