Widgets Magazine

ಐದನೇ ಏಕದಿನಕ್ಕೆ ಮೊದಲು ಟೀಂ ಇಂಡಿಯಾ ಆಟಗಾರರು ಪಾರ್ಟಿಯಲ್ಲಿ ಬ್ಯುಸಿ!

ನವದೆಹಲಿ| Krishnaveni K| Last Modified ಬುಧವಾರ, 13 ಮಾರ್ಚ್ 2019 (09:20 IST)
ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಏಕದಿನ ಪಂದ್ಯಕ್ಕಾಗಿ ರಾಷ್ಟ್ರ ರಾಜಧಾನಿಗೆ ಬಂದಿಳಿದಿರುವ ಟೀಂ ಇಂಡಿಯಾ ಆಟಗಾರರು ಡಿನ್ನರ್ ಪಾರ್ಟಿಯಲ್ಲಿ ಬ್ಯುಸಿಯಾಗಿದ್ದಾರೆ.

 
ವೇಗಿ ಮೊಹಮ್ಮದ್ ಶಮಿ ಟೀಂ ಇಂಡಿಯಾ ಆಟಗಾರರಿಗಾಗಿ ತಮ್ಮ ಮನೆಯಲ್ಲಿ ಡಿನ್ನರ್ ಪಾರ್ಟಿ ಏರ್ಪಡಿಸಿದ್ದು, ಇದರಲ್ಲಿ ರಿಷಬ್ ಪಂತ್, ಕೇದಾರ್ ಜಾಧವ್ ಸೇರಿದಂತೆ ಹಲವು ಟೀಂ ಇಂಡಿಯಾ ಆಟಗಾರರು ಭಾಗವಹಿಸಿದ್ದಾರೆ. ಬಳಿಕ ಶಮಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋ ಪ್ರಕಟಿಸಿ ಆಟಗಾರರಿಗೆ ಮನೆಗೆ ಬಂದಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
 
ಇನ್ನೊಂದೆಡೆ ಆರಂಭಿಕ ಶಿಖರ್ ಧವನ್ ತಮ್ಮ ಸ್ನೇಹಿತರೊಂದಿಗೆ ಡಿನ್ನರ್ ಪಾರ್ಟಿಗೆ ತೆರಳಿದ್ದು, ಆ ಫೋಟೋಗಳನ್ನೂ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿಕೊಂಡಿದ್ದಾರೆ. ನಾಯಕ ಕೊಹ್ಲಿ ತಮ್ಮ ದೆಹಲಿ ನಿವಾಸದಲ್ಲಿ ನಾಯಿಗಳೊಂದಿಗೆ ಆಟವಾಡುತ್ತಿರುವ ಫನ್ನಿ ಕ್ಷಣಗಳನ್ನು ಬಹಿರಂಗಪಡಿಸಿದ್ದಾರೆ. ಈ ರೀತಿ ಅಭ್ಯಾಸಕ್ಕಿಂತ ಆಟಗಾರರು ಪಾರ್ಟಿಗಳಲ್ಲೇ ಕಳೆದುಹೋದಂತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :