ಪಾಕಿಸ್ತಾನದ ಕ್ರಿಕೆಟಿಗ ಶಾಹಿದ್ ಆಫ್ರಿದಿ ಭಾರತದ ರಾಷ್ಟ್ರಧ್ವಜಕ್ಕೆ ಗೌರವ ನೀಡಿರುವ ವಿಡಿಯೋ ವೈರಲ್

ಸೇಂಟ್ ಮೊರಿಟ್ಜ್, ಸೋಮವಾರ, 12 ಫೆಬ್ರವರಿ 2018 (06:28 IST)

ಸೇಂಟ್ ಮೊರಿಟ್ಜ್: ಪಾಕಿಸ್ತಾನದ ಕ್ರಿಕೆಟಿಗ ಶಾಹಿದ್ ಆಫ್ರಿದಿ ಭಾರತದ ರಾಷ್ಟ್ರಧ್ವಜಕ್ಕೆ ಗೌರವ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಮೂಲಕ ಭಾರತೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ಫೆ.8 ರಂದು ಸೈಂಟ್ ಮೊರಿಟ್ಜ್ ನಗರದ ಸ್ಕಿ ರಿಸಾರ್ಟ್ ನಲ್ಲಿ ನಡೆದ ಐಸ್ ಕ್ರಿಕೆಟ್ ಟೂರ್ನಿಯೊಂದರಲ್ಲಿ ಪಂದ್ಯ ಮುಗಿದ ನಂತರ  ಅಫ್ರಿದಿ ಅಭಿಮಾನಿಗಳ ಬಳಿ ಬಂದು ಫೋಟೋಗಳಿಗೆ ಪೋಸ್ ನೀಡುತ್ತಿದ್ದರು. ಈ ವೇಳೆ ಭಾರತದ ಮಹಿಳಾ ಅಭಿಮಾನಿಯೊಬ್ಬರು ಕೈಯಲ್ಲಿ ತ್ರಿವರ್ಣ ಧ್ವಜವನ್ನು ಸರಿಯಾಗಿ ಹಿಡಿದುಕೊಳ್ಳದೇ ಇರುವುದನ್ನು ಗಮನಿಸಿದ ಅಫ್ರಿದಿ, ಧ್ವಜವನ್ನು ಬಿಡಿಸಿ ಎಂದು ಹೇಳಿದರು. ತಕ್ಷಣ ಆಕೆ ಧ್ವಜವನ್ನು ಬಿಡಿಸಿ ಅಫ್ರಿದಿ ಜೊತೆ ಫೋಟೋ ತೆಗೆಸಿಕೊಂಡರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಅಜರುದ್ದೀನ್, ಕ್ರಿಸ್ ಗೇಲ್ ದಾಖಲೆ ಪುಡಿಗಟ್ಟಿದ ವಿರಾಟ್ ಕೊಹ್ಲಿ

ವಾಂಡರರ್ಸ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಿನ್ನೆ ಕ್ರಿಕೆಟ್ ಲೋಕದ ಎರಡು ದಿಗ್ಗಜ ಆಟಗಾರರ ದಾಖಲೆ ...

news

ಅಪರೂಪದ ದಾಖಲೆಗೆ ಒಡೆಯನಾದ ಶಿಖರ್ ಧವನ್

ವಾಂಡರರ್ಸ್: ದ.ಆಫ್ರಿಕಾ ವಿರುದ್ಧ ನಾಲ್ಕನೇ ಪಂದ್ಯದಲ್ಲಿ ಶತಕ ಗಳಿಸಿದ ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ...

news

ಯಾವುದೇ ರಾಜಕೀಯವೂ ನನ್ನ, ಕೊಹ್ಲಿ ನಡುವಿನ ಸ್ನೇಹ ಹಾಳು ಮಾಡದು ಎಂದ ಪಾಕ್ ಕ್ರಿಕೆಟಿಗ

ಕರಾಚಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಸರಿ ಇಲ್ಲದೇ ಇರಬಹುದು. ಆದರೆ ರಾಜಕೀಯ ಕಾರಣಗಳಿಗಾಗಿ ಈ ...

news

ಕೊನೇ ಕ್ಷಣದಲ್ಲಿ ಕೇದಾರ್ ಜಾದವ್ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ಗೆ ನಾಯಕ ಕೊಹ್ಲಿ ಛಾನ್ಸ್ ಕೊಟ್ಟಿದ್ದೇಕೆ?

ಬೆಂಗಳೂರು: ಭಾರತ ಮತ್ತು ದ.ಆಫ್ರಿಕಾ ನಡುವಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ...

Widgets Magazine