ವಿವಾದಾತ್ಮಕ ಟ್ವೀಟ್ ಮಾಡಿ ಅಳಿಸಿದ ಹರ್ಭಜನ್ ಸಿಂಗ್

ನವದೆಹಲಿ, ಮಂಗಳವಾರ, 14 ನವೆಂಬರ್ 2017 (08:19 IST)

ನವದೆಹಲಿ:  ಭಾರತದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಶ್ರೀಲಂಕಾ ತಂಡದ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿ ನಂತರ ವಿವಾದವಾಗುವ ಲಕ್ಷಣ ತೋರುತ್ತಿದ್ದಂತೆ ಅಳಿಸಿ ಹಾಕಿದ್ದಾರೆ.


 
ಶ್ರೀಲಂಕಾ ಮತ್ತು ಭಾರತ ನಡುವೆ ನ.16 ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ ಲಂಕಾ ಬ್ಯಾಟ್ಸ್ ಮನ್ ದಿಮುತು ಕರುಣರತ್ನೆ ಭಾರತದ ಸ್ಪಿನ್ ಜೋಡಿ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಜೋಡಿಯನ್ನು ಸೂಕ್ತ ರಣತಂತ್ರದೊಂದಿಗೆ ಎದುರಿಸಿದರೆ ರನ್ ಗಳಿಸಲು ಕಷ್ಟವಾಗದು ಎಂದಿದ್ದರು.
 
ಈ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಭಜಿ, ಜಿಂಬಾಬ್ವೆ ಸರಣಿಯಲ್ಲಿ ಇತ್ತೀಚೆಗೆ ಹೀಗೇ ಮಾಡಿ ಇವರು ಸೋತಿದ್ದರು. ಮೊದಲ ಇನಿಂಗ್ಸ್ ನಲ್ಲಿ 200, ದ್ವಿತೀಯ ಇನಿಂಗ್ಸ್ ನಲ್ಲಿ 150 ರನ್ ಗಳಿಸಿದ್ದರು. ಅವರನ್ನು ಇಷ್ಟು ಕೆಳ ಮಟ್ಟದಲ್ಲಿ ನೋಡಲು ಬೇಸರವಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟಕ್ಕೆ ಅವರು ಶೀಘ್ರದಲ್ಲೇ ಉನ್ನತಿ ಪಡೆಯಬಹುದು ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದರು. ಆದರೆ ಇದು ವಿವಾದವಾಗುತ್ತಿದ್ದಂತೆ ಟ್ವೀಟ್ ಅಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಟೀಂ ಇಂಡಿಯಾ ಕ್ರಿಕೆಟಿಗರಿಗೆ ಇನ್ನು ಹೊಸ ಟೆಸ್ಟು!

ಮುಂಬೈ: ಯೋ ಯೋ ಫಿಟ್ನೆಸ್ ಟೆಸ್ಟ್ ಭರಾಟೆಯಲ್ಲಿ ಟೀಂ ಇಂಡಿಯಾದಲ್ಲಿ ಯುವರಾಜ್ ಸಿಂಗ್, ಸುರೇಶ್ ರೈನಾರಂತಹ ...

news

ಆತ್ಮಹತ್ಯೆ ಯತ್ನಿಸಿದ್ದ ಟೀಂ ಇಂಡಿಯಾ ಕ್ರಿಕೆಟಿಗ!

ಮುಂಬೈ: ಟೀಂ ಇಂಡಿಯಾದಲ್ಲಿ ಹೊಸ ಸಂಚಲನ ಮೂಡಿಸಿದ ಯುವ ಸ್ಪಿನ್ನರ್ ಕುಲದೀಪ್ ಯಾದವ್ ಹಿಂದೊಮ್ಮೆ ...

news

ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ಶಸ್ತ್ರಚಿಕಿತ್ಸೆ

ಹೈದರಾಬಾದ್: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ತೀವ್ರ ಮಂಡಿನೋವಿನಿಂದ ಬಳಲುತ್ತಿದ್ದು, ...

news

ಧೋನಿ ಜತೆ ವಿರಾಟ್ ಕೊಹ್ಲಿ ಪ್ರತ್ಯೇಕವಾಗಿ ಮಾತುಕತೆ ನಡೆಸಬೇಕಂತೆ!

ಕೋಲ್ಕೊತ್ತಾ: ಟಿ20 ಕ್ರಿಕೆಟ್ ಮಾದರಿಗೆ ನಿವೃತ್ತಿ ಹೇಳಬೇಕೆಂದು ಧೋನಿ ಮೇಲೆ ಒತ್ತಡ ಹೆಚ್ಚುತ್ತಿರುವ ...

Widgets Magazine
Widgets Magazine