ವರುಣನ ಅರ್ಭಟದಿಂದ ಭಾರತ- ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯ ರದ್ದು

ಸಿಡ್ನಿ, ಸೋಮವಾರ, 26 ಜನವರಿ 2015 (15:47 IST)

adelaide cricket stadium

ವರುಣನ ಅರ್ಭಟದಿಂದಾಗಿ ಮತ್ತು ಆಸ್ಟ್ರೇಲಿಯಾ ವಿರುದ್ಧದ ಕ್ರಿಕೋನ ಸರಣಿ ಪಂದ್ಯ ರದ್ದಾಗಿದೆ. ಭಾರತ 16 ಓವರ್‌ಗಳಲ್ಲಿ 69 ರನ್‌ಗಳನ್ನು ಪೇರಿಸಿರುವಂತೆ ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು.  
 
ಭಾರತ ಬ್ಯಾಟಿಂಗ್ ಆರಂಭಿಸಿ 16 ಓವರ್‌ಗಳಲ್ಲಿ 69 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿರುವಂತೆ ಮಳೆ ಸುರಿಯಲು ಆರಂಭಿಸಿತು. ಸುಮಾರು ಮೂರು ಗಂಟೆಗಳ ಕಾಲ ಮಳೆ ನಿಲ್ಲುವಿಕೆಗಾಗಿ ಕಾಯ್ದರು ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಅಂಪೈರ್ ಪಂದ್ಯವನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದರು. 
 
ಪಂದ್ಯ ರದ್ದುಗೊಂಡಿದ್ದರಿಂದ ಉಭಯ ತಂಡಗಳಿಗೆ ತಲಾ ಎರಡು ಪಾಯಿಂಟ್‌ಗಳನ್ನು ನೀಡಲಾಯಿತು. ಜನೆವರಿ 30 ರಂದು ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಜಯಗಳಿಸಿದ ತಂಡ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
 
ಇಂದು ಬೆಳಿಗೆ ಮಂಜು ಕವಿದಿದ್ದರಿಂದ ಪಂದ್ಯ 40 ನಿಮಿಷ ತಡವಾಗಿ ಆರಂಭವಾಯಿತು. ಭಾರತ ತಂಡ ಮೊದಲಿಗೆ ಶಿಖರ್ ಧವನ್ ವಿಕೆಟ್ ಕಳೆದುಕೊಂಡಿತು. ಏಳನೇ ಓವರ್‌ನಲ್ಲಿ ಅಂಬಟಿ ರಾಯಡು 23 ರನ್‌ಗಳಿಸಿದ್ದಾಗ ಓಟಾಗಿ ಪೆವಿಲಿಯನ್‌ಗೆ ಮರಳಿದರು.
 
 ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ನಷ್ಟ ಪಾವತಿಸಿ, ಇಲ್ಲಾಂದ್ರೆ ಕಾನೂನು ಹೋರಾಟ ಎದುರಿಸಿ: ವಿಂಡೀಸ್‌ ಬೋರ್ಡ್‌ಗೆ ಬಿಸಿಸಿಐ ಎಚ್ಚರಿಕೆ

ಮುಂಬೈ: ಕಳೆದ ವರ್ಷ ಸರಣಿಯನ್ನು ರದ್ದುಗೊಳಿಸಿ 41.97 ಮಿಲಿಯನ್ ಡಾಲರ್‌ಗಳಷ್ಟು ನಷ್ಟ ಉಂಟು ಮಾಡಿದ್ದ ...

news

ವಿರಾಟ್ ಕೊಹ್ಲಿಗೆ ನಾಲ್ಕನೇ ಕ್ರಮಾಂಕ ಸೂಕ್ತ: ವಿವಿಯನ್ ರಿಚರ್ಡ್ಸ್

ಸಿಡ್ನಿ: ಕಳಪೆ ಬ್ಯಾಟಿಂಗ್ ಫಾರ್ಮ್‌ನಿಂದಾಗಿ ಅಗ್ರಶ್ರೇಯಾಂಕದಿಂದ ನಾಲ್ಕನೇ ಸ್ತಾನಕ್ಕೆ ಕುಸಿತ ಕಂಡಿರುವ ...

news

ಬಿಜೆಪಿಯ "ದಾದಾ' ಆಗಲು ನಿರಾಕರಿಸಿದ ಸೌರವ್ ಗಂಗೂಲಿ

ಕೋಲ್ಕತಾ: ಮಾಜಿ ಕ್ರಿಕೆಟಿಗ ಸೌರವ್‌ ಗಂಗೂಲಿ ಅವರು ಬಿಜೆಪಿ ಸೇರಲಿದ್ದಾರೆ. ಪ.ಬಂಗಾಳ ಸಿಎಂ ಮಮತಾ ...

news

ಆಸೀಸ್ ಓಪನ್: ಕನ್ನಡಿಗ ರೋಹಣ್ ಬೋಪಣ್ಣಾ ಶುಭಾರಂಭ

ನವದೆಹಲಿ: ಕರ್ನಾಟಕದ ಟೆನಿಸ್ ತಾರೆ ರೋಹನ್ ಬೋಪಣ್ಣ ಆಸ್ಟ್ರೇಲಿಯನ್ ಓಪನ್‍ನಲ್ಲಿ ಗೆಲವಿನ ಶುಭಾರಂಭ ...

Widgets Magazine
Widgets Magazine