ವಿರಾಟ್ ಕೊಹ್ಲಿ ಮೇಲೆ ಇನ್ನೊಂದು ಗಂಭೀರ ಆರೋಪ ಹೊರಿಸಿದ ಆಸೀಸ್ ಮಾಧ್ಯಮ

Mumbai, ಸೋಮವಾರ, 13 ಮಾರ್ಚ್ 2017 (10:08 IST)

Widgets Magazine

ಮುಂಬೈ: ದ್ವಿತೀಯ ಟೆಸ್ಟ್ ಪಂದ್ಯ ಸೋತ ಮೇಲೆ ಆಸ್ಟ್ರೇಲಿಯಾ ಟೀಂ ಇಂಡಿಯಾ ಆಟಗಾರರ ಮೇಲೆ  ಒಂದಲ್ಲ ಒಂದು ರೀತಿಯಲ್ಲಿ ದಾಳಿ ನಡೆಸುತ್ತಲೇ ಇದೆ. ಮೊನ್ನೆಯಷ್ಟೇ ವಿರಾಟ್ ಕೊಹ್ಲಿ ಮೇಲೆ ಅನುಚಿತ ವರ್ತನೆ ಆರೋಪ ಹೊರಿಸಿದ್ದ ಆಸೀಸ್ ಪತ್ರಿಕೆ ಇದೀಗ ಇನ್ನೊಂದು ಗಂಭೀರ ಆರೋಪ ಹೊರಿಸಿದೆ.


 
ಈ ಬಾರಿ ತೃತೀಯ ಟೆಸ್ಟ್ ಪಂದ್ಯ ನಡೆಯಲಿರುವ ರಾಂಚಿ ಕ್ರೀಡಾಂಗಣದ ಪಿಚ್ ಆಯ್ಕೆ ವಿಚಾರದಲ್ಲಿ ಕೊಹ್ಲಿ ಮೇಲೆ ಆರೋಪ ಹೊರಿಸಲಾಗಿದೆ. ರಾಂಚಿ ಪಿಚ್ ಕ್ಯುರೇಟರ್ ಹೇಳಿಕೆಯೊಂದನ್ನು ಉಲ್ಲೇಖಿಸಿ ನಾಯಕ ಕೊಹ್ಲಿ ಮತ್ತು ಕೋಚ್ ಅನಿಲ್ ಕುಂಬ್ಳೆ ಯಾವ ಪಿಚ್ ನಲ್ಲಿ ಆಡಬೇಕೆಂದು ನಿರ್ಧರಿಸುತ್ತಿದ್ದಾರೆ ಎಂದು ಡೈಲಿ ಟೆಲಿಗ್ರಾಫ್ ಗುರುತರ ಆರೋಪ ಮಾಡಿದೆ.
 
ಸಾಮಾನ್ಯವಾಗಿ ಯಾವ ಪಿಚ್ ನಲ್ಲಿ ಆಡಬೇಕೆಂದು ಮ್ಯಾಚ್ ಅಧಿಕಾರಿಗಳು ನಿರ್ಧರಿಸುತ್ತಾರೆ. ಆದರೆ ರಾಂಚಿ ಪಿಚ್ ನಲ್ಲಿ ಟೀಂ ಇಂಡಿಯಾದ ನಾಯಕನೇ ನಿರ್ಧರಿಸುತ್ತಿದ್ದಾರೆ ಎಂದು ಪತ್ರಿಕೆಯ ದೂರು. ಇದಕ್ಕೆ ಸ್ಥಳೀಯ ಕ್ಯುರೇಟರ್, ಇಲ್ಲಿರುವ ಪಿಚ್ ನಲ್ಲಿ ಯಾವುದರಲ್ಲಿ ಆಡಬೇಕೆಂದು ತಂಡ ನಿರ್ಧರಿಸುತ್ತದೆ ಎಂದಿದ್ದನ್ನು ಉಲ್ಲೇಖಿಸಿದೆ.
 
ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಕ್ಯುರೇಟರ್ ನಾವು ತಂಡ ಎಂದಿದ್ದು, ಮ್ಯಾಚ್ ಅಧಿಕಾರಿಗಳನ್ನೇ ಹೊರತು, ಟೀಂ ಇಂಡಿಯಾವನ್ನಲ್ಲ. ಕೊಹ್ಲಿ ಪಿಚ್ ನಿರ್ಮಾಣದಲ್ಲಿ ಮೂಗು ತೂರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಟೀಂ ಇಂಡಿಯಾ ಆಕ್ರಮಣ ನೋಡಿ ಆಸ್ಟ್ರೇಲಿಯಾಗೆ ಶಾಕ್!

ರಾಂಚಿ: ಒಂದು ಕಾಲದಲ್ಲಿ ಟೀಂ ಇಂಡಿಯಾ ಆಟಗಾರರು ಹೀಗಿರಲಿಲ್ಲ. ಆದರೆ ಈಗ ಅವರ ಏಟಿಗೆ ಎದುರೇಟು ನೀಡುವ ...

news

ರೇಡಿಯೋದಲ್ಲಿ ಮತ್ತೊಮ್ಮೆ ಕ್ರಿಕೆಟ್ ಕಾಮೆಂಟರಿ ಬರಲಿದೆ!

ಮುಂಬೈ: ಟಿವಿ ಬರುವ ಮೊದಲಿನ ಕಾಲ. ಹಳೆಯ ಕಾಲದ ಕ್ರಿಕೆಟ್ ಪ್ರಿಯರಿಗೆ ಕಾಮೆಂಟರಿ ಕೇಳಲು ರೇಡಿಯೋ ಒಂದೇ ...

news

ಅನಿಲ್ ಕುಂಬ್ಳೆ ಸ್ಥಾನಕ್ಕೆ ರಾಹುಲ್ ದ್ರಾವಿಡ್

ಪ್ರಸ್ತುತ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಮುಗಿದ ಬಳಿಕ ಟೀಮ್ ಇಂಡಿಯಾ ಹೆಡ್ ಕೋಚ್ ...

news

ರಾಂಚಿ ಟೆಸ್ಟ್ ಪಂದ್ಯಕ್ಕೆ ಧೋನಿ ಬರೋದಿಲ್ಲ

ರಾಂಚಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ತೃತೀಯ ಟೆಸ್ಟ್ ಪಂದ್ಯ ಧೋನಿ ತವರೂರಾದ ರಾಂಚಿ ಕ್ರೀಡಾಂಗಣದಲ್ಲಿ ...

Widgets Magazine Widgets Magazine