ಧೋನಿಯ ಭೇಟಿ ಮಾಡಲು ಅಪ್ಪನ ಏಟು ತಿಂದ ಅಭಿಮಾನಿ ಬಾಲಕನ ಕತೆ!

Kolkotta, ಗುರುವಾರ, 9 ಮಾರ್ಚ್ 2017 (09:18 IST)

ಕೋಲ್ಕೊತ್ತಾ: ಮಹೇಂದ್ರ ಸಿಂಗ್ ಧೋನಿಗೆ ಎಂತೆಂತಹದ್ದೋ ಹುಚ್ಚು ಅಭಿಮಾನಿಗಳಿದ್ದಾರೆ. ಅವರ ಒಂದು ಅಟೋಗ್ರಾಫ್ ಗಾಗಿ ಅಪ್ಪನ ಏಟಿನ ಬೆದರಿಕೆಯನ್ನೂ ಲೆಕ್ಕಿಸದೆ ಗಂಟೆಗಟ್ಟಲೆ ಕಾದು ಕುಳಿತ ಹುಡುಗನ ಕತೆ ಓದಿ.


 
14 ವರ್ಷದ ಈ ಹುಡುಗ ಕೋಲ್ಕೊತ್ತಾ ಬಳಿಯ ಕಲ್ಯಾಣಿ ನಿವಾಸಿ. ಆತನಿಗೆ ಧೋನಿ ಎಂದರೆ ಎಲ್ಲಿಲ್ಲದ ಅಚ್ಚುಮೆಚ್ಚು. ಒಂದೇ ಒಂದು ಬಾರಿ ಧೋನಿಯ ಬಳಿ ಹೋಗಿ ಅಟೋಗ್ರಾಫ್ ಪಡೆಯಬೇಕೆಂಬ ಹಂಬಲ.
 
ಆದರೆ ಇದಕ್ಕಾಗಿ ಮೊದಲೊಮ್ಮೆ 2 ಗಂಟೆ ಕಾದು ಧೋನಿ ಸಿಗದೇ ನಿರಾಸೆಯಿಂದ ಮರಳಿದವನು ಅಪ್ಪನ ಬಳಿ ಚೆನ್ನಾದಿ ಒದೆತ ತಿಂದಿದ್ದ. ಆದರೆ ಮೊನ್ನೆ ನಡೆದ ವಿಜಯ್ ಹಜಾರೆ ಟ್ರೋಫಿ ಸಮಯದಲ್ಲಿ ಮತ್ತೊಮ್ಮೆ ಹಠ ಬಿಡದೇ ಕೋಲ್ಕೊತ್ತಾ ಬೆಂಗಾಳ ಕ್ರಿಕೆಟ್ ಅಕಾಡೆಮಿ ಬಳಿ ಬಂದಿದ್ದ.
 
ಮನೆಯಲ್ಲಿ ಹೇಳಿದರೆ ಅಪ್ಪನ ಏಟು ಗ್ಯಾರಂಟಿ ಎಂದು ಹೇಳದೇ ಕೇಳದೇ ಮುಂಜಾವಿನ ವೇಳೆಗೇ ಧೋನಿಗಾಗಿ ಕಾದು ಕೂತಿದ್ದ. ಹೀಗೇ ಬರೋಬ್ಬರಿ 11 ಗಂಟೆ ಕಾದು ಕುಳಿತವನು ಕೊನೆಗೆ ಅಲ್ಲಿದ್ದ ಸಿಬ್ಬಂದಿ ಬಳಿ ಅಂಗಲಾಚಿ, ನನಗೆ ಹೇಗಾದರೂ ಧೋನಿಯ ದರ್ಶನ ಮಾಡಿಸಿ. ಅಟೋಗ್ರಾಫ್ ಪಡೆಯಬೇಕು ಎಂದು ಬೇಡಿಕೊಂಡ.
 
