Widgets Magazine
Widgets Magazine

ಕೆಎಲ್ ರಾಹುಲ್ ಗೆ ಕಾಡುತ್ತಿದೆ ಇದೊಂದೇ ಬೇಸರ!

ಬೆಂಗಳೂರು, ಸೋಮವಾರ, 12 ಫೆಬ್ರವರಿ 2018 (08:31 IST)

Widgets Magazine

ಬೆಂಗಳೂರು: ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿಯಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ವಿಫಲರಾದ ಕೆಎಲ್ ರಾಹುಲ್ ಇದೀಗ ಟಿ20 ಸರಣಿಯಲ್ಲಿ ಕಳೆದುಕೊಂಡ ಫಾರ್ಮ್ ಮರಳಿ ಗಳಿಸುವ ವಿಶ್ವಾಸದಲ್ಲಿದ್ದಾರೆ.
 

ಇದೀಗ ತವರಿನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಪಂದ್ಯವನ್ನೇ ತಮ್ಮ ವಾಪಸಾತಿಗೆ ವೇದಿಕೆ ಮಾಡಿಕೊಂಡಿರುವ ರಾಹುಲ್ ಫಾರ್ಮ್ ಗೆ ಮರಳು ಬೆವರು ಸುರಿಸುತ್ತಿದ್ದಾರೆ. ವಿಪರ್ಯಾಸವೆಂದರೆ ಅಲ್ಲೂ ರಾಹುಲ್ ಹೇಳಿಕೊಳ್ಳುವಂತಹ ಯಶಸ್ಸು ಪಡೆದಿಲ್ಲ.
 
ಈ ಬಗ್ಗೆ ಮಾತನಾಡಿರುವ ರಾಹುಲ್ ‘ನನಗೆ ಮತ್ತೆ ಆತ್ಮವಿಶ್ವಾಸ ಮರಳಿ ಪಡೆಯಲು 150 ಪ್ಲಸ್ ರನ್ ಹೊಡೆಯಲೇಬೇಕೆಂದಿಲ್ಲ. 50 ರನ್ ಗಳಿಸಲು ಸಾಧ್ಯವಾದರೂ ಸಾಕು. ಸ್ವಲ್ಪ ಹೊತ್ತು ಕ್ರೀಸ್ ನಲ್ಲಿರಬೇಕು ಮತ್ತು ಬಾಲ್ ಸರಿಯಾಗಿ ಹಿಟ್ ಮಾಡಬೇಕು’ ಎಂದು ರಾಹುಲ್ ಹೇಳಿಕೊಂಡಿದ್ದಾರೆ.
 
ಟೆಸ್ಟ್ ಕ್ರಿಕೆಟ್ ನಲ್ಲಿ ವಿಫಲವಾದ ಬೇಸರ ಅವರಲ್ಲಿದೆ. ಇದೀಗ ಟಿ20 ಗೆ  ಮತ್ತೆ ಆಫ್ರಿಕಾ ವಿಮಾನವೇರಲಿದ್ದು, ಅಲ್ಲಿನ ವೇಗದ, ಬೌನ್ಸಿ ಪಿಚ್ ಗೆ ತಕ್ಕಂತೆ ಆಡಲು ಬೆವರು ಸುರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಗೆದ್ದು ಬೀಗುತ್ತಿದ್ದ ದ.ಆಫ್ರಿಕಾಗೆ ಮ್ಯಾಚ್ ರೆಫರಿ ಕೊಟ್ಟ ಶಾಕ್!

ಜೊಹಾನ್ಸ್ ಬರ್ಗ್: ಭಾರತದ ವಿರುದ್ಧ ನಾಲ್ಕನೇ ಏಕದಿನ ಗೆದ್ದು, ಸರಣಿ ಕೈ ತಪ್ಪುವ ಭೀತಿ ತಪ್ಪಿಸಿಕೊಂಡ ...

news

ಪಾಕಿಸ್ತಾನದ ಕ್ರಿಕೆಟಿಗ ಶಾಹಿದ್ ಆಫ್ರಿದಿ ಭಾರತದ ರಾಷ್ಟ್ರಧ್ವಜಕ್ಕೆ ಗೌರವ ನೀಡಿರುವ ವಿಡಿಯೋ ವೈರಲ್

ಸೇಂಟ್ ಮೊರಿಟ್ಜ್: ಪಾಕಿಸ್ತಾನದ ಕ್ರಿಕೆಟಿಗ ಶಾಹಿದ್ ಆಫ್ರಿದಿ ಭಾರತದ ರಾಷ್ಟ್ರಧ್ವಜಕ್ಕೆ ಗೌರವ ನೀಡಿರುವ ...

news

ಅಜರುದ್ದೀನ್, ಕ್ರಿಸ್ ಗೇಲ್ ದಾಖಲೆ ಪುಡಿಗಟ್ಟಿದ ವಿರಾಟ್ ಕೊಹ್ಲಿ

ವಾಂಡರರ್ಸ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಿನ್ನೆ ಕ್ರಿಕೆಟ್ ಲೋಕದ ಎರಡು ದಿಗ್ಗಜ ಆಟಗಾರರ ದಾಖಲೆ ...

news

ಅಪರೂಪದ ದಾಖಲೆಗೆ ಒಡೆಯನಾದ ಶಿಖರ್ ಧವನ್

ವಾಂಡರರ್ಸ್: ದ.ಆಫ್ರಿಕಾ ವಿರುದ್ಧ ನಾಲ್ಕನೇ ಪಂದ್ಯದಲ್ಲಿ ಶತಕ ಗಳಿಸಿದ ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ...

Widgets Magazine Widgets Magazine Widgets Magazine