ವಿರಾಟ್ ಕೊಹ್ಲಿ ಹೆಸರು ಬರೆಯುವಾಗ ಪ್ರಮಾದ ಮಾಡಿಕೊಂಡ ಇಂಗ್ಲೆಂಡ್ ಆಟಗಾರ್ತಿ!

ನವದೆಹಲಿ, ಮಂಗಳವಾರ, 12 ಸೆಪ್ಟಂಬರ್ 2017 (10:29 IST)

ನವದೆಹಲಿ: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಡೇನಿಯಲ್ ವ್ಯಾಟ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಹೆಸರನ್ನು ತಪ್ಪಾಗಿ ಬರೆದುಕೊಂಡು ಟ್ವಿಟರ್ ನಲ್ಲಿ ಟೀಕೆಗೆ ಗುರಿಯಾಗಿದ್ದಾರೆ.


 
ಮಿಥಾಲಿ ರಾಜ್ ಬಳಗವನ್ನು ವಿಶ್ವಕಪ್ ಫೈನಲ್ ನಲ್ಲಿ ಸೋಲಿಸಿದ ಇಂಗ್ಲೆಂಡ್ ತಂಡದ ನಾಯಕಿ ಡೇನಿಯಲ್ ತಾವ 2014 ರ ಟಿ20 ವಿಶ್ವಕಪ್ ಸಂದರ್ಭದಲ್ಲಿ ಕೊಹ್ಲಿಯಿಂದ ಉಡುಗೊರೆಯಾಗಿ ಪಡೆದಿದ್ದ ಬ್ಯಾಟ್ ನ ಫೋಟೋವೊಂದನ್ನು ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ.
 
ಈ ಬ್ಯಾಟ್ ನ ತುದಿಯಲ್ಲಿ ಅವರು ವಿರಾಟ್ ಕೊಹ್ಲಿ ಎಂದು ಅಭಿಮಾನದಿಂದ ಬರೆದುಕೊಂಡಿದ್ದಾರೆ. ಫೋಟೋದ ಜತೆಗೆ ‘ಈ ಬ್ಯಾಟ್ ನಲ್ಲಿ ಅಭ್ಯಾಸ ನಡೆಸಲು ಉತ್ಸುಕಳಾಗಿದ್ದೇನೆ’ ಎಂದು ಬರೆದುಕೊಂಡಿದ್ದರು.
 
ಆದರೆ ಬ್ಯಾಟ್ ನ ತುದಿಯಲ್ಲಿ ಅವರು ವಿರಾಟ್ ಕೊಹ್ಲಿ ಎಂದು ಬರೆಯುವಾಗ ಸ್ಪೆಲ್ಲಿಂಗ್ ತಪ್ಪು ಮಾಡಿಕೊಂಡಿದ್ದಾರೆ. ಕೊಹ್ಲಿ ಬದಲು ಖೋಲಿ ಎಂದು ಬರೆದುಕೊಂಡಿದ್ದಾರೆ. ಜತೆಗೆ ಖೋಲಿ ಎಂದರೆ ಭಾರತದ ಪ್ರಾದೇಶಿಕ ಭಾಷೆಯಲ್ಲಿ ಕೋಣೆ ಎಂದು ಅರ್ಥ ಎಂದು ಇಂಗ್ಲೆಂಡ್ ಆಟಗಾರ್ತಿಗೆ ಅರ್ಥಮಾಡಿಸಿದ್ದಾರೆ.
 
ಇದನ್ನೂ ಓದಿ.. ಪ್ರಕಾಶ್ ರೈಯ ಈ ಮಾತುಗಳನ್ನು ಕಿಚ್ಚ ಸುದೀಪ್ ಮೆಚ್ಚಿಕೊಂಡಿದ್ದೇಕೆ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಡೇನಿಯಲ್ ವ್ಯಾಟ್ ವಿರಾಟ್ ಕೊಹ್ಲಿ ಬ್ಯಾಟ್ ಟ್ವಿಟರ್ ಕ್ರಿಕೆಟ್ ಸುದ್ದಿಗಳು ಕ್ರಿಡಾ ಸುದ್ದಿಗಳು Bat Twitter Danielle Wyatt Virat Kohli Cricket News Sports News

ಕ್ರಿಕೆಟ್‌

news

ಆರ್ ಸಿಬಿ ಆಟಗಾರರಿಗೆ ಟೀಂ ಇಂಡಿಯಾದಲ್ಲಿ ವಿಶೇಷ ಕೋಟಾ ಇದೆಯೇ?!

ಮುಂಬೈ: ಟೀಂ ಇಂಡಿಯಾದಲ್ಲಿ ಐಪಿಎಲ್ ನ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ...

news

ಭಾರತೀಯ ಆಟಗಾರರ ಪರ ಮತ್ತೆ ಒಲವು ತೋರಿದ ಶಾಹಿದ್ ಅಫ್ರಿದಿ

ಕರಾಚಿ: ಪಾಕಿಸ್ತಾನದಲ್ಲಿ ಮತ್ತೆ ಕ್ರಿಕೆಟ್ ಬೆಳೆಸುವ ಉದ್ದೇಶದಿಂದ ಐಸಿಸಿ ವಿಶ್ವ ಇಲೆವೆನ್ ತಂಡ ಟಿ20 ...

news

ಭಾರತದಲ್ಲಿ ಅವಕಾಶ ಸಿಗದೆ ಐರ್ಲೆಂಡ್ ತಂಡ ಸೇರಿದ ಭಾರತದ ಕ್ರಿಕೆಟಿಗ..!

ಭಾರತೀಯ ಕ್ರಿಕೆಟ್`ನಲ್ಲಿ ಸ್ಪರ್ಧೆ ಜಾಸ್ತಿ. ಪ್ರತಿಭೆಗೆ ತಕ್ಕ ಅವಕಾಶ ಸಿಗುವುದಿಲ್ಲ ಎಂಬ ಆರೋಪವೂ ಇದೆ. ಈ ...

news

ವಿರಾಟ್ ಕೊಹ್ಲಿ ಆರ್ಭಟವನ್ನ ತಡೆದರೆ ನಮ್ಮ ಯಶಸ್ಸು ಸುಲಭ: ಸ್ಟೀವನ್ ಸ್ಮಿತ್

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರನ್ನ ತಡೆದರೆ ಸರಣಿಯಲ್ಲಿ ನಮ್ಮ ಯಶಸ್ಸು ಖಂಡಿತಾ ಎಂದು ...

Widgets Magazine