ಮಾಡಿದ್ದುಣ್ಣೋ ಮಾರಾಯ! ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಗೆ ನಿಷೇಧದ ಭೀತಿ

ಮುಂಬೈ, ಶುಕ್ರವಾರ, 11 ಜನವರಿ 2019 (09:18 IST)

ಮುಂಬೈ: ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿದ್ದ ಮತ್ತು ಅವರಿಗೆ ಸಾಥ್ ನೀಡಿದ ಕೆಎಲ್ ರಾಹುಲ್ ಗೆ ಪಂದ್ಯದಿಂದ ನಿಷೇಧ ಶಿಕ್ಷೆ ವಿಧಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.


 
ಈ ಬಗ್ಗೆ ಬಿಸಿಸಿಐ ಬಿಸಿಸಿಐ ಆಡಳಿತ ಮಂಡಳಿ ಸದಸ್ಯೆ ಡಿಯಾನ ಎಡುಲ್ಜಿ ಕ್ರಿಕೆಟಿಗರಿಗೆ ನಿಷೇಧದ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ ಬೆನ್ನಲ್ಲೇ ಮುಖ್ಯಸ್ಥ ವಿನೋದ್ ರಾಯ್ ಕೂಡಾ 2 ಪಂದ್ಯಗಳ ನಿಷೇಧ ವಿಧಿಸಲು ಶಿಫಾರಸ್ಸು ಮಾಡಿದ್ದಾರೆ.
 
ಈ ಬಗ್ಗೆ ಇದೀಗ ಬಿಸಿಸಿಐ ಅಧಿಕಾರಿಗಳು ಕಾನೂನು ಸಲಹೆ ಪಡೆಯಲು ನಿರ್ಧರಿಸಿದ್ದು, ಅದಾದ ಬಳಿಕ ಕ್ರಿಕೆಟಿಗರ ಹಣೆಬರಹ ನಿರ್ಧಾರವಾಗಲಿದೆ. ಒಂದು ವೇಳೆ ಎರಡು ಪಂದ್ಯಗಳ ನಿಷೇಧ ಜಾರಿಯಾದರೆ ರಾಹುಲ್ ಮತ್ತು ಪಾಂಡ್ಯ ಆಸೀಸ್ ವಿರುದ್ಧ ಎರಡು ಏಕದಿನ ಪಂದ್ಯಗಳಿಂದ ಹೊರಗುಳಿಬೇಕಾದೀತು.
 
ಇಬ್ಬರಿಗೂ ಬಿಸಿಸಿಐ ವಿವರಣೆ ಕೋರಿ ಈಗಾಗಲೇ ನೋಟಿಸ್ ಜಾರಿ ಮಾಡಿದೆ. ಈ ನಡುವೆ ಹಾರ್ದಿಕ್ ತಮ್ಮ ಕಾಮೆಂಟ್ ಗೆ ಕ್ಷಮೆ ಯಾಚಿಸಿದ್ದಾರೆ. ಆದರೆ ಆ ಶೋನಲ್ಲಿ ಹಾರ್ದಿಕ್ ಗೆ ಜತೆಯಾಗಿದ್ದ ರಾಹುಲ್ ಇದುವರೆಗೆ ಈ ಕುರಿತು ಪ್ರತಿಕ್ರಿಯಿಸಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಭಾರತದಲ್ಲಿ ಆಸ್ಟ್ರೇಲಿಯಾ ಸರಣಿ ವೇಳಾ ಪಟ್ಟಿ ಪ್ರಕಟ: ಬೆಂಗಳೂರಿನಲ್ಲಿ ಟಿ20 ಪಂದ್ಯ

ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಫೆಬ್ರವರಿಯಲ್ಲಿ ನಡೆಯಲಿರುವ ಏಕದಿನ ಮತ್ತು ಟಿ20 ಸರಣಿಯ ...

news

ಫಾರ್ಮ್ ನಲ್ಲಿಲ್ಲದಿದ್ದರೂ ಗೆಳೆಯ ಮಯಾಂಕ್ ಅಗರ್ವಾಲ್ ಗೆ ಸಹಾಯ ಮಾಡಿದ್ದ ಕೆಎಲ್ ರಾಹುಲ್

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಪಡೆದ ...

news

ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಗೆ ಬಿಸಿಸಿಐ ನೀಡಿದ ಶೋಕಾಸ್ ನೋಟಿಸ್ ಗೆ ಹಾಕಿದ ಸಹಿಯೇ ಈಗ ವಿವಾದದಲ್ಲಿ!

ಮುಂಬೈ: ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯವಾಗಿ ಕಾಮೆಂಟ್ ...

news

ರೋಹಿತ್ ಶರ್ಮಾ ಪುತ್ರಿ ನೋಡಿಕೊಳ್ಳಲು ಒಪ್ಪಿಕೊಂಡ ರಿಷಬ್ ಪಂತ್!

ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದ ವೇಳೆ ಆಸೀಸ್ ನಾಯಕ ಟಿಮ್ ಪೇಯ್ನ್ ಭಾರತೀಯ ವಿಕೆಟ್ ಕೀಪರ್ ...