Widgets Magazine
Widgets Magazine

ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಆಯ್ಕೆ ಹಿಂದಿದೆಯಾ ದೊಡ್ಡ ರಹಸ್ಯ?

Mumbai, ಗುರುವಾರ, 13 ಜುಲೈ 2017 (11:08 IST)

Widgets Magazine

ಮುಂಬೈ: ಟೀಂ ಇಂಡಿಯಾ ಎ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ರಾಹುಲ್ ದ್ರಾವಿಡ್ ಗೆ ಹೆಚ್ಚುವರಿಯಾಗಿ ಟೀಂ ಇಂಡಿಯಾದ ವಿದೇಶಿ ಸರಣಿಗಳ ಬ್ಯಾಟಿಂಗ್ ಕೋಚ್ ಹುದ್ದೆಯನ್ನು ನೀಡಲಾಗಿದೆ. ಆದರೆ ಇದರ ಹಿಂದೆ ಇನ್ನೊಂದು ರಹಸ್ಯವಿದೆಯಾ?


 
ಹೌದು ಎನ್ನುತ್ತಿವೆ ಕೆಲವು ಆಂಗ್ಲ ಮಾಧ್ಯಮ ವರದಿಗಳು. ರಾಹುಲ್ ದ್ರಾವಿಡ್ ಗೆ ಇತ್ತೀಚೆಗೆ ಎ ತಂಡದ ಕೋಚ್ ಆಗಿ 12 ತಿಂಗಳ ಹೊಸ ಗುತ್ತಿಗೆ ನೀಡಿತ್ತು. ಅದರಿಂದಾಗಿ ದ್ರಾವಿಡ್ ತಮ್ಮ ಐಪಿಎಲ್ ತಂಡಕ್ಕೆ ಗುಡ್ ಬೈ ಹೇಳಬೇಕಾಗಿ ಬಂತು. ಇದರಿಂದಾಗಿ ದ್ರಾವಿಡ್ ಎರಡು ತಿಂಗಳ ತರಬೇತಿಗೆ ಪಡೆಯುತ್ತಿದ್ದ ದೊಡ್ಡ ಮೊತ್ತದ ಹಣವನ್ನು ಕೈ ಬಿಟ್ಟಿದ್ದರು.
 
ಇದೀಗ ಆ ನಷ್ಟ ತುಂಬಿಕೊಡಲೆಂದೇ ಬಿಸಿಸಿಐ ದ್ರಾವಿಡ್ ಇಂತಹದ್ದೊಂದು ಭರ್ಜರಿ ಆಫರ್ ಕೊಟ್ಟಿದೆಯಾ? ಹಾಗಂತ  ಅಂದಾಜು ಮಾಡಲಾಗಿದೆ. ಇದೀಗ ದ್ರಾವಿಡ್ ಎಲ್ಲಾ ಸಂದರ್ಭಗಳಲ್ಲೂ ತಂಡದ ಜತೆ ಪ್ರಯಾಣಿಸಬೇಕಿಲ್ಲ. ಅಗತ್ಯ ಬಂದಾಗ ತಂಡದ ಜತೆಗಿರಬೇಕು. ಇದಕ್ಕಾಗಿ ಬಿಸಿಸಿಐ ಹೊಸ ನಿಯಮವೊಂದನ್ನು ತರಲು ಪ್ರಯತ್ನ ನಡೆಸಿದೆ.
 
ಈ ಹೊಸ ನಿಯಮ ಪ್ರಕಾರ ದ್ರಾವಿಡ್ ಹೊಸ ಜವಾಬ್ದಾರಿಗೆ ಎಷ್ಟು ಪೇಮೆಂಟ್ ಮಾಡಬೇಕೆನ್ನುವುದನ್ನು ವಿಚಾರ ಮಾಡುತ್ತಿದೆಯಂತೆ. ಇದೀಗ ದ್ರಾವಿಡ್ ತಮ್ಮ 12 ತಿಂಗಳ ಗುತ್ತಿಗೆಗೆ 4.5 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಐಪಿಎಲ್ ನ ಎರಡು ತಿಂಗಳ ಜವಾಬ್ದಾರಿ ಬಿಟ್ಟಿದ್ದರಿಂದ ಅವರಿಗೆ 4 ಕೋಟಿ ರೂ. ನಷ್ಟವಾಗಿತ್ತು.
 
ಇದನ್ನೂ ಓದಿ.. ನಗೆಪಾಟಲಿಗೀಡಾದ ವಿರಾಟ್ ಕೊಹ್ಲಿ.. ಕಾರಣ ಏನು ಗೊತ್ತಾ?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಮಹಿಳಾ ಕ್ರಿಕೆಟರ್ ವಿಷಯದಲ್ಲಿ ಎಡವಟ್ಟು ಮಾಡಿ ನಗೆ ಪಾಟಲಿಗೀಡಾದ ವಿರಾಟ್ ಕೊಹ್ಲಿ

ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ನಿನ್ನೆ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ...

news

ಧೋನಿ, ಯುವರಾಜ್ ಗೆ ನಿರ್ಗಮನದ ಬಾಗಿಲು ತೋರಿಸ್ತಾರಾ ರವಿಶಾಸ್ತ್ರಿ?!

ಮುಂಬೈ: ಟೀಂ ಇಂಡಿಯಾದ ಹೊಸ ಕೋಚ್ ಆಗಿ ಆಯ್ಕೆಯಾದ ರವಿಶಾಸ್ತ್ರಿ ಮುಂದಿನ ವಿಶ್ವಕಪ್ ವರೆಗೆ ಕೋಚ್ ಆಗಿ ...

news

ಬಿಸಿಸಿಐ ತಲೆಕೆಡಿಸಿಕೊಂಡಿದ್ದರೆ ವಿರಾಟ್ ಕೊಹ್ಲಿ ಏನು ಮಾಡುತ್ತಿದ್ದರು ಗೊತ್ತೇ?

ಮುಂಬೈ: ನಾಯಕನಿಗೂ ಮೆಚ್ಚುಗೆಯಾಗುವಂತಹ ಟೀಂ ಇಂಡಿಯಾ ನೂತನ ಕೋಚ್ ಯಾರಾಗಬಹುದು ಬಿಸಿಸಿಐ ಮತ್ತು ಅದರ ...

news

ಕೋಚ್ ಆಗುತ್ತಲೇ ಉಲ್ಟಾ ಹೊಡೆದ ರವಿ ಶಾಸ್ತ್ರಿ

ಮುಂಬೈ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾದ ಬೆನ್ನಲ್ಲೇ ರವಿಶಾಸ್ತ್ರಿ ತಮ್ಮ ವರಸೆ ...

Widgets Magazine Widgets Magazine Widgets Magazine