ಕೆಎಲ್ ರಾಹುಲ್ ಗೆ ಮುಗಿಯದ ‘ರಾಹು’ ಕಾಟ

ಕೊಲೊಂಬೊ, ಶುಕ್ರವಾರ, 4 ಆಗಸ್ಟ್ 2017 (05:53 IST)

Widgets Magazine

ಕೊಲೊಂಬೊ: ಕೆಎಲ್ ರಾಹುಲ್ ಎಂಬ ಅಪ್ಪಟ ಕನ್ನಡಿಗ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ 190 ರ ಆಸುಪಾಸಿನಲ್ಲಿ ಔಟಾದಾಗ ಅದೆಷ್ಟು ನಿರಾಸೆ ಅನುಭವಿಸಿದ್ದೆವು. ಆದರೆ ಆ ನಿರಾಸೆಯ ಸರಣಿ ರಾಹುಲ್ ಪಾಲಿಗೆ ಇನ್ನೂ ಮುಂದುವರಿದಿದೆ ಎನ್ನುವುದೇ ವಿಪರ್ಯಸ.


 
ಆ ಸರಣಿಯ ನಂತರ ಅವರು ಆಸ್ಟ್ರೇಲಿಯಾ,  ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಸರಣಿ ಆಡಿದ್ದಾರೆ. ಎಲ್ಲಾ ಪಂದ್ಯಗಳಲ್ಲೂ ತಂಡಕ್ಕೆ ಬೇಕಾಗಿದ್ದ ಇನಿಂಗ್ಸ್ ಕಟ್ಟಿಕೊಟ್ಟಿದ್ದಾರೆ. ಭದ್ರ ತಳಪಾಯಕ್ಕೆ ಬುನಾದಿ ಹಾಕಿಕೊಟ್ಟಿದ್ದಾರೆ.
 
ಆದರೆ ದುರಾದೃಷ್ಟ ನೋಡಿ. ಒಮ್ಮೆಯೂ ಅವರಿಂದ ಶತಕ ಬಂದಿಲ್ಲ. ಅರ್ಧಶತಕಗಳಲ್ಲೇ ದಾಖಲೆ ಮಾಡಿದರೂ ಶತಕ ಮಾತ್ರ ಒಲಿಯಲಿಲ್ಲ. ಇನ್ನೇನು ಶತಕ ಗಳಿಸುತ್ತಾರೆ ಎನ್ನುವಾಗ ಪ್ರತೀ ಬಾರಿಯೂ ಎಡವುತ್ತಾರೆ. ಹಾಗೆಂದು ಅವರು ಶಿಖರ್ ಧವನ್ ರಷ್ಟು ಗಡಿಬಿಡಿಯ ಆಟಗಾರರಲ್ಲ.
 
ಹಾಗಿದ್ದರೂ ದೊಡ್ಡ ಮೊತ್ತ ಗಳಿಸಲಾಗುತ್ತಿಲ್ಲ ಎಂಬ ನಿರಾಸೆ ಅವರಿಗಿದೆ. ನಿನ್ನೆ ಕೂಡಾ ಮತ್ತೊಮ್ಮೆ ಅರ್ಧಶತಕ ಗಳಿಸಿ ಔಟಾಗುವುದರೊಂದಿಗೆ ಬ್ರೇಕ್ ನ ನಂತರವೂ ಅವರ ಅದೃಷ್ಟ ಬದಲಾಗಲಿಲ್ಲವಲ್ಲಾ ಎನ್ನುವಂತಿತ್ತು.
 
ಇದನ್ನೂ ಓದಿ.. ಅಪರೂಪಕ್ಕೆ ರಾಜ್ಯ ಸಭೆಗೆ ಕಾಲಿಟ್ಟ ಸಚಿನ್ ತೆಂಡುಲ್ಕರ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

50 ನೇ ಪಂದ್ಯವನ್ನು ಸ್ಮರಣೀಯವಾಗಿಸಿದ ಚೇತೇಶ್ವರ ಪೂಜಾರ

ಕೊಲೊಂಬೊ: ದಾಖಲೆಯ ಟೆಸ್ಟ್ ಪಂದ್ಯವನ್ನು ಎಲ್ಲಾ ಕ್ರಿಕೆಟಿಗರೂ ಸ್ಮರಣೀಯವಾಗಿಸಲು ಇಷ್ಟಪಡುತ್ತಾರೆ. ಅದೇ ...

news

ಕ್ರಿಕೆಟ್ ಆಡಬೇಕೆಂದರೆ ನನ್ನನ್ನು ಕಾಣು ಎಂದು ಕೊಹ್ಲಿ ಹೇಳಿದ್ದು ಯಾರಿಗೆ?

ನವದೆಹಲಿ: ಟೀ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಕ್ರಿಕೆಟ್ ಹೊರತು ಪಡಿಸಿ ಬೇರೆ ಕ್ರೀಡಾ ಪಟುಗಳೊಂದಿಗೆ ಭಾರೀ ...

news

ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದೇನು?

ಕೊಲೊಂಬೊ: ಶ್ರೀಲಂಕಾ ವಿರುದ್ಧ ಪ್ರೇಮದಾಸ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ...

news

ಕೆಎಲ್ ರಾಹುಲ್ ನಾಯಕನ ಮಾತು ಕೇಳಿದ್ದಕ್ಕೂ ಸಾರ್ಥಕವಾಯಿತು!

ಕೊಲೊಂಬೋ: ಮೊನ್ನೆಯಷ್ಟೇ ನಾಯಕ ಕೇಳಿಕೊಂಡಿದ್ದಕ್ಕೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಹಾಟ್ ಸೆಲ್ಫೀಗೆ ಪೋಸ್ ...

Widgets Magazine