ಕ್ರಿಕೆಟಿಗ ಶಮಿ ಬಗ್ಗೆ ಪತ್ನಿ ಹೇಳಿದ ಸತ್ಯಗಳನ್ನು ಕೇಳಿದ್ರೆ ಬೆಚ್ಚಿ ಬೀಳ್ತೀರಿ!

ಕೋಲ್ಕೊತ್ತಾ, ಗುರುವಾರ, 8 ಮಾರ್ಚ್ 2018 (09:38 IST)

ಕೋಲ್ಕೊತ್ತಾ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ತಮ್ಮ ಪತ್ನಿಗೆ ಗೃಹ ಹಿಂಸೆ ನೀಡಿದ್ದಾರೆಂಬ ವರದಿಗಳ ಬೆನ್ನಲ್ಲೇ ಕ್ರಿಕೆಟಿಗನ ಪತ್ನಿ ಹಸೀನ್ ಜಹಾನ್ ಪೊಲೀಸ್ ದೂರು ನೀಡಿದ ನಂತರ ಕೆಲವು ಮಾಧ್ಯಮಗಳ ಮುಂದೆ ಹೇಳಿರುವ ಕೆಲವು ಕಟು ಸತ್ಯಗಳನ್ನು ಕೇಳಿದರೆ ನಿಮಗೆ ಅಚ್ಚರಿಯಾಗಬಹುದು.
 
ಕೋಲ್ಕೊತ್ತಾ ಪೊಲೀಸರ ಬಳಿಗೆ ತನ್ನ ವಕೀಲರೊಂದಿಗೆ ಬಂದ ಹಸೀನ್ ಜಹಾನ್ ಪತಿ ಮೊಹಮ್ಮದ್ ಶಮಿ ವಿರುದ್ಧ ಗೃಹ ಹಿಂಸೆ ಪ್ರಕರಣ ದಾಖಲಿಸಿದ್ದಾರೆ. ಬಳಿಕ ಕೆಲವು ಮಾಧ್ಯಮಗಳ ಎದುರು ಶಮಿ ಕರ್ಮಕಾಂಡ ಬಿಚ್ಚಿಟ್ಟಿದ್ದಾರೆ. ಆದರೆ ಮೊಹಮ್ಮದ್ ಶಮಿ ಇದೆಲ್ಲಾ ತಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಉದ್ದೇಶದಿಂದ ಮಾಡುತ್ತಿರುವ ಕುತಂತ್ರ ಎಂದಿದ್ದಾರೆ.
 
ಅದೇನೇ ಇರಲಿ, ಹಸೀನ್ ತನ್ನ ಪತಿ ಶಮಿ ಬಗ್ಗೆ ಏನೆಲ್ಲಾ ಆರೋಪ ಮಾಡಿದ್ದಾರೆ ಗೊತ್ತಾ? ‘ಆತ ನನ್ನಿಂದ ಪತ್ನಿಯಾಗಿ ಏನೆಲ್ಲಾ ಬಯಸಿದ್ದೆನೋ ಅದೆಲ್ಲವನ್ನು ನಾನು ಕೊಟ್ಟಿದ್ದೇನೆ. ಹಾಗಿದ್ದರೂ ಆತ ಯಾವತ್ತೂ ನನ್ನನ್ನು ಪತ್ನಿಯ ರೀತಿ ನೋಡಿಕೊಳ್ಳಲೇ ಇಲ್ಲ. ಆತ ಒಬ್ಬ ದೊಡ್ಡ ಫ್ಲರ್ಟ್. ಹುಡುಗಿಯರ ಹುಚ್ಚ.
 
ನನ್ನ ಬಳಿ ಇದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. ಆತನ ಫೋನ್ ನಾನು ನೋಡಿದ್ದೇನೆ. ಅದರಲ್ಲಿ ಸಾಕಷ್ಟು ಹುಡುಗಿಯರ ಜತೆ ಆತನಿಗೆ ಸಂಪರ್ಕವಿರುವುದಕ್ಕೆ ಸಾಕ್ಷ್ಯವಿದೆ. ಆತ ಸಂಪರ್ಕ ಇಟ್ಟುಕೊಂಡಿರುವವರಲ್ಲಿ ಎಲ್ಲರೂ ಭಾರತೀಯರೇ ಅಲ್ಲ. ಆತ ಪಾಕಿಸ್ತಾನಿ ಯುವತಿಯೊಬ್ಬಳನ್ನು ಮದುವೆಯಾಗಿದ್ದು, ಆಕೆ ದುಬೈನಲ್ಲಿ ನೆಲೆಸಿದ್ದಾಳೆ. ಇತ್ತೀಚೆಗೆ ದ.ಆಫ್ರಿಕಾ ಪ್ರವಾಸ ಮುಗಿಸಿ ಬರುವಾಗ ಆತ ನೇರವಾಗಿ ಭಾರತಕ್ಕೆ ಬರಲಿಲ್ಲ. ದುಬೈನಲ್ಲಿ ಕೆಲವು ದಿನ ಆ ಮಹಿಳೆ ಜತೆ ಕಾಲ ಕಳೆದಿದ್ದ.
 
ನಾನು ಶಮಿ ಬಳಿ ನನ್ನನ್ನು ಧರ್ಮಶಾಲಾಗೆ ಕರೆದುಕೊಂಡು ಹೋಗುವಂತೆ ಕೇಳಿದ್ದೆ. ಆದರೆ ಆತ ಒಪ್ಪಲಿಲ್ಲ. ಅಷ್ಟೇ ಅಲ್ಲ, ಅಲ್ಲಿ ಹೋದ ಮೇಲೆ ನನಗೆ ಫೋನ್ ಮಾಡಿ ನಿಂದಿಸಿದ್ದ. ಆತನಿಗೆ ಹಲವಾರು ಮಹಿಳೆಯರೊಂದಿಗೆ ಸಂಪರ್ಕವಿದೆ. ಟೀಂ ಇಂಡಿಯಾ ಎಲ್ಲೆಲ್ಲಿ ಪ್ರವಾಸ ಮಾಡುತ್ತದೋ ಅಲ್ಲೆಲ್ಲಾ ಕುಲದೀಪ್ ಎಂಬ ವ್ಯಕ್ತಿ ಶಮಿಗೆ ಹೆಣ್ಣುಗಳ ಪೂರೈಕೆ ಮಾಡುತ್ತಾನೆ. ಆದರೆ ಇದಕ್ಕೂ ಬಿಸಿಸಿಐಗೂ ಯಾವುದೇ ಸಂಬಂಧವಿಲ್ಲ ’ ಎಂದು ಹಸೀನ್ ಜಹಾನ್ ಮಾಧ್ಯಮಗಳ ಮುಂದೆ ಸ್ಪೋಟಕ ವಿಷಯ ಹೊರ ಹಾಕಿದ್ದಾರೆ. ಇದರಲ್ಲಿ ಎಷ್ಟು ಸತ್ಯವಿದೆಯೋ ಗೊತ್ತಿಲ್ಲ. ಆದರೆ ಕ್ರಿಕೆಟಿಗನ ವೃತ್ತಿ ಜೀವನಕ್ಕೆ ಶಾಶ್ವತ ಕಳಂಕ ಅಂಟಿಕೊಂಡಿರುವುದಂತೂ ಸತ್ಯ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಟೀಂ ಇಂಡಿಯಾ ಕ್ರಿಕೆಟಿಗರ ಜೇಬು ಇನ್ನೂ ಭಾರ!

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದ್ದು, ಪುರುಷ ...

news

ಟೀಂ ಇಂಡಿಯಾ ಕ್ರಿಕೆಟಿಗನಿಗೆ ಇದೆಲ್ಲಾ ಬೇಕಿತ್ತಾ?!

ಮುಂಬೈ: ಇದು ಎಷ್ಟು ಸತ್ಯವೋ, ಸುಳ್ಳೋ ಗೊತ್ತಿಲ್ಲ. ಆದರೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ತಮ್ಮ ಪತ್ನಿಗೆ ...

news

ನೋವಿನಲ್ಲೂ ಆಡಿ ದಾಖಲೆಯ ಮೊತ್ತ ಮಾಡಿದ ಆರ್ ಸಿಬಿ ಮಾಜಿ ಕ್ರಿಕೆಟಿಗ!

ಡುನೆಡಿನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದ ನ್ಯೂಜಿಲೆಂಡ್ ಕ್ರಿಕೆಟಿಗ ರಾಸ್ ಟೇಲರ್ ತೊಡೆ ...

news

ಎಲ್ಲಾ ಬಿಟ್ಟು ವಿರಾಟ್ ಕೊಹ್ಲಿಗೆ ಕೌಂಟಿ ಕ್ರಿಕೆಟ್ ಆಡಲು ಸಲಹೆ ಕೊಟ್ಟವರಾರು?

ಮುಂಬೈ: ವಿರಾಟ್ ಕೊಹ್ಲಿ ಇದೀಗ ವಿಶ್ವಶ್ರೇಷ್ಠ ಬ್ಯಾಟ್ಸ್ ಮನ್ ಎನ್ನುವುದರಲ್ಲಿ ಸಂಶಯವಿಲ್ಲ. ಈ ಯಶಸ್ವೀ ...

Widgets Magazine
Widgets Magazine