ಕೊನೆಗೆ ಅಲ್ಲಿದ್ದವರಿಗೆ ಏನನಿಸಿತೋ, ಧೋನಿಯ ಬಳಿ ಕರೆದುಕೊಂಡು ಹೋಗಿಯೇ ಬಿಟ್ಟರು. ಅಟೋಗ್ರಾಫ್ ಕೂಡಾ ಸಿಕ್ಕಿತು. ಆ ಖುಷಿಯಲ್ಲಿದ್ದವನಿಗೆ ಮರಳಿ ಮನೆಗೆ ಹೋಗಲು ಭಯ. ಹಾಗಾಗಿ ಅಲ್ಲಿದ್ದ ಪೊಲೀಸರಿಗೆ ದಯವಿಟ್ಟು ನನ್ನನ್ನು ಮನೆಗೆ ಕರೆದುಕೊಂಡು ಹೋಗಿ. ಒಬ್ಬನೇ ಹೋದರೆ ಅಪ್ಪನ ಒದೆತ ಗ್ಯಾರಂಟಿ ಎಂದು ಮನವಿ ಮಾಡಿಕೊಂಡ. ಕೊನೆಗೆ ಪೊಲೀಸರೇ ಆತನನ್ನು ಮನೆಗೆ ಕರೆದುಕೊಂಡು ಹೋಗಿ ಬಾಲಕನಿಗೆ ಹೊಡೆಯದಂತೆ ಮನವಿ ಮಾಡಿ ಬಂದು ಬಿಟ್ಟರಂತೆ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಜಡೇಜಾ-ಅಶ್ವಿನ್ ಜೋಡಿ ಮಾಡಿದ ಈ ದಾಖಲೆ ಟೆಸ್ಟ್ ಕ್ರಿಕೆಟ್ ನಲ್ಲಿ ಇದೇ ಮೊದಲು

ಮುಂಬೈ: ರವಿಚಂದ್ರನ್ ಅಶ್ವಿನ್- ರವೀಂದ್ರ ಜಡೇಜಾ ನಡುವೆ ಭಾರತ ತಂಡದ ಶ್ರೇಷ್ಠ ಸ್ಪಿನ್ನರ್ ಯಾರು? ಹೀಗೊಂದು ...

news

ಗಂಗಾನದಿಯಲ್ಲಿ ಅಸ್ಥಿ ವಿಸರ್ಜನೆ: ಗೆಳೆಯನ ಕೊನೆಯಾಸೆ ನೆರವೇರಿಸಿದ ಸ್ವೀವ್ ವಾ

ಸಾವಿನ ನಂತರ ವ್ಯಕ್ತಿಯ ಅಸ್ಥಿಯನ್ನು ಗಂಗಾನದಿಯಲ್ಲಿ ವಿಸರ್ಜಿಸಿದರೆ ಆತನ ಆತ್ಮಕ್ಕೆ ಮುಕ್ಕಿ ಸಿಗುತ್ತದೆ ...

news

ಅಮ್ಮ, ಗೆಳತಿ ಅನುಷ್ಕಾ ಶರ್ಮಾಗೆ ವಿರಾಟ್ ಕೊಹ್ಲಿ ನೀಡಿದ ಭಾವನಾತ್ಮಕ ಸಂದೇಶವಿದು!

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಗೆದ್ದ ಖುಷಿಯಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ...

news

ಟೆಸ್ಟ್ ಪಂದ್ಯ ಗೆದ್ದು ಬಂದ ವಿರಾಟ್ ಕೊಹ್ಲಿ ಬಳಗಕ್ಕೆ ಹೋಟೆಲ್ ನಲ್ಲಿ ಕಾದಿತ್ತು ಅಚ್ಚರಿ!

ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯವನ್ನು ಗೆದ್ದ ರೀತಿ ನೋಡಿ ಟೀಂ ಇಂಡಿಯಾಕ್ಕೆ ...

Widgets Magazine
Widgets Magazine