Widgets Magazine

ಕೋಚ್ ಗಿಂತಲೂ ಹೆಚ್ಚು ಕ್ರಿಕೆಟಿಗ ರಿಷಬ್ ಪಂತ್ ಫೋನ್ ನಲ್ಲಿ ಯಾರ ಜತೆಗೋ ಮಾತಾಡ್ತಾರಂತೆ!

ನವದೆಹಲಿ| Krishnaveni K| Last Modified ಶುಕ್ರವಾರ, 15 ಮಾರ್ಚ್ 2019 (09:23 IST)
ನವದೆಹಲಿ: ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಟೀಂ ಇಂಡಿಯಾದಲ್ಲಿ ಆಡುವಾಗ ಕೋಚ್, ನಾಯಕನ ಜತೆಗಿಂತಲೂ ಇನ್ನೊಬ್ಬರ ಜತೆಗೆ ಫೋನ್ ನಲ್ಲೇ ಹೆಚ್ಚು ಮಾತನಾಡುತ್ತಿರುತ್ತಾರಂತೆ!

 
ಹಾಗಂತ ಕೋಚ್ ರವಿಶಾಸ್ತ್ರಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ರಿಷಬ್ ಅಷ್ಟೊಂದು ಫೋನ್ ನಲ್ಲಿ ಮಾತನಾಡುವುದು ಯಾರ ಜತೆಗೆ ಗೊತ್ತಾ? ಬೇರೆ ಯಾರೂ ಅಲ್ಲ, ತಮ್ಮ ಹೀರೋ ಧೋನಿ ಜತೆಗೆ! ಒಂದು ವೇಳೆ ಧೋನಿ ತಂಡದಲ್ಲಿಲ್ಲ ಎಂದರೂ ರಿಷಬ್ ಫೋನ್ ಮೂಲಕವಾದರೂ ಸರಿ, ಧೋನಿ ಜತೆಗೆ ಮಾತನಾಡುತ್ತಲೇ ಇರುತ್ತಾರಂತೆ.
 
‘ಧೋನಿ ರಿಷಬ್ ಪಾಲಿನ ಹೀರೋ. ನಮಗಿಂತ ಹೆಚ್ಚು ಅವರು ಧೋನಿ ಇಲ್ಲದಿದ್ದರೂ ಅವರ ಜತೆಗೆ ಫೋನ್ ನಲ್ಲಿ ಮಾತನಾಡುತ್ತಿರುತ್ತಾರೆ. ಟೆಸ್ಟ್ ಸರಣಿ ಸಂದರ್ಭದಲ್ಲೂ ರಿಷಬ್ ನಮಗಿಂತ ಹೆಚ್ಚು ಧೋನಿ ಜತೆಯೇ ಫೋನ್ ನಲ್ಲಿ ಸಂಪರ್ಕದಲ್ಲಿದ್ದರು’ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
 
ಇತ್ತೀಚೆಗೆ ಏಕದಿನ ಸರಣಿಯಲ್ಲಿ ರಿಷಬ್ ಪ್ರದರ್ಶನ ಸಾಕಷ್ಟು ಟೀಕೆಗೊಳಗಾಗಿತ್ತು. ಧೋನಿಗೆ ಹೋಲಿಸಿ ಅವರನ್ನು ಟೀಕಿಸಿದ್ದಕ್ಕೆ ಕೋಚ್ ರವಿಶಾಸ್ತ್ರಿ ಈ ರೀತಿ ಅವರ ಪರವಾಗಿ ಮಾತನಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     
ಇದರಲ್ಲಿ ಇನ್ನಷ್ಟು ಓದಿ :