ರಾಜಸ್ಥಾನ್ ರಾಯಲ್ಸ್ ನಾಯಕ ಅಜಿಂಕ್ಯಾ ರೆಹಾನೆಗೇ ಗಾಳ ಹಾಕುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್

ನವದೆಹಲಿ, ಮಂಗಳವಾರ, 13 ಆಗಸ್ಟ್ 2019 (09:00 IST)

ನವದೆಹಲಿ: ಐಪಿಎಲ್ ಗೆ ಇನ್ನೂ ಸಾಕಷ್ಟು ಸಮಯವಿದೆ. ಹಾಗಿದ್ದರೂ ತಮ್ಮ ತಮ್ಮ ತಂಡಕ್ಕೆ ಅತ್ಯುತ್ತಮ ಆಟಗಾರರನ್ನು ಸೆಳೆಯಲು ಫ್ರಾಂಚೈಸಿಗಳು ಪ್ರಯತ್ನ ಆರಂಭಿಸಿವೆ.


 
ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಡೆಕ್ಕಾನ್ ಚಾರ್ಜರ್ಸ್ ತಂಡದ ಶಿಖರ್ ಧವನ್ ರನ್ನು ಕರೆಸಿಕೊಂಡಿತ್ತು. ಇದರೊಂದಿಗೆ ಡೆಲ್ಲಿ ತಂಡದಲ್ಲಿ ರಿಷಬ್ ಪಂತ್, ಧವನ್ ಸೇರಿದಂತೆ ಸ್ಪೋಟಕ ಬ್ಯಾಟ್ಸ್ ಮನ್ ಗಳ ದಂಡೇ ಸೇರಿತ್ತು.
 
ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಮೀನಿಗೇ ಬಲೆ ಹಾಕಿದೆ. ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದ ಅಜಿಂಕ್ಯಾ ರೆಹಾನೆಯನ್ನು ತಂಡಕ್ಕೆ ಸೆಳೆದುಕೊಳ್ಳಲು ಡೆಲ್ಲಿ ಪ್ರಯತ್ನ ನಡೆಸುತ್ತಿದೆ. ಕಳೆದ ಆವೃತ್ತಿಯಲ್ಲಿ ಧವನ್ ವೈಯಕ್ತಿಕವಾಗಿ ಉತ್ತಮ ನಿರ್ವಹಣೆ ತೋರಿದರೂ ಅವರ ನಾಯಕತ್ವದಲ್ಲಿ ತಂಡದ ಪ್ರದರ್ಶನ ಚೆನ್ನಾಗಿರಲಿಲ್ಲ ಎಂಬ ಕಾರಣಕ್ಕೆ ಐಪಿಎಲ್ ಕೂಟದ ಮಧ್ಯದಲ್ಲಿಯೇ ನಾಯಕತ್ವ ಕಳೆದುಕೊಂಡಿದ್ದರು.
 
ಇದೀಗ ಡೆಲ್ಲಿ ರೆಹಾನೆಯನ್ನು ತಂಡಕ್ಕೆ ಸೆಳೆದುಕೊಳ್ಳಲು ಮಾತುಕತೆ ನಡೆಸುತ್ತಿದೆಯಂತೆ. ಎಲ್ಲವೂ ಅಂತಿಮವಾಗಿಲ್ಲ. ಮಾತುಕತೆ ಹಂತದಲ್ಲಿದೆಯಷ್ಟೇ. ಸದ್ಯದಲ್ಲೇ ಏನೆಂದು ತಿಳಿದುಬರಲಿದೆ ಎಂದು ಡೆಲ್ಲಿ ತಂಡದ ಮೂಲಗಳು ಹೇಳಿವೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಯಾವುದೇ ಹಾಡು ಕೇಳಿದ್ರೂ ಡ್ಯಾನ್ಸ್ ಮಾಡ್ಬೇಕು ಎನಿಸ್ತಿದೆಯಂತೆ ವಿರಾಟ್ ಕೊಹ್ಲಿಗೆ!

ಪೋರ್ಟ್ ಆಫ್ ಸ್ಪೇನ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಪಂದ್ಯದ ನಡುವೆ ವಿಂಡೀಸ್ ನ ಕ್ರಿಸ್ ...

news

ಎಷ್ಟೋ ದಿನದಿಂದ ಕಾಯುತ್ತಿದ್ದ ಶತಕ ಕೊನೆಗೂ ವಿರಾಟ್ ಕೊಹ್ಲಿಯ ಕೈಗೆಟುಕಿತು

ಪೋರ್ಟ್ ಆಫ್ ಸ್ಪೇನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗಿನ ದಿನಗಳಲ್ಲಿ ಶತಕ ಗಳಿಸಿದ್ದು ...

news

ವಿಶ್ವಕಪ್ ತಂಡದಿಂದ ತಮ್ಮ ಕಡೆಗಣಿಸಿದ್ದರ ಬಗ್ಗೆ ಕ್ರಿಕೆಟಿಗ ಅಜಿಂಕ್ಯಾ ರೆಹಾನೆ ಹೇಳಿದ್ದು ಹೀಗೆ!

ಮುಂಬೈ: ಟೀಂ ಇಂಡಿಯಾ ಟೆಸ್ಟ್ ತಂಡದ ಉಪನಾಯಕರಾಗಿರುವ ಅಜಿಂಕ್ಯಾ ರೆಹಾನೆ, ಇತ್ತೀಚೆಗಷ್ಟೇ ಮುಕ್ತಾಯವಾದ ...

news

ವಿರಾಟ್ ಕೊಹ್ಲಿ ವಿಶ್ವದಾಖಲೆಯ ಜತೆಗೆ ಟೀಂ ಇಂಡಿಯಾಗೆ ಗೆಲುವಿನ ನಗೆ

ಪೋರ್ಟ್ ಆಫ್ ಸ್ಪೇನ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಏಕದಿನ ಪಂದ್ಯವನ್ನು ಭಾರತ ಡಕ್ ...