‘ಟೀಂ ಇಂಡಿಯಾ ಕ್ರಿಕೆಟಿಗರಿಗೆ ರಜಾ ಕೊಡಿ’

ಮುಂಬೈ, ಭಾನುವಾರ, 10 ಸೆಪ್ಟಂಬರ್ 2017 (07:49 IST)

ಮುಂಬೈ: ಟೀಂ ಇಂಡಿಯಾ ಆಟಗಾರರು ಬಿಡುವಿಲ್ಲದೇ ಕ್ರಿಕೆಟ್ ಆಡುತ್ತಿದ್ದಾರೆ. ರಿಲ್ಯಾಕ್ಸ್ ಆಗಲು ಅವರಿಗೂ ಸ್ವಲ್ಪ ಬಿಡುವು ಕೊಡಿ.. ಹೀಗಂತ ಕೋಚ್ ರವಿಶಾಸ್ತ್ರಿ ಬಿಸಿಸಿಐಗೆ ಮನವಿ ಮಾಡಿದ್ದಾರೆ.


 
ಬಿಸಿಸಿಐ ಆಡಳಿತ ಮಂಡಳಿ ಸಭೆಯಲ್ಲಿ ಪಾಲ್ಗೊಂಡ ಅವರು ಆಟಗಾರರಿಗೆ ಎರಡು ಸರಣಿಗಳ ನಡುವೆ ಕೊಂಚ ಬಿಡುವು ಕೊಡಿ. ಇದರಿಂದ ಅವರಿಗೆ ಒತ್ತಡವೂ ತಪ್ಪುತ್ತದೆ ಎಂದು ಶಾಸ್ತ್ರಿ ಪ್ರತಿಪಾದಿಸಿದ್ದಾರೆ.
 
ಹಿಂದೆ ಅನಿಲ್ ಕುಂಬ್ಳೆ ಕೋಚ್ ಆಗಿದ್ದಾಗಲೂ ಆಟಗಾರರ ಸ್ಥಿತಿ ಸುಧಾರಣೆಗೆ ಹಲವು ಅಂಶಗಳನ್ನು ಆಡಳಿತ ಮಂಡಳಿಯ ಎದುರು ಇಟ್ಟಿದ್ದರು. ಮುಂಬರುವ ಆಸ್ಟ್ರೇಲಿಯಾ ಸರಣಿಯ ನಂತರ ಭಾರತ ಶ್ರೀಲಂಕಾ ವಿರುದ್ಧವೂ ತವರಿನಲ್ಲಿ ಕ್ರಿಕೆಟ್ ಸರಣಿ ಆಡಲಿದೆ.
 
ಅದಾದ ಒಂದೇ ವಾರದ ಅಂತರದಲ್ಲಿ ದ.ಆಫ್ರಿಕಾ ಪ್ರವಾಸ ಬೆಳೆಸಲಿದೆ. ಇದಕ್ಕೆ ಕೋಚ್ ಶಾಸ್ತ್ರಿ ಅಸಮಾಧಾನ ವ್ಯಕ್ತಪಡಿಸಿದ್ದು, ಇದರಿಂದ ಆಟಗಾರರು ಸುಸ್ತಾಗುತ್ತಾರೆ ಎಂದು ವಾದಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಲವ್ ಅಫೇರ್ ಬಗ್ಗೆ ಬಾಯ್ಬಿಟ್ಟ ಹಾರ್ದಿಕ್ ಪಾಂಡ್ಯ

ಮುಂಬೈ: ಬಾಲಿವುಡ್ ಬೆಡಗಿ ಪರಿಣಿತಿ ಚೋಪ್ರಾ ಮತ್ತು ಹಾರ್ದಿಕ್ ಪಾಂಡ್ಯ ನಡುವಿನ ರೊಮ್ಯಾಂಟಿಕ್ ಟ್ವಿಟರ್ ...

news

6 ವರ್ಷದ ಬಾಲಕಿ ಸಚಿನ್ ತೆಂಡುಲ್ಕರ್ ಗೆ ಬರೆದ ಪತ್ರ ಈಗ ವೈರಲ್

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಗೆ ಎಷ್ಟೋ ಆರಾಧಕರಿದ್ದಾರೆ. ಆದರೆ ಈ ಆರು ವರ್ಷದ ಬಾಲಕಿ ...

news

ಕೊಹ್ಲಿ ಇನ್ನೂ ಹತ್ತು ವರ್ಷ ಆಡೋದು ಗ್ಯಾರಂಟಿ!

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇನ್ನೆರಡು ತಿಂಗಳು ಕಳೆದರೆ 29 ನೇ ವಸಂತಕ್ಕೆ ...

news

ಕೊಹ್ಲಿ ಹಾಕಿದ ಆ ಒಂದು ಫೋಟೋ ನೋಡಿ ಖುಷಿಯಾದ ಪಾಕ್ ಅಭಿಮಾನಿಗಳು!

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶಿಕ್ಷಕರ ದಿನಾಚರಣೆ ದಿನ ತಮ್ಮ ಟ್ವಿಟರ್ ಪೇಜ್ ನಲ್ಲಿ ಹಾಕಿದ ...

Widgets Magazine