ಕ್ರಿಕೆಟಿಗ ಧೋನಿ ಹೆಸರು ಹೇಳಿಕೊಂಡು ಮಹಿಳೆಗೆ ದೋಖಾ

ನವದೆಹಲಿ, ಸೋಮವಾರ, 3 ಸೆಪ್ಟಂಬರ್ 2018 (09:47 IST)

ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಹೆಸರು ಹೇಳಿಕೊಂಡು ವ್ಯಕ್ತಿಯೊಬ್ಬ ಅಮೆರಿಕಾ ನಿವಾಸಿ ಮಹಿಳೆಯೊಬ್ಬಳಿಗೆ ವಂಚನೆ ಮಾಡಿದ ಪ್ರಕರಣ ಪಾಟ್ನಾದಲ್ಲಿ ನಡೆದಿದೆ.
 
ಜ್ಯೋತಿ ರಂಜನ್ ಎಂಬ ವ್ಯಕ್ತಿ ತಾನು ಇಟೆಲಿವರ್ ಟೆಕ್ನೋಲಜಿ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ಮಾಲಿಕ. ಕ್ರಿಕೆಟಿಗ ಧೋನಿ ತನ್ನ ಕಂಪನಿಯ ಬ್ರಾಂಡ್ ಅಂಬಾಸಿಡರ್ ಎಂದು ಹೇಳಿಕೊಂಡು ಅಮೆರಿಕಾ ನಿವಾಸಿ ಭಾರತೀಯ ಮೂಲದ ಇಂಜಿನಿಯರ್ ಮಹಿಳೆಯಿಂದ 86 ಸಾವಿರ ಅಮೆರಿಕನ್ ಡಾಲರ್ ಕಬಳಿಸಿದ್ದ.
 
ಈತ ಕೆಲವು ಬಾರಿ ಅಮೆರಿಕಾಕ್ಕೆ ತೆರಳಿ ಆ ಮಹಿಳೆಯನ್ನು ಭೇಟಿಯಾಗಿ ವಿಶ್ವಾಸ ಮೂಡಿಸುವ ಕೆಲಸವನ್ನೂ ಮಾಡಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಆ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದನಂತೆ. ಒಂದು ಸಂದರ್ಭದಲ್ಲಿ ಈ ವಂಚಕ ಮಹಿಳೆ ಬಳಿ ಮತ್ತೆ ಐದು ಲಕ್ಷ ರೂ. ಗೆ ಬೇಡಿಕೆ ಇಟ್ಟಾಗ ಸಂಶಯಗೊಂಡ ಮಹಿಳೆ ನೇರವಾಗಿ ಪಾಟ್ನಾ ಪೊಲೀಸರಿಗೆ ದೂರು ನೀಡಿದ್ದಾಳೆ. ವಿಚಾರಣೆ ನಡೆಸಿದಾಗ ಈತ ಹೇಳಿದಂತೆ ಯಾವುದೇ ಕಂಪನಿಯೂ ಇಲ್ಲ, ಈತ ಹೇಳಿದ್ದೆಲ್ಲಾ ಸುಳ್ಳು ಎನ್ನುವುದು ಬಯಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಸೋಲಿನಲ್ಲೂ ವಿರಾಟ್ ಕೊಹ್ಲಿಗೆ ಸಂಭ್ರಮಿಸಲು ಒಂದು ಕಾರಣ ಸಿಕ್ಕಿದೆ!

ಸೌಥಾಂಪ್ಟನ್: ಇಂಗ್ಲೆಂಡ್ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ...

news

ಅಪರೂಪಕ್ಕೆ ಟೆಸ್ಟ್ ಕ್ರಿಕೆಟ್ ಬಂದವನು ಟೀಂ ಇಂಡಿಯಾ ಸೋಲಿಗೆ ಕಾರಣನಾದ!

ಸೌಥಾಂಪ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ನಾಲ್ಕನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ...

news

ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆಲ್ಲಲು ಅಥ್ಲೆಟ್ ಗೆ ರಾಹುಲ್ ದ್ರಾವಿಡ್ ನೆರವಾಗಿದ್ದು ಹೇಗೆ?!

ನವದೆಹಲಿ: ಇದು ಅಚ್ಚರಿಯೆನಿಸಬಹುದು. ಆದರೂ ನಿಜ. ಭಾರತ ಎ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಗೂ ...

news

ನಾಯಕನ ವಿರುದ್ಧ ಮಾತನಾಡಿ ಸಂಕಷ್ಟಕ್ಕೆ ಸಿಲುಕಿದ ಟೀಂ ಇಂಡಿಯಾ ಕ್ರಿಕೆಟಿಗ

ತಿರುವನಂತಪುರಂ: ಟೀಂ ಇಂಡಿಯಾ ಯುವ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಇದೀಗ ತಮ್ಮ ರಾಜ್ಯ ತಂಡದ ನಾಯಕನ ವಿರುದ್ಧ ...

Widgets Magazine
Widgets Magazine