ಆಫ್ರಿಕಾ ಬೌಲರ್ ಗಳು ವಿರಾಟ್ ಕೊಹ್ಲಿ ಬಾಲ ಬಿಚ್ಚದಂತೆ ನೋಡಿಕೊಂಡಿದ್ದು ಹೇಗೆ ಗೊತ್ತಾ?

ಕೇಪ್ ಟೌನ್, ಬುಧವಾರ, 10 ಜನವರಿ 2018 (08:27 IST)

ಕೇಪ್ ಟೌನ್: ವಿರಾಟ್ ಕೊಹ್ಲಿ ಒಮ್ಮೆ ಸೆಟ್ ಆದರೆ ಎಂತಹಾ ಪ್ರಳಯಾಂತಕ ಬ್ಯಾಟ್ಸ್ ಮನ್ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಟೀಂ ಇಂಡಿಯಾ ವಿರುದ್ಧ ಗೆಲ್ಲಬೇಕಾದರೆ ಈ ಪ್ರಳಯಾಂತಕನನ್ನು ಸುಮ್ಮನಿರಿಸಬೇಕೆಂದು ದ.ಆಫ್ರಿಕಾ ಚೆನ್ನಾಗಿ ಯೋಜನೆ ರೂಪಿಸಿತ್ತು.
 

ಅದರ ಪರಿಣಾಮವೇ ಮೊದಲ ಟೆಸ್ಟ್ ನ ಎರಡೂ ಇನಿಂಗ್ಸ್ ನಲ್ಲಿ ಕೊಹ್ಲಿ ಬಾಲ ಬಿಚ್ಚಲು ಸಾಧ್ಯವಾಗಲಿಲ್ಲ. ಸಣ್ಣ ಮೊತ್ತಕ್ಕೇ ಪೆವಿಲಿಯನ್ ಸೇರಿಕೊಂಡರು. ಇದರ ಹಿಂದೆ ನಮ್ಮ ಪಕ್ಕಾ ಯೋಜನೆ ಕೆಲಸ ಮಾಡಿತ್ತು ಎಂದು ಪಂದ್ಯ ಶ್ರೇಷ್ಠ ಬೌಲರ್ ಫಿಲ್ಯಾಂಡರ್ ಹೇಳಿಕೊಂಡಿದ್ದಾರೆ.
 
ಎರಡು-ಎರಡೂವರೆ ಓವರ್ ಕೊಹ್ಲಿಗೆ ಔಟ್ ಸ್ವಿಂಗ್ ಬಾಲ್ ಎಸೆದವು. ನಂತರ ಸಡನ್ ಆಗಿ ನೇರ ಬಾಲ್ ಗಳನ್ನು ಎಸೆದವು. ಇದರಿಂದ ಕೊಹ್ಲಿ ಆಫ್ ಸ್ಟಂಪ್ ನಾಚೆ ಹೋಗುವ ಬಾಲ್ ನ್ನು ಕೆಣಕಿ ಔಟಾಗುವಂತೆ ಮಾಡುವ ಯೋಜನೆ ನಮ್ಮದಾಗಿತ್ತು. ಎಲ್ಲವೂ ನಾವು ಎಣಿಸಿದಂತೆಯೇ ಆಯಿತು. ಕೊಹ್ಲಿ ಎರಡೂ ಇನಿಂಗ್ಸ್ ನಲ್ಲಿ ಬೇಗ ಔಟಾದರು. ಹಾಗಾಗಿ ನಾವು ಬಚವಾದೆವು’ ಎಂದು ಫಿಲ್ಯಾಂಡರ್ ರಹಸ್ಯ ಬಹಿರಂಗಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಧೋನಿಯ ದಾಖಲೆಯೊಂದನ್ನು ಮುರಿದ ಸಾಹಾ..!!

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿಯೇ 10 ವಿಕೇಟ್‌ಗಳನ್ನು ಕೀಳುವ ಮೂಲಕ ವಿಕೆಟ್ ಕೀಪರ್ ...

news

ಉದ್ದೀಪನಾ ಔಷಧ ತೆಗೆದುಕೊಂಡು ಸಿಕ್ಕಿಬಿದ್ದ ಟೀಂ ಇಂಡಿಯಾ ಕ್ರಿಕೆಟಿಗ

ಮುಂಬೈ: ಬರೋಡ ಕ್ರಿಕೆಟಿಗ, ಒಂದು ಕಾಲದಲ್ಲಿ ಟೀಂ ಇಂಡಿಯಾದ ಸ್ಪೋಟಕ ಫಿನಿಶರ್ ಎಂದೇ ಖ್ಯಾತಿ ಗಳಿಸಿದ್ದ ...

news

ಹನಿಮೂನ್ ಮೂಡ್ ನಲ್ಲಿದ್ದ ವಿರಾಟ್ ಕೊಹ್ಲಿಗೆ ಊಹಿಸಲೂ ಆಗದ ಶಾಕ್!

ಕೇಪ್ ಟೌನ್: ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ನಲ್ಲೇ ಸೋತು ಮುಖಭಂಗ ಅನುಭವಿಸಿದ ಟೀಂ ಇಂಡಿಯಾ ನಾಯಕ ...

news

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಇನ್ನೂ ಮದುವೆಯೇ ಆಗಿಲ್ಲ!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇತ್ತೀಚೆಗಷ್ಟೇ ಇಟೆಲಿಯಲ್ಲಿ ...

Widgets Magazine
Widgets Magazine