ಟೀಂ ಇಂಡಿಯಾವನ್ನು ಲೇವಡಿ ಮಾಡಿದ ಲಂಕಾ ನಾಯಕ ಚಂಡಿಮಾಲ್

ದೆಹಲಿ, ಶನಿವಾರ, 2 ಡಿಸೆಂಬರ್ 2017 (09:10 IST)

ದೆಹಲಿ: ಮುಂಬರುವ ದ.ಆಫ್ರಿಕಾ ಪ್ರವಾಸಕ್ಕೆ ಹೊಂದಿಕೊಳ್ಳಲು ಪ್ರಸಕ್ತ ಲಂಕಾ ಸರಣಿಯಲ್ಲಿ ಹಸಿರು ಹುಲ್ಲಿನ ಪಿಚ್ ನಿರ್ಮಿಸುತ್ತಿದ್ದೇವೆಂಬ ಟೀಂ ಇಂಡಿಯಾ ಮತ್ತು ಬಿಸಿಸಿಐ ಹೇಳಿಕೆಯನ್ನು ಲಂಕಾ ನಾಯಕ ದಿನೇಶ್ ಚಂಡಿಮಾಲ್ ಲೇವಡಿ ಮಾಡಿದ್ದಾರೆ.
 

ಕೋಲ್ಕೊತ್ತಾ ಟೆಸ್ಟ್ ಪಂದ್ಯ ನಡೆದಿದ್ದು ವೇಗದ ಪಿಚ್ ನಲ್ಲಿ ಎಂದರೆ ಒಪ್ಪಬಹುದು. ಆದರೆ ನಾಗ್ಪುರ ಮತ್ತು ಇಲ್ಲಿನ (ದೆಹಲಿ) ಪಿಚ್ ನೋಡಿದರೆ ಹಾಗನಿಸುತ್ತಿಲ್ಲ.  ಈ ಪಿಚ್ ಆಫ್ರಿಕಾ ಸರಣಿಗೆ ತಯಾರಿ ನಡೆಸಲು ಮಾಡಿದ ಪಿಚ್ ಎಂದರೆ ತಮಾಷೆ ಎನಿಸುತ್ತದೆ ಎಂದು ದಿನೇಶ್ ಲೇವಡಿ ಮಾಡಿದ್ದಾರೆ.
 
ತಮ್ಮ ತಂಡ ಸರಣಿಯಲ್ಲಿ 1-0 ಯಿಂದ ಹಿನ್ನಡೆ ಪಡೆದಿರುವ ಕಾರಣ ಇಂದಿನ ಟೆಸ್ಟ್ ಮೇಲೆ ಸಂಪೂರ್ಣವಾಗಿ ಗಮನ ಕೇಂದ್ರೀಕರಿಸಿರುವುದಾಗಿ ಹೇಳಿರುವ ದಿನೇಶ್, ‘ನಾವು ಈಗ ನಡೆಯುತ್ತಿರುವ ಟೆಸ್ಟ್ ಸರಣಿ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ. ಆದರೆ ಭಾರತ ಈ ಸರಣಿ ಬಿಟ್ಟು, ಮುಂಬರುವ ಟೆಸ್ಟ್ ಮೇಲೇ ಗಮನ ಹರಿಸಿದಂತಿದೆ’ ಎಂದು ಕಾಲೆಳೆದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕೊಹ್ಲಿಯ ತಲೆನೋವಿಗೆ ಕೆಎಲ್ ರಾಹುಲ್ ತಲೆದಂಡವಾಗುತ್ತಾ?!

ನವದೆಹಲಿ: ಶ್ರೀಲಂಕಾ ವಿರುದ್ಧ ಇಂದಿನಿಂದ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಆರಂಭವಾಗುತ್ತಿದ್ದು, ನಾಯಕ ...

news

ಅನಿಲ್ ಕುಂಬ್ಳೆಗಾಗಿ ಆಯ್ಕೆಗಾರರ ಜತೆ ಜಗಳವಾಡಿದ್ದರಂತೆ ಸೌರವ್ ಗಂಗೂಲಿ!

ಮುಂಬೈ: ಸೌರವ್ ಗಂಗೂಲಿ ಎಂದರೆ ಎಂತಹಾ ಹಠಮಾರಿ ಎನ್ನುವುದು ಕ್ರಿಕೆಟ್ ಪ್ರಿಯರಿಗೆ ಗೊತ್ತಿರುವುದೇ. ಇದೇ ...

news

ಧೋನಿ ಅನುಪಸ್ಥಿತಿಯಲ್ಲಿ ನಾಯಕನಾದಾಗ ಕೊಹ್ಲಿ ಡ್ರೆಸ್ಸಿಂಗ್ ರೂಂನಲ್ಲಿ ಹೇಳಿದ್ದೇನು?

ಮುಂಬೈ: 2014 ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಖಾಯಂ ನಾಯಕ ಧೋನಿ ಗಾಯಗೊಂಡು ತಂಡದಿಂದ ಹೊರಗುಳಿದಾಗ ನಾಯಕತ್ವ ...

news

ವಿರಾಟ್ ಕೊಹ್ಲಿ ಆಸೆಗೆ ಅಸ್ತು ಎಂದಿತು ಬಿಸಿಸಿಐ

ಮುಂಬೈ: ಟೀಂ ಇಂಡಿಯಾ ಆಟಗಾರರ ವೇತನ ಹೆಚ್ಚಿಸಬೇಕೆಂದು ನಾಯಕ ವಿರಾಟ್ ಕೊಹ್ಲಿ ಬೇಡಿಕೆಗೆ ಬಿಸಿಸಿಐ ಆಡಳಿತ ...

Widgets Magazine
Widgets Magazine