ಅಭಿಮಾನಿಗಳ ಆಕ್ರೋಶದ ನಡುವೆಯೇ ಅರ್ಧಶತಕ ದಾಖಲಿಸಿದ ಅಭಿನವ್ ಮುಕುಂದ್

ಗಾಲೆ, ಶನಿವಾರ, 29 ಜುಲೈ 2017 (09:44 IST)

Widgets Magazine

ಗಾಲೆ: ಸಿಕ್ಕಿದ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದೆ ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಕಳಪೆ ಮೊತ್ತಕ್ಕೆ ಔಟಾದ ಅಭಿನವ್ ಮುಕುಂದ್ ವೃತ್ತಿ ಜೀವನಕ್ಕೆ ಶ್ರದ್ಧಾಂಜಲಿ ಸಮರ್ಪಿಸುವ ಮೂಲಕ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.


 
ಆದರೆ ದ್ವಿತೀಯ ಇನಿಂಗ್ಸ್ ನಲ್ಲಿ 82 ರನ್ ಗಳಿಸಿದ ಮುಕುಂದ್ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಅಲ್ಲದೆ, ಮೊದಲ ಇನಿಂಗ್ಸ್ ನ ಶತಕಧಾರಿಗಳಾದ ಚೇತೇಶ್ವರ ಪೂಜಾರ ಮತ್ತು ಶಿಖರ್ ಧವನ್ ದ್ವಿತೀಯ ಇನಿಂಗ್ಸ್ ನಲ್ಲಿ ಕಳಪೆ ಮೊತ್ತಕ್ಕೆ ಔಟಾಗಿ ಆಘಾತ ಮೂಡಿಸಿದ್ದಾಗ ನಾಯಕ ಕೊಹ್ಲಿ ಜತೆ ಸೇರಿಕೊಂಡು ಮಹತ್ವದ ಜತೆಯಾಟವಾಡಿದ್ದಾರೆ.
 
ಆದರೆ ಶತಕ ಸ್ವಲ್ಪದರಲ್ಲೇ ಅವರ ಕೈ ತಪ್ಪಿದೆ. ದಿನದಾಟದ ನಂತರ ಮಾತನಾಡಿದ ಅವರು ‘ನಾನು ಹಿಂದೆ ಏನಾಗಿದೆಯೋ, ಮುಂದೆ ಏನಾಗುತ್ತದೋ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಮಾತ್ರ ಯೋಚಿಸುತ್ತೇನೆ’ ಎಂದು ತಮ್ಮ ಫಾರ್ಮ್ ಬಗ್ಗೆ ಹೇಳಿಕೊಂಡಿದ್ದಾರೆ.
 
ಇದನ್ನೂ ಓದಿ..  ಶ್ರೀಲಂಕಾ ಟೆಸ್ಟ್ ನಲ್ಲಿ ನೂತನ ದಾಖಲೆ ಬರೆದ ಕೊಹ್ಲಿ, ಧವನ್
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಶ್ರೀಲಂಕಾ ಟೆಸ್ಟ್ ನಲ್ಲಿ ನೂತನ ದಾಖಲೆ ಬರೆದ ಕೊಹ್ಲಿ, ಧವನ್

ಗಾಲೆ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ...

news

ಚೆಸ್ ಆಡಿದ್ದಕ್ಕೂ ಬೈಸಿಕೊಂಡ ಕ್ರಿಕೆಟಿಗ ಮೊಹಮ್ಮದ್ ಕೈಫ್

ನವದೆಹಲಿ: ಇತ್ತೀಚೆಗೆ ಮುಸ್ಲಿಂ ಧರ್ಮಕ್ಕೆ ಸೇರಿದ ಕ್ರಿಕೆಟಿಗರ ಮೇಲೆ ಸಂಪ್ರದಾಯವಾದಿಗಳು ಸಾಮಾಜಿಕ ...

news

ಪಿಟಿ ಉಷಾ, ಸೆಹ್ವಾಗ್ ಗೆ ಪ್ರಶಸ್ತಿ ಆರಿಸುವ ನೌಕರಿ!

ನವದೆಹಲಿ: ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮತ್ತು ಓಟದ ರಾಣಿ ಪಿಟಿ ಉಷಾ ಕೇಂದ್ರ ಸರ್ಕಾರದ ...

news

500 ಅಡಿ ಜಾಗಕ್ಕಾಗಿ ಮಿಥಾಲಿ ರಾಜ್ ರನ್ನು ಸತಾಯಿಸುತ್ತಿದೆಯಾ ಸರ್ಕಾರ?!

ಹೈದರಾಬಾದ್: ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಯಶಸ್ವಿಯಾಗಿ ವಿಶ್ವಕಪ್ ಫೈನಲ್ ವರೆಗೆ ತಲುಪಿಸಿದ ನಾಯಕಿ ...

Widgets Magazine