ದ್ರಾವಿಡ್ ನಂತರ ವಿರಾಟ್ ಕೊಹ್ಲಿಯನ್ನು ಅನುಕರಿಸಬೇಡಿ ಎಂದ ಮತ್ತೊಬ್ಬ ಕ್ರಿಕೆಟಿಗ

ಮುಂಬೈ, ಶುಕ್ರವಾರ, 3 ನವೆಂಬರ್ 2017 (10:41 IST)

ಮುಂಬೈ: ವಿರಾಟ್ ಕೊಹ್ಲಿ ಆಕ್ರಮಣಕಾರಿ ಸ್ವಭಾವ ನೋಡಿದರೆ ಆತಂಕವಾಗುತ್ತದೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದರು. ಇದೀಗ ಅದೇ ಥರದ ಅಭಿಪ್ರಾಯವನ್ನು ಮತ್ತೊಬ್ಬ ಮಾಜಿ ಕ್ರಿಕೆಟಿಗ ಹೊರಹಾಕಿದ್ದಾರೆ.


 
ಕೊಹ್ಲಿ ಸ್ವಭಾವ ತೀರಾ ಆಕ್ರಮಣಕಾರಿ. ಅದು ಅವರ ಸ್ವಭಾವ. ಆದರೆ ಅವರ ಸ್ವಭಾವವನ್ನು ಇತರ ಆಟಗಾರರೂ ಅನುಕರಿಸಬೇಕೆಂದಿಲ್ಲ. ಒಂದು ಬಲವಂತವಾಗಿ ಅನುಕರಿಸಲು ಹೋದರೆ ಎಲ್ಲಾ ಸಂದರ್ಭದಲ್ಲೂ ತಮ್ಮ ಸ್ವಭಾವಕ್ಕೆ ವಿರುದ್ಧವಾಗಿ ನಡೆದುಕೊಳ್ಳಲು ಸಾಧ್ಯವಿಲ್ಲ. ಇದು ಆಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಡಂ ಗಿಲ್ ಕ್ರಿಸ್ಟ್ ಅಭಿಪ್ರಾಯಪಟ್ಟಿದ್ದಾರೆ.
 
ಹಾಗಾಗಿ ಬಲವಂತವಾಗಿ ಕೊಹ್ಲಿ ಹಾಗಿರಲು ಪ್ರಯತ್ನ ಮಾಡಬೇಡಿ ಎಂದು ಯುವ ಕ್ರಿಕೆಟಿಗರಿಗೆ ಗಿಲ್ ಕ್ರಿಸ್ಟ್ ಸಲಹೆ ಮಾಡಿದ್ದಾರೆ. ಇತ್ತೀಚೆಗೆ ರಾಹುಲ್ ದ್ರಾವಿಡ್ ಕೂಡಾ ವಿರಾಟ್ ಕೊಹ್ಲಿಯಂತೆ ಅತಿಯಾದ ಆಕ್ರಮಣಕಾರಿ ಸ್ವಭಾವ ಅನುಕರಿಸಲು ಹೋಗುವುದು ಒಳ್ಳೆಯದಲ್ಲ ಎಂಬರ್ಥದಲ್ಲಿ ಮಾತನಾಡಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಮ್ಯಾಚ್ ಫಿಕ್ಸಿಂಗ್ ನಲ್ಲಿ ಟೀಂ ಇಂಡಿಯಾ ಆಟಗಾರ? ಶ್ರೀಶಾಂತ್ ಬಾಯ್ಬಿಟ್ಟ ಸ್ಪೋಟಕ ರಹಸ್ಯ!

ಕೊಚ್ಚಿ: ಐಪಿಎಲ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ ಕಳಂಕದಿಂದಾಗಿ ಟೀಂ ಇಂಡಿಯಾಕ್ಕೆ ಮರಳಿ ಬರಲು ...

news

ನಿವೃತ್ತಿ ಸುತ್ತ ಸುತ್ತಿಕೊಂಡ ವಿವಾದ ಬಗೆಹರಿಸಿದ ಆಶಿಷ್ ನೆಹ್ರಾ

ನವದೆಹಲಿ: ಟೀಂ ಇಂಡಿಯಾದಲ್ಲಿ ಹಲವು ಜನಪ್ರಿಯ ಕ್ರಿಕೆಟಿಗರಿಗೇ ಸಿಗದ ವೈಭವದ ವಿದಾಯ ಆಶಿಷ್ ನೆಹ್ರಾಗೆ ...

news

ಪಂದ್ಯದ ನಡುವೆ ವಾಕಿ ಟಾಕಿ ಬಳಸಿ ವಿವಾದಕ್ಕೊಳಗಾದ ವಿರಾಟ್ ಕೊಹ್ಲಿ

ನವದೆಹಲಿ: ನ್ಯೂಜಿಲೆಂಡ್ ವಿರುದ್ಧ ಮೊದಲನೇ ಟಿ20 ಪಂದ್ಯದ ವೇಳೆ ಡಗ್ ಔಟ್ ನಲ್ಲಿ ಕುಳಿತಿದ್ದ ಟೀಂ ಇಂಡಿಯಾ ...

news

ಒಂದೇ ಪಂದ್ಯದಲ್ಲಿ 136 ವೈಡ್ ಬಾಲ್!

ನವದೆಹಲಿ: ಒಂದು ಪಂದ್ಯದಲ್ಲಿ ಇತರೆ ರನ್ ಎಂದರೆ ಎಷ್ಟು ನೀಡಬಹುದು? ಅದರಲ್ಲೂ ವೈಡ್ ಬಾಲ್? ಅಬ್ಬಬ್ಬಾ ಎಂದರೆ ...

Widgets Magazine
Widgets Magazine