ಮುಂಬೈ: ಮಳೆ ಬಿಟ್ಟರೂ ಹನಿ ತಪ್ಪದು ಎನ್ನುವ ಹಾಗೆ ಅನಿಲ್ ಕುಂಬ್ಳೆ ಕೋಚ್ ಹುದ್ದೆ ತ್ಯಜಿಸಿ ಎಷ್ಟೋ ದಿನವಾದರೂ, ಆ ವಿವಾದ ಇನ್ನೂ ಹಸಿಯಾಗಿಯೇ ಇದೆ. ಇದೀಗ ಟೀಂ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಕೊಹ್ಲಿ ಹೇಳಿದ್ದಕ್ಕೆಲ್ಲಾ ಬಿಸಿಸಿಐ ಅಸ್ತು ಎಂದಿದ್ದೇಕೆ ಎಂದು ಕಿಡಿ ಕಾರಿದ್ದಾರೆ.