ರವೀಂದ್ರ ಜಡೇಜಾ ಸ್ಥಾನಕ್ಕೆ ಟೀಂ ಇಂಡಿಯಾಗೆ ಬಂದ ಹೊಸಬ

Colombo, ಗುರುವಾರ, 10 ಆಗಸ್ಟ್ 2017 (09:49 IST)

ಕೊಲೊಂಬೊ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಒಂದು ಟೆಸ್ಟ್ ಪಂದ್ಯಕ್ಕೆ ನಿಷೇಧ ಶಿಕ್ಷೆಗೊಳಗಾಗಿರುವ ರವೀಂದ್ರ ಜಡೇಜಾ ಸ್ಥಾನಕ್ಕೆ ಹೊಸಬರೊಬ್ಬರು ಟೀಂ ಇಂಡಿಯಾಗೆ ಸೇರ್ಪಡೆಯಾಗಿದ್ದಾರೆ.


 
ಆಗಸ್ಟ್ 12 ರಿಂದ ಕ್ಯಾಂಡಿಯಲ್ಲಿ ಆರಂಭವಾಗಲಿರುವ ತೃತೀಯ ಟೆಸ್ಟ್ ಗೆ ಗುಜರಾತ್ ಮೂಲದ  ಅಕ್ಸರ್ ಪಟೇಲ್ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಒಂದು ವೇಳೆ ಈ ಟೆಸ್ಟ್ ಪಂದ್ಯದಲ್ಲಿ ಪಟೇಲ್ ಆಡಿದರೆ ಇದು ಅವರ ಚೊಚ್ಚಲ ಟೆಸ್ಟ್ ಪಂದ್ಯವಾಗಲಿದೆ.
 
ಆದರೆ ಜಡೇಜಾ ಸ್ಥಾನದಲ್ಲಿ ಈಗಾಗಲೇ ತಂಡದಲ್ಲಿರುವ ಕುಲದೀಪ್ ಯಾದವ್ ಆಡುವ ಸಾಧ್ಯತೆ ಹೆಚ್ಚಿದೆ. ಯಾಕೆಂದರೆ, ಕುಲದೀಪ್ ಇದಕ್ಕೂ ಮೊದಲು ಭಾರತದಲ್ಲಿ ನಡೆದ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.
 
ಇದನ್ನೂ ಓದಿ… ಸಹ ಆಟಗಾರರನ್ನು ತಮಾಷೆ ಮಾಡಿದ ರೋಹಿತ್ ಶರ್ಮಾ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ರವೀಂದ್ರ ಜಡೇಜಾ ಅಕ್ಸರ್ ಪಟೇಲ್ ಕುಲದೀಪ್ ಯಾದವ್ ಟೀಂ ಇಂಡಿಯಾ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು ಭಾರತ-ಶ್ರೀಲಂಕಾ ಟೆಸ್ಟ್ ಸರಣಿ Ravindra Jadeja Axar Patel Kuldeep Yadav Team India Cricket News Sports News India-srilanka Test Series

ಕ್ರಿಕೆಟ್‌

news

ಸಹ ಆಟಗಾರರನ್ನು ತಮಾಷೆ ಮಾಡಿದ ರೋಹಿತ್ ಶರ್ಮಾ

ಕೊಲೊಂಬೊ: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಗಾಗಿ ದ್ವೀಪ ರಾಷ್ಟ್ರಕ್ಕೆ ತೆರಳಿರುವ ಟೀಂ ಇಂಡಿಯಾದ ಕೆಲವು ...

news

ಅನಿಲ್ ಕುಂಬ್ಳೆ ಬಾಕಿ ಚುಕ್ತಾ ಮಾಡಿದ ಬಿಸಿಸಿಐ

ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ಕರ್ತವ್ಯ ನಿಭಾಯಿಸಿದ್ದ ಅನಿಲ್ ಕುಂಬ್ಳೆಯ ವೇತನ ಬಾಕಿ ಹಣವನ್ನು ಬಿಸಿಸಿಐ ...

news

ನ್ಯಾಯ ಕೊಡಿಸಿ ಎಂದ ವೀರೇಂದ್ರ ಸೆಹ್ವಾಗ್

ನವದೆಹಲಿ: ದೇಶದ ಯಾವುದೇ ವಿಚಾರಗಳ ಬಗ್ಗೆ ಟ್ವೀಟರ್ ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದು ಮಾಜಿ ...

news

ಪಾಕ್ ಬಗ್ಗೆ ಏನೋ ಹೇಳಲು ಹೋಗಿ ಜಾಡಿಸಿಕೊಂಡ ಶೊಯೇಬ್ ಅಖ್ತರ್

ಕರಾಚಿ: ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ತಮ್ಮ ದೇಶದ ಬಗ್ಗೆ ಹೊಗಳಲು ಹೋಗಿ ಟ್ವಿಟರ್ ನಲ್ಲಿ ಸರಿಯಾಗಿ ...

Widgets Magazine