ಕೆಎಲ್ ರಾಹುಲ್ ಆಡಿಸಲು ಮತ್ತೊಬ್ಬ ಕ್ರಿಕೆಟಿಗನ ಒತ್ತಾಯ

ಜೊಹಾನ್ಸ್ ಬರ್ಗ್, ಶನಿವಾರ, 13 ಜನವರಿ 2018 (08:23 IST)

Widgets Magazine


ಜೊಹಾನ್ಸ್ ಬರ್ಗ್: ಇಂದು ಆರಂಭವಾಗಲಿರುವ ದ.ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಕೆಎಲ್ ರಾಹುಲ್ ರನ್ನು ಆಡಿಸಲು ಮತ್ತಷ್ಟು ಒತ್ತಾಯ ಕೇಳಿಬಂದಿದ್ದು ಇದೀಗ ಮಾಜಿ ಕ್ರಿಕೆಟಿಗ ಚಂದು ಬೋರ್ಡೆ ಇದಕ್ಕೆ ಧ್ವನಿಗೂಡಿಸಿದ್ದಾರೆ.
 

ಮೊದಲ ಟೆಸ್ಟ್ ನಲ್ಲಿ ರಾಹುಲ್ ರನ್ನು ತಂಡ ಕಣಕ್ಕಿಳಿಸಿರಲಿಲ್ಲ. ಈ ಪಂದ್ಯವನ್ನು ಭಾರತ ಹೀನಾಯವಾಗಿ ಸೋತಿತ್ತು. ಇದೀಗ ಗೆಲ್ಲುವ ಅನಿವಾರ್ಯತೆಯಲ್ಲಿರುವ ತಂಡಕ್ಕೆ ಸಾಕಷ್ಟು ಟಿಪ್ಸ್ ಕೇಳಿಬರುತ್ತಿದೆ.
 
ಅದರಲ್ಲೂ ಕೆಎಲ್ ರಾಹುಲ್ ರನ್ನು ಆಡಿಸುವಂತೆ ಸಚಿನ್, ಗಂಗೂಲಿ ಸೇರಿದಂತೆ ಘಟಾನುಘಟಿಗಳು ಸಲಹೆ ನೀಡಿದ್ದಾರೆ. ಇದೀಗ  ಆ ಸಾಲಿಗೆ ಚಂದು ಬೋರ್ಡೆ ಸೇರಿಕೊಂಡಿದ್ದಾರೆ. ‘ಮೊದಲ ಟೆಸ್ಟ್ ನಲ್ಲಿ ನಮ್ಮ ಬ್ಯಾಟ್ಸ್ ಮನ್ ಗಳು ಆಫ್ ಸ್ಟಂಪ್ ನಾಚೆ ಹೋಗುವ ಬಾಲ್ ಗಳನ್ನು ಕೆಣಕಿ ಔಟಾಗಿದ್ದರು. ಹೀಗಾಗಿ ನಾನು ಧವನ್ ಬದಲಿಗೆ ರಾಹುಲ್ ರನ್ನು ಆರಂಭಿಕರಾಗಿ ನೋಡಲು ಬಯಸುತ್ತೇನೆ. ರಾಹುಲ್ ಆಫ್ ಸ್ಟಂಪ್ ನಾಚೆ ಹೋಗುವ ಬಾಲ್ ಗಳನ್ನು ಚೆನ್ನಾಗಿ ನಿಭಾಯಿಸುತ್ತಾರೆ’ ಎಂದು ಬೋರ್ಡೆ ಅಭಿಪ್ರಾಯಪಟ್ಟಿದ್ದಾರೆ.
 
ಕೆಲವು ಮೂಲಗಳ ಪ್ರಕಾರ ಇಂದಿನ ಪಂದ್ಯದಲ್ಲಿ ಶಿಖರ್ ಧವನ್ ಬದಲಿಗೆ ಕೆಎಲ್ ರಾಹುಲ್ ಆಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇದು ಎಷ್ಟರಮಟ್ಟಿಗೆ ನಿಜವಾಗುತ್ತದೆ ಎಂದು ಕೆಲವೇ ಕ್ಷಣಗಳಲ್ಲಿ ತಿಳಿಯಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ದ್ವಿತೀಯ ಟೆಸ್ಟ್ ಪಂದ್ಯಕ್ಕೆ ರವಿಚಂದ್ರನ್ ಅಶ್ವಿನ್ ಬತ್ತಳಿಕೆಯಲ್ಲಿ ಸಿದ್ಧಗೊಂಡಿದೆ ಹೊಸ ಅಸ್ತ್ರ!

ಜೊಹಾನ್ಸ್ ಬರ್ಗ್: ದ.ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಭಾರತೀಯ ತಂಡ ತಯಾರಾಗುತ್ತಿದ್ದು ...

news

ಈ ಗ್ಲೌಸ್ ಅನ್ನು ಸೆಹ್ವಾಗ್ ಅವರು ಯಾರಿಗಾಗಿ ಮಾಡಿದ್ದಾರೆ ಗೊತ್ತಾ...?

ಮುಂಬೈ : ಟೀಂ ಇಂಡಿಯಾದ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ಟೀಂ ಇಂಡಿಯಾದ ಇನ್ನೊಬ್ಬ ಆಟಗಾರರಾದ ಪಾರ್ಥಿವ್ ...

news

ಈ ಭಾರತೀಯ ಕ್ರಿಕೆಟಿಗನಿಗೆ ಪಾಕಿಸ್ತಾನದ ಇಮ್ರಾನ್ ನಾಯಕತ್ವದಲ್ಲಿ ಆಡುವ ಆಸೆಯಿತ್ತಂತೆ!

ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ, ಹಾಲಿ ಕಮೆಂಟೇಟರ್ ಸಂಜಯ್ ಮಂಜ್ರೇಕರ್ ನನಗೆ ಪಾಕಿಸ್ತಾನದ ...

news

‘ಬೆಂಬಲ ಬೇಕಿದ್ದಾಗ ಅಜಿಂಕ್ಯಾ ರೆಹಾನೆಗೆ ಕೋಚ್ ರವಿಶಾಸ್ತ್ರಿ, ನಾಯಕ ಕೊಹ್ಲಿ ಕೈ ಕೊಟ್ಟರು!’

ಮುಂಬೈ: ದ.ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಲಂಕಾ ಸರಣಿಯಲ್ಲಿ ಉತ್ತಮ ...

Widgets Magazine