Widgets Magazine

ಸ್ವಾತಂತ್ರ್ಯೋತ್ಸವದ ದಿನ ಜಮ್ಮು ಕಾಶ್ಮೀರದಲ್ಲಿ ಧ್ವಜ ಹಾರಿಸಲಿರುವ ಧೋನಿ

ನವದೆಹಲಿ| Krishnaveni K| Last Modified ಶನಿವಾರ, 10 ಆಗಸ್ಟ್ 2019 (09:30 IST)
ನವದೆಹಲಿ: ಎರಡು ತಿಂಗಳ ಕಾಲ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಲು ತೆರಳಿರುವ ಕ್ರಿಕೆಟಿಗ ಧೋನಿ ಆಗಸ್ಟ್ 15 ರ ಸ್ವಾತಂತ್ರ್ಯೋತ್ಸವ ದಿನ ಜಮ್ಮುವಿನಲ್ಲಿ ಧ್ವಜಾರೋಹಣ ಮಾಡಲಿದ್ದಾರೆ ಎನ್ನಲಾಗಿದೆ.

 
ಜಮ್ಮು ಕಾಶ್ಮೀರದ ಲೇಹ್ ನಲ್ಲಿ ಧೋನಿ ಧ್ವಜಾರೋಹಣ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಗಸ್ತು ಪಡೆಯಲ್ಲಿ ಧೋನಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಗಸ್ಟ್ 15 ರವರೆಗೆ ಧೋನಿ ಕರ್ತವ್ಯ ನಿರ್ವಹಿಸಲಿದ್ದಾರೆ.
 
ಹೀಗಾಗಿ ಕೊನೆಯ ದಿನ ಭಾರತೀಯ ಧ್ವಜ ಹಾರಿಸಿ ಗೌರವ ಸಮರ್ಪಿಸಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಸೇನೆಯ ಸಹ ಯೋಧರೊಂದಿಗೆ ಧೋನಿ ವಾಲಿಬಾಲ್ ಆಡುತ್ತಿದ್ದ, ಯೋಧರಿಗಾಗಿ ಹಾಡಿದ ವಿಡಿಯೋಗಳು ವೈರಲ್ ಆಗಿದ್ದವು.
ಇದರಲ್ಲಿ ಇನ್ನಷ್ಟು ಓದಿ :