ನವದೆಹಲಿ: ವೆಸ್ಟ್ ಇಂಡೀಸ್ನಲ್ಲಿ ಈ ಬೇಸಿಗೆಯಲ್ಲಿ ಆಡಲಿರುವ ನಾಲ್ಕು ಟೆಸ್ಟ್ ಪಂದ್ಯಗಳಿಗೆ ವಿರಾಟ್ ಕೊಹ್ಲಿ 17 ಮಂದಿಯ ತಂಡಕ್ಕೆ ಸಾರಥ್ಯ ವಹಿಸಲಿದ್ದಾರೆ. ಬಿಸಿಸಿಐ ಆಯ್ಕೆದಾರರು ಟೆಸ್ಟ್ ತಂಡದಲ್ಲಿ ಅಂತಹ ಬದಲಾವಣೆ ಮಾಡಿಲ್ಲ. ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಕಳೆದ ವರ್ಷ ಆಡಿದ ನಾಲ್ಕು ಪಂದ್ಯಗಳ ಹಿಂದಿನ ಟೆಸ್ಟ್ ಸರಣಿಯಲ್ಲಿದ್ದ ವರುಣ್ ಆರಾನ್ ಮತ್ತು ಗುರುಕೀರತ್ ಸಿಂಗ್ ಅವರಿಗೆ ಕೊಕ್ ನೀಡಲಾಗಿದ್ದು, ಅವರಿಗೆ ಬದಲಿಯಾಗಿ ಮೊಹಮದ್ ಶಮಿ ಮತ್ತು ಮುಂಬೈ ವೇಗಿ ಶಾರ್ದುಲ್ ಥಾಕುರ್ ಅವರನ್ನು ತರಲಾಗಿದೆ.