ಕ್ರಿಕೆಟ್ ಬಿಟ್ಟು ಮಗಳ ಶಾಲೆಗೆ ಓಡಿದ ಧೋನಿ!

ರಾಂಚಿ, ಶನಿವಾರ, 13 ಜನವರಿ 2018 (09:43 IST)

ರಾಂಚಿ: ಬಿಡುವಿನ ವೇಳೆಯನ್ನು ಇತ್ತೀಚೆಗೆ ಕ್ರಿಕೆಟಿಗ ಧೋನಿ ಸರಿಯಾಗಿಯೇ ಬಳಸುತ್ತಾರೆ. ತಮ್ಮ ಮುದ್ದಿನ ಮಗಳ ಜತೆಗೆ ಸಿಗುವ ಕ್ಷಣಗಳನ್ನು ಅವರು ಸ್ವಲ್ಪವೂ ಮಿಸ್ ಮಾಡಿಕೊಳ್ಳಲ್ಲ. ಇದೀಗ ತಮ್ಮ ಮಗಳು ಜೀವಾ ಜತೆ ಶಾಲೆಗೆ ಹೋಗಿದ್ದಾರೆ.
 

ಟೀಂ ಇಂಡಿಯಾ ಸದ್ಯಕ್ಕೆ ಟೆಸ್ಟ್ ಪಂದ್ಯವಾಡುತ್ತಿರುವ ಕಾರಣ ಧೋನಿಗೆ ಬಿಡುವಿನ ಕಾಲ. ಶಾಲೆಗೆ ಹೋಗುತ್ತಿರುವ ಮಗಳು ಜೀವಾಗೆ ಶಾಲೆಯ ವಾರ್ಷಿಕೋತ್ಸವ ಸಂಭ್ರಮವಿತ್ತು. ಈ ಸಂದರ್ಭದಲ್ಲಿ ಧೋನಿ ಕೂಡಾ ಮಗಳಿಗೆ ಜತೆಯಾಗಿದ್ದಾರೆ.
 
ಜೀವಾ ಸ್ನೇಹಿತರ ಜತೆ ಕೂತುಕೊಂಡು ಅವರ ಜತೆ ಮಾತನಾಡುತ್ತಾ ಜಾಲಿಯಾಗಿ ಸಮಯ ಕಳೆದರು. ಅಷ್ಟೇ ಅಲ್ಲ ಈ ಸಂದರ್ಭದಲ್ಲಿ ಜೀವಾ ಸ್ನೇಹಿತರ ಜತೆ ವೇದಿಕೆಯಲ್ಲಿ ನೃತ್ಯ ಮಾಡಿದ್ದಾಳೆ. ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಸರಣಿಯಲ್ಲಿ ಆಡಬೇಕಿದ್ದ ಧೋನಿ ಅದೆಲ್ಲವನ್ನೂ ಬಿಟ್ಟು ಮಗಳ ಜತೆ ಕಾಲ ಕಳೆಯುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಪುತ್ರ ಬ್ಯಾಟಿಂಗ್ ಗೆ ಹೋಗುವ ಮೊದಲು ಸಚಿನ್ ತೆಂಡುಲ್ಕರ್ ಕೊಡುವ ಸಲಹೆ ಏನು ಗೊತ್ತಾ?

ನವದೆಹಲಿ: ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಇದೀಗ ಆಸ್ಟ್ರೇಲಿಯನ್ ಕ್ಲಬ್ ಟೂರ್ನಿಯಲ್ಲೂ ...

news

ಕೆಎಲ್ ರಾಹುಲ್ ಆಡಿಸಲು ಮತ್ತೊಬ್ಬ ಕ್ರಿಕೆಟಿಗನ ಒತ್ತಾಯ

ಜೊಹಾನ್ಸ್ ಬರ್ಗ್: ಇಂದು ಆರಂಭವಾಗಲಿರುವ ದ.ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ...

news

ದ್ವಿತೀಯ ಟೆಸ್ಟ್ ಪಂದ್ಯಕ್ಕೆ ರವಿಚಂದ್ರನ್ ಅಶ್ವಿನ್ ಬತ್ತಳಿಕೆಯಲ್ಲಿ ಸಿದ್ಧಗೊಂಡಿದೆ ಹೊಸ ಅಸ್ತ್ರ!

ಜೊಹಾನ್ಸ್ ಬರ್ಗ್: ದ.ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಭಾರತೀಯ ತಂಡ ತಯಾರಾಗುತ್ತಿದ್ದು ...

news

ಈ ಗ್ಲೌಸ್ ಅನ್ನು ಸೆಹ್ವಾಗ್ ಅವರು ಯಾರಿಗಾಗಿ ಮಾಡಿದ್ದಾರೆ ಗೊತ್ತಾ...?

ಮುಂಬೈ : ಟೀಂ ಇಂಡಿಯಾದ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ಟೀಂ ಇಂಡಿಯಾದ ಇನ್ನೊಬ್ಬ ಆಟಗಾರರಾದ ಪಾರ್ಥಿವ್ ...

Widgets Magazine
Widgets Magazine