ಶಿಖರ್ ಧವನ್ ರಿಂದಾಗಿ ಕೆಎಲ್ ರಾಹುಲ್ ಗಿಲ್ಲ ಟೀಂ ಇಂಡಿಯಾದಲ್ಲಿ ಸ್ಥಾನ!

ದೆಹಲಿ, ಶನಿವಾರ, 2 ಡಿಸೆಂಬರ್ 2017 (09:22 IST)

ದೆಹಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ. ಆದರೆ ಶಿಖರ್ ಧವನ್ ವಾಪಸಾತಿಯಿಂದಾಗಿ ಕನ್ನಡಿಗ ಕೆಎಲ್ ರಾಹುಲ್ ಸ್ಥಾನ ಕಳೆದುಕೊಳ್ಳುವಂತಾಗಿದೆ.
 

ಕಳೆದ 12 ಇನಿಂಗ್ಸ್ ಗಳಿಂದ 9 ಅರ್ಧಶತಕ ಗಳಿಸಿ ಅದ್ಭುತ ಫಾರ್ಮ್ ನಲ್ಲಿದ್ದರೂ ರಾಹುಲ್ ರನ್ನು ಕೈ ಬಿಡಲಾಗಿದೆ. ಆದರೆ ಅತ್ತ ಕಳೆದ ಪಂದ್ಯದಲ್ಲಿ ಶತಕ ಭಾರಿಸಿದ ಮುರಳಿ ವಿಜಯ್ ರನ್ನು ಕೈ ಬಿಡಲಾಗದ ಅನಿವಾರ್ಯತೆ ಕೊಹ್ಲಿಯನ್ನು ಈ ನಿರ್ಧಾರಕ್ಕೆ ಬರುವಂತೆ ಮಾಡಿದೆ.
 
ಇದಲ್ಲದೆ, ಕಳೆದ ಪಂದ್ಯದಲ್ಲಿ ವಿಕೆಟ್ ಕೀಳಲು ವಿಫಲರಾದ ಉಮೇಶ್ ಯಾದವ್ ಸ್ಥಾನಕ್ಕೆ ಮೊಹಮ್ಮದ್ ಶಮಿ ಮರಳಿದ್ದಾರೆ. ಉಳಿದಂತೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ. ಅತ್ತ ಲಂಕಾ ತಂಡದಲ್ಲಿ ರಂಗನಾ ಹೆರಾತ್, ಶನಕ, ತಿರಮನ್ನೆ ಬದಲಿಗೆ ಸಂಡಕನ್, ಧನಂಜಯ ಡಿಸಿಲ್ವ ಮತ್ತು ರೋಶೆನ್ ಆಡುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಶಿಖರ್ ಧವನ್ ಕೆಎಲ್ ರಾಹುಲ್ ಟೀಂ ಇಂಡಿಯಾ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು ಭಾರತ-ಶ್ರೀಲಂಕಾ ಟೆಸ್ಟ್ ಸರಣಿ Shikhar Dhawan Kl Rahul Team India Cricket News Sports News India-srilanka Test Series

ಕ್ರಿಕೆಟ್‌

news

ಟೀಂ ಇಂಡಿಯಾವನ್ನು ಲೇವಡಿ ಮಾಡಿದ ಲಂಕಾ ನಾಯಕ ಚಂಡಿಮಾಲ್

ದೆಹಲಿ: ಮುಂಬರುವ ದ.ಆಫ್ರಿಕಾ ಪ್ರವಾಸಕ್ಕೆ ಹೊಂದಿಕೊಳ್ಳಲು ಪ್ರಸಕ್ತ ಲಂಕಾ ಸರಣಿಯಲ್ಲಿ ಹಸಿರು ಹುಲ್ಲಿನ ...

news

ಕೊಹ್ಲಿಯ ತಲೆನೋವಿಗೆ ಕೆಎಲ್ ರಾಹುಲ್ ತಲೆದಂಡವಾಗುತ್ತಾ?!

ನವದೆಹಲಿ: ಶ್ರೀಲಂಕಾ ವಿರುದ್ಧ ಇಂದಿನಿಂದ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಆರಂಭವಾಗುತ್ತಿದ್ದು, ನಾಯಕ ...

news

ಅನಿಲ್ ಕುಂಬ್ಳೆಗಾಗಿ ಆಯ್ಕೆಗಾರರ ಜತೆ ಜಗಳವಾಡಿದ್ದರಂತೆ ಸೌರವ್ ಗಂಗೂಲಿ!

ಮುಂಬೈ: ಸೌರವ್ ಗಂಗೂಲಿ ಎಂದರೆ ಎಂತಹಾ ಹಠಮಾರಿ ಎನ್ನುವುದು ಕ್ರಿಕೆಟ್ ಪ್ರಿಯರಿಗೆ ಗೊತ್ತಿರುವುದೇ. ಇದೇ ...

news

ಧೋನಿ ಅನುಪಸ್ಥಿತಿಯಲ್ಲಿ ನಾಯಕನಾದಾಗ ಕೊಹ್ಲಿ ಡ್ರೆಸ್ಸಿಂಗ್ ರೂಂನಲ್ಲಿ ಹೇಳಿದ್ದೇನು?

ಮುಂಬೈ: 2014 ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಖಾಯಂ ನಾಯಕ ಧೋನಿ ಗಾಯಗೊಂಡು ತಂಡದಿಂದ ಹೊರಗುಳಿದಾಗ ನಾಯಕತ್ವ ...

Widgets Magazine
Widgets Magazine