ಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನ ತಂಡಕ್ಕೆ ನೀಡಿದ ಆಹಾರವೇನೆಂದು ಶೊಯೇಬ್ ಅಖ್ತರ್ ಗೆ ತನಿಖೆ ಮಾಡಬೇಕಂತೆ!

Sydney, ಸೋಮವಾರ, 23 ಜನವರಿ 2017 (10:29 IST)

Widgets Magazine

ಸಿಡ್ನಿ: ಒಂದು ತಂಡ ಸೋತರೆ ಎಲ್ಲರೂ ಕ್ರಿಕೆಟ್ ಗೆ ಸಂಬಂಧಿಸಿದಂತೆ ಏನೇನೋ ಕಾರಣ ಹುಡುಕುತ್ತಾರೆ. ಆದರೆ ಮಾಜಿ ವೇಗಿ ಶೊಯೇಬ್ ಅಖ್ತರ್ ಮಾತ್ರ ತಮ್ಮ ತಂಡ ಆಸ್ಟ್ರೇಲಿಯಾದಲ್ಲಿಆಡಿದ ರೀತಿ ನೋಡಿ ಇದಕ್ಕೆಲ್ಲಾ ಅವರ ಆಹಾರವೇ ಕಾರಣ ಎಂದಿದ್ದಾರೆ. ಇದ್ಯಾವುದಪ್ಪಾ ಹೊಸತು ಎಂದುಕೊಂಡಿರಾ?
 

ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಏಕದಿನ ಪಂದ್ಯವನ್ನು ಪಾಕಿಸ್ತಾನ ಹೀನಾಯವಾಗಿ  ಸೋತಿತು. ಈ ಪಂದ್ಯದಲ್ಲಿ ಪಾಕ್ ಆಟಗಾರರ ಫೀಲ್ಡಿಂಗ್ ಗಲ್ಲಿ ಕ್ರಿಕೆಟಿಗರಿಗಿಂತ ಹೀನಾಯವಾಗಿತ್ತು. ಹಲವು ಸುಲಭ ಕ್ಯಾಚ್ ಗಳು ನೆಲ ಸೇರಿದ್ದರೆ, ಆಟಗಾರರು ಬಾಲ್ ಬೌಂಡರಿ ಗೆರೆಯತ್ತ ಸಾಗುವುದನ್ನು ನೋಡುತ್ತಾ ನಿಂತುಬಿಟ್ಟರು. ಇದೀಗ ಪಾಕ್ ಮಾಜಿ ವೇಗಿಯ ಕೆಂಗಣ್ಣಿಗೆ ಗುರಿಯಾಗಿದೆ.
 
ಹೀಗಾಗಿ ಮೊದಲು ಲಂಚ್ ಟೈಮ್ ನಲ್ಲಿ ಪಾಕ್ ಆಟಗಾರರು ಏನು ತಿಂದಿದ್ದಾರೆಂಬುದನ್ನು ತನಿಖೆ ಮಾಡಬೇಕು. ಎಣ್ಣೆ ಪದಾರ್ಥ ತಿಂದರಾ? ಬೆಣ್ಣೆ ತಿಂದರಾ? ಯಾಕೆ ಹೀಗೆ ಆಡಿದರು ಎಂದು ಸೂಕ್ತವಾಗಿ ತನಿಖೆ ಮಾಡಬೇಕು ಎಂದು ಅಖ್ತರ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಆಗ್ರಹಿಸಿದ್ದಾರೆ.  ಸೋತು ಸುಣ್ಣವಾಗಿರುವ ತಂಡಕ್ಕೆ ಆಯ್ಕೆಗಾರರ ಮುಖ್ಯಸ್ಥ ಆಟಗಾರರ ಸುಸ್ತು ಇದಕ್ಕೆಲ್ಲಾ ಕಾರಣ ಎನ್ನುತ್ತಿದ್ದರೆ, ಅಖ್ತರ್ ಆಹಾರವೇ ಕಾರಣ ಎನ್ನುತ್ತಿದ್ದಾರೆ, ಆದರೆ ಆಟ ಸುಧಾರಿಸಲು ದಾರಿಯೇನೆಂದು ಯಾರೂ ಹೇಳುತ್ತಿಲ್ಲ ಪಾಪ..
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಗೆಳತಿಯ ಖಾಸಗಿ ಫೋಟೋ ಫೇಸ್ ಬುಕ್ ನಲ್ಲಿ ಪ್ರಕಟಿಸಿ ಸಿಕ್ಕಿಬಿದ್ದ ಕ್ರಿಕೆಟಿಗ

ಬಾಂಗ್ಲಾದೇಶ ಕ್ರಿಕೆಟಿಗರಿಬ್ಬರು ಇತ್ತೀಚೆಗೆ ಹೋಟೆಲ್ ಕೊಠಡಿಗೆ ಚೆಲುವೆಯರನ್ನು ಕರೆಸಿಕೊಂಡು ...

news

ಕೇದಾರ್ ಜಾದವ್ ಕೂಲ್ ಆಗಿರಲು ಕಾರಣ ಯಾರು ಗೊತ್ತಾ?

ಭಾರತ ತಂಡದಲ್ಲಿ ಈಗ ಮತ್ತೊಬ್ಬ ಕೂಲ್ ಪ್ಲೇಯರ್ ನ ಉದಯವಾಗಿದೆ. ಅವರೇ ಯುವ ಆಲ್ ರೌಂಡರ್ ಕೇದಾರ್ ಜಾದವ್. ...

news

ಟೀಂ ಇಂಡಿಯಾ ಆಟಗಾರರಿಗೆ ಶಾರುಖ್ ಖಾನ್ ಸಿನಿಮಾ ಹೆಸರುಗಳು!

ವೀರೇಂದ್ರ ಸೆಹ್ವಾಗ್ ಟೀಂ ಇಂಡಿಯಾದ ಖ್ಯಾತ ಇಬ್ಬರು ಆಟಗಾರರನ್ನು ಕಾಡು ಪ್ರಾಣಿಗಳಿಗೆ ಹೋಲಿಸಿದ್ದಾಯ್ತು. ...

news

ನಾಯಕನಾಗಿ ಮೊದಲ ಸೋಲು ಕಂಡ ವಿರಾಟ್ ಕೊಹ್ಲಿ

ಇಂಗ್ಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯ ಸೋತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತವರಿನಲ್ಲಿ ಎಲ್ಲಾ ...

Widgets Magazine Widgets Magazine