ಬೌಲ್ಡ್ ಆದರೂ ಡಿಆರ್ ಎಸ್ ಪಡೆದಿದ್ದ ಬಾಂಗ್ಲಾ ಬ್ಯಾಟ್ಸ್ ಮನ್ !

Dhaka, ಮಂಗಳವಾರ, 14 ಮಾರ್ಚ್ 2017 (09:37 IST)

Widgets Magazine

ಢಾಕಾ:  ಜಾಗತಿಕ ಕ್ರಿಕೆಟ್ ನಲ್ಲಿ ಈಗ ಡಿಆರ್ ಎಸ್ ನಿಯಮದ್ದೇ ಚರ್ಚೆ. ಅದರ ಸದ್ಬಳಕೆ, ದುರ್ಬಳಕೆ, ತಲೆ ಬುಡವಿಲ್ಲದೆ ಬಳಕೆ ಮಾಡುವುದರಿಂದ ಹಿಡಿದು ಡಿಆರ್ ಎಸ್ ಬಹು ಚರ್ಚಿತ ವಿಷಯ.


 
ಆದರೆ ಬಾಂಗ್ಲಾದೇಶ ಬ್ಯಾಟ್ಸ್ ಮನ್ ಗಳು ಡಿಆರ್ ಎಸ್ ತೆಗೆದುಕೊಳ್ಳುವ ವಿಚಾರದಲ್ಲಿ ನೆರೆಯ ಪಾಕಿಸ್ತಾನವನ್ನೂ ಮೀರಿಸಿದ್ದಾರೆ. ಪಾಕಿಸ್ತಾನ ನಾಯಕ ಮಿಸ್ಬಾ ಉಲ್ ಹಕ್, ಆಸ್ಟ್ರೇಲಿಯಾದಲ್ಲಿ ಮಾರು ದೂರ ಚೆಂಡು ಹೋಗುತ್ತಿದ್ದರೂ, ಕ್ಯಾಚಿಂಗ್ ಗೆ ಡಿಆರ್ ಎಸ್ ತೆಗೆದುಕೊಂಡು ನಗೆಪಾಟಲಿಗೀಡಾಗಿದ್ದರು.
 
ಆದರೆ ಬಾಂಗ್ಲಾ ಬ್ಯಾಟ್ಸ್ ಮನ್ ಸೌಮ್ಯ ಸರ್ಕಾರ್ ಬೌಲ್ಡ್ ಆದರೂ, ಡಿಆರ್ ಎಸ್ ಪಡೆದು ಸುದ್ದಿಯಾಗಿದ್ದಾರೆ. ಇದು ನಡೆದಿದ್ದು, ಶ್ರೀಲಂಕಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ. ಅಸೇಲಾ ಗುಣರತ್ನೆ ಬೌಲಿಂಗ್ ನಲ್ಲಿ ಬೌಲ್ಡ್ ಆದ ಸರ್ಕಾರ್  ಡಿಆರ್ ಎಸ್ ಗೆ ಮನವಿ ಸಲ್ಲಿಸಿ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರ ಅಣಕಕ್ಕೆ ಗುರಿಯಾದರು.
 
ಬಾಂಗ್ಲಾ ಬ್ಯಾಟ್ಸ್ ಮನ್ ನ ಈ ಹೆಡ್ಡುತನಕ್ಕೆ ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದು ನಾಳೆಯಿಂದ ನೂರನೇ ಟೆಸ್ಟ್ ಪಂದ್ಯವಾಡಲಿರುವ ಬಾಂಗ್ಲಾದೇಶವನ್ನು ಮುಜುಗರಕ್ಕೀಡು ಮಾಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಸೌಮ್ಯ ಸರ್ಕಾರ್ ಬಾಂಗ್ಲಾದೇಶ ಕ್ರಿಕೆಟ್ ತಂಡ ಡಿಆರ್ ಎಸ್ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು Drs Soumya Sarkar Cricket News Sports News Bangladesh Cricket Team

Widgets Magazine

ಕ್ರಿಕೆಟ್‌

news

ವಿರಾಟ್ ಕೊಹ್ಲಿ ಬಗ್ಗೆ ಮ್ಯಾಥ್ಯೂ ಹೇಡನ್ ಕೊಟ್ಟ ತೀರ್ಪು!

ಮುಂಬೈ: ವಿರಾಟ್ ಕೊಹ್ಲಿ ವರ್ತನೆ ಬಗ್ಗೆ, ಡಿಆರ್ ಎಸ್ ವಿಚಾರದಲ್ಲಿ ಅವರು ನಡೆದುಕೊಂಡ ಬಗ್ಗೆ ...

news

ಬ್ಯಾಟಿಂಗ್ ವೈಫಲ್ಯಕ್ಕೆ ತಕ್ಕ ಬೆಲೆ ತೆತ್ತ ವಿರಾಟ್ ಕೊಹ್ಲಿ

ದುಬೈ: ಆಸ್ಟ್ರೇಲಿಯಾ ಟೆಸ್ಟ್ ಸರಣಿ ಆರಂಭವಾದಾಗಿನಿಂದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಯಾಕೋ ಕ್ಲಿಕ್ ಆಗಿಲ್ಲ. ...

news

ಚಾಂಪಿಯನ್ಸ್ ಟ್ರೋಫಿಯಲ್ಲಿ ಧೋನಿ ಹಣೆಬರಹ ನಿರ್ಧಾರ

ರಾಂಚಿ: ಕ್ರಿಕೆಟಿಗ ಧೋನಿ ಮುಂದಿನ ಕ್ರಿಕೆಟ್ ಭವಿಷ್ಯ ಏನೆಂದು ಚಾಂಪಿಯನ್ಸ್ ಟ್ರೋಫಿಯಲ್ಲಿ ...

news

ಒಂದೇ ಇನ್ನಿಂಗ್ಸ್`ನಲ್ಲಿ ಅರ್ಧಶತಕ ಸಿಡಿಸಿದ ಅಪ್ಪ-ಮಗ..!

ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ 22 ವರ್ಷಗಳ ಕಾಲ ಸುದೀರ್ಘ ಕ್ರಿಕೆಟ್ ಆಡಿದ ಆಟಗಾರ. ಅಪ್ಪ ...

Widgets Magazine