ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡ ಪ್ರಬಲ ಎದುರಾಳಿ ತಂಡ: ರಾಹುಲ್ ದ್ರಾವಿಡ್

ನವದೆಹಲಿ, ಬುಧವಾರ, 28 ಜನವರಿ 2015 (18:39 IST)

ಫೆಬ್ರವರಿ 14 ರಿಂದ ಆರಂಭವಾಗಲಿರುವ ಕ್ರಿಕೆಟ್ ವಿಶ್ವಕಪ್ ಸಮರದಲ್ಲಿ ನ್ಯೂಜಿಲೆಂಡ್ ತಂಡ ಕಠಿಣ ಸ್ಪರ್ಧೆಯೊಡ್ಡುವ ಸಾಧ್ಯತೆಗಳಿವೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಹೇಳಿದ್ದಾರೆ. 
 
ನ್ಯೂಜಿಲೆಂಡ್ ತಂಡದಲ್ಲಿ ಅತ್ಯುತ್ತಮ ವೇಗದ ಬೌಲರ್‌ಗಳಿರುವುದರಿಂದ ಎದುರಾಳಿ ತಂಡಗಳು ತುಂಬಾ ಆಲೋಚಿಸಿ ರಣತಂತ್ರ ರೂಪಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 
 
ನನ್ನ ಅನಿಸಿಕೆಯ ಪ್ರಕಾರ ವಿಶ್ವಕಪ್ 2015ರ ಫೇವರೇಟ್ ತಂಡಗಳಲ್ಲಿ ನ್ಯೂಜಿಲೆಂಡ್ ಕೂಡಾ ಒಂದು. ತವರಿನ ಬೆಂಬಲ ಕೂಡಾ ನ್ಯೂಜಿಲೆಂಡ್‌ಗೆ ಮತ್ತಷ್ಟು ಬಲವನ್ನು ತಂದುಕೊಡುತ್ತದೆ ಎಂದು ತಿಳಿಸಿದ್ದಾರೆ. 
 
ನ್ಯೂಜಿಲೆಂಡ್ ತುಂಬಾ ಚಿಕ್ಕ ದೇಶ. ಆದರೆ ಕ್ರಿಕೆಟ್ ತಂಡ ಉತ್ತಮ ಪ್ರದರ್ಶನ ನೀಡಲಿ ಎಂದು ಅಭಿಮಾನಿಗಳು ಬಯಸುವುದರಿಂದ ತಂಡದ ಆಟಗಾರರು ಗೆಲುವಿನತ್ತ ಮುನ್ನಗ್ಗಲು ಪ್ರಯತ್ನಿಸುತ್ತಾರೆ. ನ್ಯೂಜಿಲೆಂಡ್ ಆಟಗಾರರ ಮೇಲೆ ಒತ್ತಡವಿರುವುದಿಲ್ಲ ಎನ್ನುವುದು ನನ್ನ ಅನಿಸಿಕೆಯಾಗಿದೆ ಎಂದರು. 
 
ನ್ಯೂಜಿಲೆಂಡ್ ತಂಡದ ಬ್ರೆಂಡನ್ ಮೆಕುಲಮ್ ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ತಂಡದ ಅನುಭವಿ ಆಟಗಾರರು ಎದುರಾಳಿ ತಂಡಗಳಿಗೆ ಸಿಂಹಸ್ವಪ್ನವಾಗಬಹುದು ಎಂದು ಹೇಳಿದ್ದಾರೆ.
 
ಉತ್ತಮ ಫಾರ್ಮ್‌ನಲ್ಲಿರುವ ಕಾನೆ ವಿಲಿಯಮ್ಸನ್ ಮೂರನೇ ಕ್ರಮಾಂಕದಲ್ಲಿ ಆಡುವುದರಿಂದ ನ್ಯೂಜಿಲೆಂಡ್ ತಂಡಕ್ಕೆ ವರವಾಗಲಿದ್ದಾರೆ. ಎದುರಾಳಿಗಳಿಗೆ ಆಘಾತ ಮೂಡಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಮಾಜಿ ಟೀಂ ಇಂಡಿಯಾ ತಂಡದ ನಾಯಕ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.  ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ದೆವ್ವದ ಕಾಟಕ್ಕೆ ಆನಾರೋಗ್ಯಕ್ಕೀಡಾದ ಕ್ರಿಕೆಟಿಗ!

ವಿಶ್ವಕಪ್‌ಗೆ ಮುನ್ನ ಏಕದಿನ ಪಂದ್ಯಗಳನ್ನಾಡಲು ನ್ಯೂಜಿಲೆಂಡ್ ತಲುಪಿರುವ ಪಾಕಿಸ್ತಾನಿ ಆಲ್ ರೌಂಡರ್ ...

news

ಸೈನಾ ನೆಹ್ವಾಲ್‌ ಮುಡಿಗೆ ಮತ್ತೊಂದು ಗರಿ

ಲಖನೌ: ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹೊಸ ವರ್ಷದಲ್ಲಿ ಗೆಲವಿನೊಂದಿಗೆ ಶುಭಾರಂಭ

news

ವರುಣನ ಅರ್ಭಟದಿಂದ ಭಾರತ- ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯ ರದ್ದು

ಸಿಡ್ನಿ: ವರುಣನ ಅರ್ಭಟದಿಂದಾಗಿ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಕ್ರಿಕೋನ ಸರಣಿ ಪಂದ್ಯ ರದ್ದಾಗಿದೆ. ...

news

ನಷ್ಟ ಪಾವತಿಸಿ, ಇಲ್ಲಾಂದ್ರೆ ಕಾನೂನು ಹೋರಾಟ ಎದುರಿಸಿ: ವಿಂಡೀಸ್‌ ಬೋರ್ಡ್‌ಗೆ ಬಿಸಿಸಿಐ ಎಚ್ಚರಿಕೆ

ಮುಂಬೈ: ಕಳೆದ ವರ್ಷ ಸರಣಿಯನ್ನು ರದ್ದುಗೊಳಿಸಿ 41.97 ಮಿಲಿಯನ್ ಡಾಲರ್‌ಗಳಷ್ಟು ನಷ್ಟ ಉಂಟು ಮಾಡಿದ್ದ ...

Widgets Magazine
Widgets Magazine